HD Revanna: ಎಚ್‌ಡಿ ರೇವಣ್ಣರ 11 ದಿನ ಸೆರೆವಾಸ ಅಂತ್ಯ, ಟೆಂಪಲ್ ರನ್
ಬೆಂಗಳೂರು, ಮೇ 14: ಅತ್ಯಾಚಾರ ಆರೋಗಳನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಂದೆ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರು ಮಂಗಳವಾರ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆದರು.
ಮಹಿಳೆಯೊಬ್ಬರು ಅಪಹರಣ ಪ್ರಕರಣಕ್ಕೆ ಸಂಬಂಧಿಸಿಂದಂತೆ ಎರಡು ವಾರಗಳ ಹಿಂದೆ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವ ಮತ್ತು ಶಾಸಕ ಎಚ್‌ಡಿ ರೇವಣ್ಣ ಅವರನ್ನು ಬಂಧಿಸಿದ್ದರು. ತೀವ್ರಿ ವಿಚಾರಣೆಗೆ ಒಳಪಡಿಸಿ ನಾಲ್ಕು ದಿನ ನ್ಯಾಯಾಂಗ ಬಂಧನ, ನಂತರ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು.

ಪ್ರಕರಣ ಕುರಿತು ಜಾಮೀನು ನೀಡುವಂತೆ ಕೋರಿ ಎಚ್‌ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.
ಜಾಮೀನು ಮಂಜೂರು ಆದ ಬೆನ್ನಲ್ಲೆ ಇಂದು ಮಂಗಳವಾರ ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಎಚ್‌ಡಿ ರೇವಣ್ಣ ಬಿಡುಗಡೆ ಆದರು. ಇದರೊಂದಿಗೆ ಅವರ ಹನ್ನೊಂದು ದಿನಗಳ ಸೆರೆವಾಸ ಅಂತ್ಯ ಕಂಡಿದೆ. ಕೋರ್ಟ್ ಕೆಲವು ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಿದ ಬಳಿಕ ಅವರ ಬೆಂಬಲಿಗರಿಂದ ಸಂಭ್ರಮಾಚರಣೆ ನಡೆಯಿತು.
ಎಸ್‌ಐಟಿ ವಶದಿಂದ ಪರಪ್ಪನ ಕಾರಾಗೃಹಕ್ಕೆ ತೆರಳಿದ್ದ ಅವರು ಸುಮಾರು ಆರು ದಿನ ಕಾರಾಗೃಹದಲ್ಲಿ ಕಳೆದಿದ್ದಾರೆ. ಒಟ್ಟು ಅವರು ಬಂಧನವಾಗಿ ಹತ್ತೊಂದು ದಿನ ಕಳೆದಿವೆ. ಜೈಲಿಗೆ ಭೇಟಿ ನೀಡಿದ್ದ ಜಿಡಿ ದೇವೇಗೌಡ ಅವರ ಮುಂದೆ ರೇವಣ್ಣ ಕಣ್ಣೀರು ಹಾಕಿದ್ದಾರೆ.
ಮಹಿಳೆಯೊಬ್ಬರ ಅನ್ನು ಅಪಹರಿಸಿದ ಮೈಸೂರು ಜಿಲ್ಲೆಯಲ್ಲಿ ಆಪ್ತರ ಫಾರ್ಮ್‌ಹೌಸ್‌ನಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು, ಪೊಲೀಸರು ಆ ಮಹಿಳೆಯನ್ನು ಹುಡುಕಿ ಕರೆತರುತ್ತಿದ್ದಂತೆ ಎಚ್‌ಡಿ ರೇವಣ್ಣರನ್ನು ಬಂಧಿಸಲಾಯಿತು. ಇದೀಗ ಅವರಿಗೆ ಜಾಮೀನು ಸಿಕ್ಕಿದ್ದು, ಬಿಡುಗಡೆಯಾಗಿ ಕಾರಿನಲ್ಲಿ ಮನೆಗೆ ಮರಳಿದ್ದಾರೆ.
ಜಾಮೀನಿನಲ್ಲಿರುವ ಷರತ್ತುಗಳು ಏನು?
ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಷರತ್ತು ವಿಧಿಸಿದೆ. ರೇವಣ್ಣ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಕೋರ್ಟ್ ಲಿಖಿತ ಅನುಮತಿ ಇಲ್ಲದೇ ರಾಜ್ಯ ಬಿಟ್ಟು ಹೋಗುವಂತಿಲ್ಲ. ಐದು ಲಕ್ಷ ರೂಪಾಯಿ ವೈಯಕ್ತಿ ಬಾಂಡ್, ಇಬ್ಬರ ಭದ್ರತೆಯನ್ನು ಒದಗಿಸಬೇಕು. ನಾಶಮಾಡುವ ಪ್ರಯತ್ನ ಮಾಡಬಾರದು. ಸಂಸತ್ರಸ್ತರಿಗೆ ಬೆದರಿಕೆ ಹಾಕುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.
ಜೈಲುವಾಸ ಅನುಭವಿಸಿ ಹೊರ ಬರುತ್ತಿದ್ದಂತೆ ಎಚ್‌ಡಿ ರೇವಣ್ಣ ಅವರು ಟೆಂಪಲ್ ರನ್ ಮಾಡಿದ್ದಾರೆ. ತಂದೆ ತಾಯಿ ಆಶೀರ್ವಾದ ಪಡೆದು ಸಾಲು ಸಾಲು ದೇವಸ್ಥಾನಗಳಿಗೆ ತೆರಳಿದ್ದಾರೆ. ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.












Click it and Unblock the Notifications