ಕೆಣಕಿದರೆ ಹುಷಾರ್..! ಡಿಕೆಶಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್
ಬೆಂಗಳೂರು ಆಗಸ್ಟ್ 9: ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ 50ಕ್ಕೂ ಹೆಚ್ಚು ಕೇಸ್‌ಗಳು ಇವೆ ಎಂದು ಡಿಕೆ ಶಿವಕುಮಾರ್ ಹೇಳಿದ ಹೇಳಿಕೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾವ ಪ್ರಕರಣ ನನ್ನ ಮೇಲಿದೆ. ಯಾರು ನನ್ನ ಮೇಲೆ ಕೇಸ್ ಹಾಕಿದ್ದಾರೆ? ಸುಮ್ನೆ ಮಾತನಾಡುವುದಲ್ಲ. ಇದ್ದರೆ ಬಹಿರಂಗವಾಗಿ ಬರಲಿ. ಕೊಳ್ಳೆ ಹೊಡೆದು ಅವರು ಈಗ ಮಾತನಾಡುತ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ' ಎಂದು ಕಿಡಿ ಕಾರಿದರು.
ಇಂದು ಮೈಸೂರು ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರು ಆರೋಪಗಳ ಸುರಿ ಮಳೆಗೈದರು. ಅಲ್ಲದೆ ಅನೇಕ ವಿಡಿಯೋ ಕ್ಲಿಪ್‌ಗಳನ್ನು ವೇದಿಕೆ ಮೇಲೆ ಪ್ರಸಾರ ಮಾಡಲಾಯಿತು. ಈ ಹಿಂದೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಬೈದಾಡಿಕೊಂಡು, ಆರೋಪ ಮಾಡಿಕೊಂಡ ವಿಡಿಯೋಗಳ ತುಣುಕುಗಳನ್ನು ಪ್ರಸಾರ ಮಾಡಲಾಯಿತು.

ದೇವೇಗೌಡ ಹಾಗೂ ಕುಮರಾಸ್ವಾಮಿ ಅವರು ಕೊಟ್ಟ ಮಾತು ಉಳಿಸಿಕೊಂಡವರಲ್ಲ. ದ್ವೇಷ, ಸೇಡಿನ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ಇಂತಹ ಮನಸ್ಥಿತಿ ದೇವಗೌಡ ಹಾಗೂ ಅವರ ಕುಟುಂಬಸ್ಥರಿಗಿದೆ. ಅವರು ನಾವು ಮಾಡುವ ಉನ್ನತ ಕಾರ್ಯಗಳನ್ನು ಸಹಿಸುವುದಿಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ನೋಣ ಹುಡುಕಲು ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಸ್ಥರ ವಿಚಾರಕ್ಕೆ ಬಂದರೆ ನಾನು ಸುಮ್ಮನಿರಲ್ಲ ಎಂದು ಡಿಕೆ ಶಿವಕುಂಆರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಲ್ಲದೆ ಇದೇ ವೇದಿಕೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ 50ಕ್ಕೂ ಹೆಚ್ಚು ಕೇಸ್‌ಗಳು ಇವೆ. ಇವೆಲ್ಲಾ ಬಯಲು ಮಾಡುತ್ತೇನೆ. ಬಯಲಿಗೆ ತರುತ್ತೇನೆ ಎಂದು ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ಕೊಟ್ಟರು. ಇದೇ ಮಾತಿಗೆ ಪ್ರತಿಕ್ರಿಯೆ ನೀಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, 'ನೀವು ತುಂಬಾ ಖುಷಿ ಪಡೋದು ಬೇಡ. ನಿಮ್ಮಲ್ಲಿ ಬೀಳಿಸಬೇಕು ಎನ್ನುವುದು ಆಗಲೇ ನಿರ್ಣಯವಾಗಿದೆ. ನೀವು ಕಾದು ನೋಡಬೇಕು ಅಷ್ಟೇ. ಪೆನ್‌ಡ್ರೈವ್ ಇಟ್ಕೊಂಡು ಆಟ ಆಡಿದಂತಲ್ಲಾ. ನಿಮ್ಮಲ್ಲೂ ಲೋಪಗಳಿವೆ. ಅವೆಲ್ಲವೂ ಬಯಲಾಗುವ ಸಮಯ ಬರುತ್ತದೆ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ ಎಂದು ಕುಮಾರಸ್ವಾಮಿ ಡಿಕೆ ಶಿವಕುಮಾರ್‌ಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದರು.
ಇನ್ನೂ ಮೈಸೂರು ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

'ನನಗೆ ಆಸ್ತಿ ಮಾಡುವ ವ್ಯಾಮೋಹ ಇಲ್ಲ' ಸಿದ್ದರಾಮಯ್ಯ
ನನಗೆ ಆಸ್ತಿ ಮಾಡುವ ವ್ಯಾಮೋಹ ಬಂದಿಲ್ಲ. ನನ್ನ ಧರ್ಮಪತ್ನಿ ಪಾರ್ವತಿ ಯಾವತ್ತೂ ಸಾರ್ವಜನಿಕೆ ಸಭೆಗಳಿಗೂ ಬಂದಿಲ್ಲ. ಮಂತ್ರಿಯಾಗಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಬಂದಿಲ್ಲ. ಅಂತವರು ತಪ್ಪು ಮಾಡಲಿಕ್ಕೆ ಸಾಧ್ಯನಾ? ಈ ರಾಜ್ಯದ ಜನರಿಗೆ ದ್ರೋಹ ಮಾಡಲು ಸಾಧ್ಯನಾ? ಯಾವುತ್ತೂ ಮಾಡಿಲ್ಲ. ಮಾಡುವುದಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ದ್ರೋಹ ಮಾಡುವುದಿಲ್ಲ..
ಸಮಾಜದ ಶೋಷಿತರ ಪರವಾಗಿ ಸಮಾಜದಲ್ಲಿ ಅವರಿಗೆ ಶಕ್ತಿ ನೀಡುವ ಕೆಲಸ ಮಾಡುವ ಉದ್ದೇಶ ನನ್ನದು. ಅದನ್ನು ಬಿಟ್ಟರೆ ಆಸ್ತಿ ಮಾಡಬೇಕು ಎನ್ನುವ ವ್ಯಾಮೋಹ ನನಗಿಲ್ಲ. ನಾನು ಕೋರ್ಟ್‌ನಲ್ಲಿ ಲಾಯರ್ ಕೆಲಸ ಮಾಡಿಕೊಂಡು ಇದ್ದೆ. ಮೈಸೂರಿನ ಜನ ಬಂದು ಚುನಾವಣೆ ನಿಲ್ಲಬೇಕು ಅಂತ ಒತ್ತಾಯಿಸಿದ್ದರು. ನನ್ನ ಕ್ಲರ್ಕ್ ದುಡ್ಡು ಕೊಟ್ಟು ಚುನಾವಣೆಗೆ ನಿಲ್ಲಿಸಿದರು. ಇಡಿ ಚುನಾವಣೆಗೆ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದೆ. ಜನ ಚುನಾವಣೆಗೆ ಹಣ ಖರ್ಚು ಮಾಡಿ ನಿಲ್ಲಿಸಿದರು.












Click it and Unblock the Notifications