ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡುವುದು ಉತ್ತಮ: ಎಚ್‌ಡಿ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಮಾರ್ಚ್ 15: ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡಿದರೆ ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಬೇಕು. ಹಾಗಿದ್ದಾಗ ಮಾತ್ರ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲು ಸಾಧ್ಯ ಎಂದರು.

ಕರ್ನಾಟಕದಲ್ಲಿ ಕೊರೊನಾ ಭಯ: ಒಂದೇ ದಿನ 934 ಮಂದಿಗೆ ಸೋಂಕುಕರ್ನಾಟಕದಲ್ಲಿ ಕೊರೊನಾ ಭಯ: ಒಂದೇ ದಿನ 934 ಮಂದಿಗೆ ಸೋಂಕು

ರಾಜ್ಯದಲ್ಲಿ ಮೊದಲು 200 ರಿಂದ 300 ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಸಾವಿರದ ಹತ್ತಿರ ಬಂದು ನಿಂತಿದೆ. ಹೀಗಾಗಿ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಬಂದರೂ ಬರಬಹುದು ಎಂದು ಹೇಳಿದ್ದಾರೆ.

 HD Kumaraswamy Says Better To Lockdown Again In Karnataka

ನಾನು ಪ್ರತಿನಿತ್ಯ 600 ಕಿ.ಮೀ ಸಂಚರಿಸುತ್ತಿದ್ದೇನೆ, ಹೋದ ಕಡೆಗಳಲ್ಲಿ ಜನರು ಮುತ್ತಿಕೊಳ್ಳುತ್ತಾರೆ, ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರುತ್ತಾರೆ ಅವರನ್ನು ತಪ್ಪಿಸುವುದು ಕಷ್ಟ. ಹೀಗಾಗಿ ಕನಿಷ್ಠ ಪಕ್ಷ ಮಾಸ್ಕ್ ಆದರೂ ಧರಿಸಿ ಎಂದು ಹೇಳಿದ್ದೇನೆ ಎಂದರು.

ದೇವರ ಮೇಲೆ ಭಾರ ಹಾಕಿ ಸಂಚರಿಸುತ್ತಿದ್ದೇನೆ, ದೇವರ ದಯೆ ಸದ್ಯ ನಾವು ಉಳಿದುಕೊಂಡಿದ್ದೇವೆ, ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಜನರು ಜಾಗೃತರಾಗಬೇಕು ಎಂದರು.

ಕರ್ನಾಟಕದ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1 ಸಾವಿರದ ಸನ್ನಿಹಿತಕ್ಕೆ ಬರುತ್ತಿದೆ. ರಾಜ್ಯದಲ್ಲಿ ಒಂದೇ ದಿನ 934 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ.

Recommended Video

ಆರೋಗ್ಯ ತಜ್ಞರು ಕೋರೋನ ಬಗ್ಗೆ ಎನ್ ಹೇಳಿದಾರೆ ಗೊತ್ತಾ ?? | Oneindia Kannada

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 628 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 960272ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Former chief minister HD Kumaraswamy has suggested that it would be better to lockdown again in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X