ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆಟ್ರೋಲ್ ಬಾಟಲ್ ದಾಳಿ ಭಯೋತ್ಪಾದನಾ ಕೃತ್ಯ- ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಆ.10. ಪೊಲೀಸ್‌ ಸಿಬ್ಬಂದಿ ಮತ್ತು ಪೊಲೀಸ್‌ ಠಾಣೆಗಳ ಮೇಲೆ ಪೆಟ್ರೋಲ್‌ ತುಂಬಿದ ಬಾಟಲ್ ಬಳಸಿ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ)ಯ ಸೆಕ್ಷ ನ್‌ 15ರ ಪ್ರಕಾರ 'ಭಯೋತ್ಪಾದನಾ ಕೃತ್ಯ' ಆಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹಾಗೆ ಹೇಳುವ ಮೂಲಕ ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯ ಜಾಮೀನು ತಿರಸ್ಕರಿಸಿದೆ.

ಅಲ್ಲದೆ, ''ಪೊಲೀಸ್‌ ಠಾಣೆಯ ಮುಂದೆ ಉದ್ರಿಕ್ತ ಜನರು ಗುಂಪು ಗೂಡಿರುವುದು ಮತ್ತು ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ರಾಡ್‌, ಪೆಟ್ರೋಲ್‌ ತುಂಬಿದ ಬಾಟಲ್‌ಗಳು ಮತ್ತಿತರರ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು ಹಾಗೂ ಗಲಭೆ ಉಂಟು ಮಾಡುವುದೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಕೃತ್ಯಗಳೆನಿಸುತ್ತವೆ ''ಎಂದು ಹೇಳಿದೆ.

HC Rejeccted bail plea of Accused in Bengaluru DJ Halli KG halli riots

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿದ ಆರೋಪ ಸಂಬಂಧ ಎನ್‌ಐಎ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅತೀಕ್‌ ಅಹಮದ್‌ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾ.ಕೆ.ಸೋಮಶೇಖರ್‌ ಮತ್ತು ನ್ಯಾ.ಶಿವಶಂಕರ್‌ ಅಮರಣ್ಣವರ್‌ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಆರೋಪಪಟ್ಟಿಯಲ್ಲಿಉಲ್ಲೇಖಿಸಿರುವಂತೆ ಮೇಲ್ನೋಟಕ್ಕೆ ಆರೋಪಿಗಳು ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿಸೇರಿದ್ದರು ಎಂಬುದನ್ನು ನಿರೂಪಿಸುತ್ತದೆ ಎಂದು ಹೇಳಿದೆ.

ಯುಎಪಿಎ ಕಾಯಿದೆ ಸೆಕ್ಷನ್‌ 43ಡಿ(5) ಈ ಪ್ರಕರಣದಲ್ಲಿಸೂಕ್ತವಾಗಿ ಅನ್ವಯವಾಗುತ್ತದೆ. ಆರೋಪ ಪಟ್ಟಿಯಲ್ಲಿಉಲ್ಲೇಖಿಸಿರುವ ಅಂಶಗಳು ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ನಿಜ ಎನಿಸುತ್ತಿವೆ ಎಂದೂ ನ್ಯಾಯಾಲಯ ಹೇಳಿದೆ.

ಮೇಲ್ನೋಟಕ್ಕೆ ಸಾಕ್ಷ್ಯ:

ಅಲ್ಲದೆ, ಜಾಮೀನು ನಿಯಮ, ಅದರೆ ಜೈಲು ಅಪವಾದ ಎಂದು ಸಾಂಪ್ರದಾಯಿಕ ಚಿಂತನೆ ಮತ್ತು ಜಾಮಿನು ಅರ್ಜಿ ಪರಿಶೀಲನೆ ಮಾಡುವಾಗ ಆರೋಪ ದಂಡನಾ ಅಪರಾಧವೇ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಯುಎಪಿಎ ಕಾಯಿದೆ ಅಡಿ ಜಾಮೀನು ನೀಡುವಾಗ ಸೀಮಿತ ವ್ಯಾಪ್ತಿ ಇರುತ್ತದೆ. ಮೇಲ್ನೋಟಕ್ಕೆ ಸಾಕಷ್ಟು ದಾಖಲೆ ಇರುವುದು ಕಂಡು ಬಂದಿದ್ದು, ಅದನ್ನು ಸಮರ್ಥಿಸುವ ಅಂಶಗಳೂ ಇವೆ ಎಂದು ನ್ಯಾಯಪೀಠ ಆದೇಶದಲ್ಲಿತಿಳಿಸಿದೆ.

