ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಭ್ರೂಣ ತೆಗೆಯಲು ಹೈಕೋರ್ಟ್ ಸಮ್ಮತಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 06: ಅತ್ಯಾಚಾರಕ್ಕೊಳಗಾಗಿ ಅಪ್ರಾಪ್ತೆಯೊಬ್ಬಳ ಹೊಟ್ಟೆಯಲ್ಲಿರುವ 22 ವಾರಗಳ ಭ್ರೂಣವನ್ನು ತೆಗೆಯಲು ಹೈಕೋರ್ಟ್ ಅನುಮತಿ ನೀಡಿದೆ.

ಅಪ್ರಾಪ್ತೆ ಮೂಲತಃ ದಾವಣಗೆರೆಯವಳು, ಪ್ರಾಪ್ತೆಯ ಪೋಷಕರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಅವರ ಏಕ ಸದಸ್ಯ ಪೀಠ, ಆಪ್ರಾಪ್ತೆಯ ಗರ್ಭಪಾತಕ್ಕೆ ಅನುಮತಿ ನೀಡಿದೆ.

ಇದಕ್ಕೂ ಮೊದಲು ಪ್ರಕರಣ ಸಂಬಂಧ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಲ್ಲಿಕೆ ಮಾಡಿದ್ದ ವರದಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.

ಭ್ರೂಣವಿದ್ದ ಬ್ಯಾಗಿನೊಂದಿಗೆ ಬಂದು ದೂರು ನೀಡಿದ ಅತ್ಯಾಚಾರ ಸಂತ್ರಸ್ತೆ ಭ್ರೂಣವಿದ್ದ ಬ್ಯಾಗಿನೊಂದಿಗೆ ಬಂದು ದೂರು ನೀಡಿದ ಅತ್ಯಾಚಾರ ಸಂತ್ರಸ್ತೆ

HC allows rape survivor, 16, to terminate 22 weeks fetus

ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಆ ಅಪ್ರಾಪ್ತೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಆಕೆಯ ಗರ್ಭದಲ್ಲಿರುವ ಭ್ರೂಣವನ್ನು ತೆಗೆದು ಹಾಕಬೇಕು. ಆಕೆ ಸಂಪೂರ್ಣವಾಗಿ ಚೇತರಿಕೆ ಕಂಡ ಬಳಿಕ ಊರಿಗೆ ಕಳುಹಿಸಬೇಕು,' ಎಂದು ನ್ಯಾಯಾಲಯ ಆದೇಶಿಸಿದೆ.

ಅಲ್ಲದೆ 'ಆಕೆಯ ಹೊಟ್ಟೆಯಿಂದ ತೆಗೆಯುವ ಭ್ರೂಣವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಿದ್ದು, ಹೀಗಾಗಿ ಆಸ್ಪತ್ರೆ ಸುರಕ್ಷಿತವಾಗಿ ಭ್ರೂಣವನ್ನು ಸಂರಕ್ಷಿಸಬೇಕು. ನಂತರ ದಾವಣಗೆರೆ ಮಹಿಳಾ ಪೊಲೀಸಧಿರು ಆ ಭ್ರೂಣ ಪಡೆದು ಹೈದರಾಬಾದ್‌ನಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಅದು ಎರಡು ತಿಂಗಳಲ್ಲಿ ತನಿಖಾಧಿಕಾರಿಗೆ ವರದಿಯನ್ನು ಕೊಡಬೇಕು. ಈ ಕೆಲಸಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ ಎಂದೂ ನ್ಯಾಯಾಧೀಶರು ಆದೇಶಿಸಿದ್ದಾರೆ. ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿ 26 ವಾರ ಕಳೆದಿದ್ದರೂ ಅಂತಹ ಪ್ರಕರಣಗಳಲ್ಲಿ ಭ್ರೂಣ ತೆಗೆಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ.

HC allows rape survivor, 16, to terminate 22 weeks fetus

ಆದರೆ ಈ ಪ್ರಕರಣದಲ್ಲಿ ಆಕೆ ಗರ್ಭಧರಿಸಿ 22 ವಾರಗಳಾಗಿವೆ. ಜೊತೆಗೆ ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಸಲ್ಲಿಸಿರುವ ವರದಿ ಕೂಡ ಭ್ರೂಣವನ್ನು ತೆಗೆಯಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದೆ. ಹಾಗಾಗಿ ಈ ಆದೇಶ ನೀಡುತ್ತಿರುವುದಾಗಿ ನ್ಯಾಯಾಧೀಶರಾದ ರಾಘವೇಂದ್ರ ಚೌವ್ಹಾಣ್ ಅವರು ಹೇಳಿದ್ದಾರೆ.

English summary
The High court has permitted a 16-year-old rape survivor from Davanagere district to terminate her 22 week pregnancy. The court noted in itsorder that the child was conceived during rape, and the girl does not wish to continue with the pregnancy in a similar case, where the fetus was 26 weeks old.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X