ಹೇಳಿಕೆಗಳಲ್ಲಿ ವ್ಯತ್ಯಾಸ;

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿಕೆಲವು ಸಾಕ್ಷಿಗಳು ನೀಡಿರುವ ಹೇಳಿಕೆಗಳೂ ಮತ್ತು ಅದೇ ಸಾಕ್ಷಿಗಳು ಸಿಸಿಬಿ ಮುಂದೆ ನೀಡಿದ್ದ ಹೇಳಿಕೆಗಳಲ್ಲೂವ್ಯತ್ಯಾಸವಿದೆ. ಎನ್‌ಎಎ ತನಗೆ ಹೇಗೆ ಬೇಕೋ ಹಾಗೆ ಸಾಕ್ಷಿಗಳ ಹೇಳಿಕೆಗಳನ್ನು ತಿರುಚಿದೆ. ಲಭ್ಯವಿರುವ ಸಾಕ್ಷ್ಯಗಳ ಪ್ರಕಾರ ಆರೋಪಿಗಳು ದೊಂಬಿ ಅಥವಾ ಗಲಭೆಯಲ್ಲಿಭಾಗವಹಿಸಿಲ್ಲ ಎಂದರು.

ಭಯೋತ್ಪಾದನಾ ಕೃತ್ಯ;

ಎನ್‌ಐಎ ಪರ ವಾದಮಂಡಿಸಿದ್ದ ವಿಶೇಷ ಪಬ್ಲಿಕ್‌ , ಯುಎಪಿಎ ಕಾಯಿದೆ ಸೆಕ್ಷನ್‌ 43ಡಿ(5)ರಡಿ ಕೇಸ ಡೈರಿ ಮತ್ತು ಅಂತಿಮ ವರದಿಯನ್ನು ಆಧರಿಸಿ ಆರೋಪಿಗಳ ಮನವಿಯ ಕುರಿತು ನಿರ್ಧರಿಸಬಹುದು. ಮೇಲ್ನೋಟಕ್ಕೆ ಆರೋಪಿಗಳು ಗುಂಪು ಸಭೆ ಭಯೋತ್ಪಾದನಾ ಕೃತ್ಯವೆಸಗಲು ಮುಂದಾಗಿರುವುದು ದೃಢಪಟ್ಟಿದೆ, ಅದು ಯುಎಪಿಎ ಕಾಯಿದೆ ಸೆಕ್ಷನ್‌ 2(1)(ಎ) ಮತ್ತು ಸೆಕ್ಷನ್‌ 2(1)(ಕೆ) ವ್ಯಾಪ್ತಿಗೆ ಒಳಪಡುತ್ತದೆ. ಜೊತೆಗೆ ಸೆಕ್ಷ ನ್‌ 15ರ ಪ್ರಕಾರ 'ಭಯೋತ್ಪಾದನಾ ಕೃತ್ಯ' ಎಸಗುವ ಉದ್ದೇಶದಿಂದಲೇ ಮಾರಕ ಅಸ್ತ್ರಗಳನ್ನು ಹೊಂದಿರುವುದು ಕಂಡುಬಂದಿದೆ ಎಂದರು.

Recommended Video

ಒಂದು ಗುಂಡು ತನ್ನ ತಲೆಗೆ ತಾನೇ ಹಾರಿಸಿಕೊಂಡುರು |The Legend Chandrashekar Aazad |indian freedom fighters | Oneindia Kannada

English summary
Attack on police station by petrol bottle amounts terror act, HC ruled, Rejeccted bail plea of Accused in DJ Halli KG halli riots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X