CJ Roy: ಸಿಜೆ ರಾಯ್ ಸಾವಿಗೆ ಕುರಿಗಾಯಿ ಹನುಮಂತ ಲಮಾಣಿ ಸಂತಾಪ, ಉದ್ಯಮಿ ಸಹಾಯ ನೆನೆದು ಕಣ್ಣೀರು
ಬೆಂಗಳೂರು: ರಾಜಧಾನಿಯಲ್ಲಿ ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಡಾ.ಸಿ.ಜೆ.ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ಬಿಗ್ ಬಾಗ್ ಕನ್ನಡ 11ರ ವಿನ್ನರ್, ಉತ್ತರ ಕರ್ನಾಟಕದ ಪ್ರತಿಭೆ ಕುರಿಗಾಯಿ ಹನುಮಂತ ಲಮಾಣಿ ಅವರು ಸಂತಾಪ ಸೂಚಿಸಿದ್ದಾರೆ. ಹನುಮಂತ ಅವರು ಬಿಗ್ ಬಾಸ್ ವಿನ್ ಆಗಿದ್ದ ಸಂದರ್ಭದಲ್ಲಿ ಇದೇ ರಾಯ್ ಅವರು 50 ಲಕ್ಷ ರೂಪಾಯಿ ಹಣ ನೀಡಿದ್ದರು. ಅಂದಿನ ದಿನ ನೆನಪಿಸಿಕೊಂಡಿರುವ ಹನುಮಂತ ಅವರ ಸಂತಾಪ ಸೂಚಿಸಿದ್ದಾರೆ.
ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಸಿ.ಜೆ. ರಾಯ್ ಅವರು ಸಿನಿಮಾ ರಂಗಕ್ಕೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದವರು. ಅಂತವರು ಆತ್ಮಹತ್ಯೆ ಮಾಡಿಕೊಂಡಿರುವುದು ಜನರಲ್ಲಿ 'ಕೋಟ್ಯಾಧಿಪತಿಗಳಾದರೂ ಸಹಿತ ನೆಮ್ಮದಿ ಇಲ್ಲದ ಜೀವನ ಶೂನ್ಯ' ಎಂಬ ಭಾವನೆ ಮೂಡಿಸಿದೆ. ಈ ಕೋಟ್ಯಾಧಿಪತಿ ಬಿಗ್ ಬಾಸ್ 11 ಕನ್ನಡ ರಿಯಾಲಿಟಿ ಶೋಗೆ 50 ಲಕ್ಷ ರೂಪಾಯಿ ನೀಡಿದ್ದರು.

ಹನುಮಂತ ಲಮಾಣಿ ಸಂತಾಪ, ಪೋಸ್ಟ್‌ನಲ್ಲಿ ಏನಿದೆ?
ಕನ್ನಡದ ಸರಿಗಮಪ 15ರ ಶೋನ ರನ್ನರ್ ಅಪ್ ಆಗಿದ್ದ ಗಾಯಕ ಹನುಮಂತ ಲಮಾಣಿ ಬಿಗ್ ಬಾಸ್ 11ಕನ್ನಡ ರಿಯಾಲಿಟಿ ಶೋನಲ್ಲಿ ಗೆದ್ದಿದ್ದರು. ಅವರ ಸರಳತೆ, ಗಾಯನದಲ್ಲಿನ ಪ್ರತಿಭೆ ಗುರುತಿಸಿದ್ದ ಡಾ.ರಾಯ್ ಅವರು ಆರ್ಥಿಕ ಸಹಾಯ ಮಾಡಿದ್ದರು. ಅಂದಿನ ವೇದಿಕೆಗೆ ಬಂದು 50 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಅದನ್ನು ನೆನೆದು ಹನುಮಂತ ಭಾವುಕ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
'ತುಂಬಾ ದುಃಖಕರ ಸಂಗತಿ. ಸರಿಗಮಪ ಸೀಸನ್ 15ರಲ್ಲಿ ರನ್ನರ್ ಅಪ್ ಅದ ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದರು. ಬಿಗ್ ಬಾಸ್ ಸೀಸನ್ 11 ಗೆದ್ದಾಗಲೂ ಸಂಭ್ರಮಿಸಿ ಹಣ ನೀಡಿದ್ದರು. ನೀವು ಮತ್ತು ನಿಮ್ಮ ಋಣ ವನ್ನ ಯಾವತ್ತು ಮರಿಯೋಕೆ ಸಾಧ್ಯವಿಲ್ಲ. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ' ಮಿಸ್ ಯೂ ಸರ್... ಎಂದು ಒಡೆದ ಹಾರ್ಟ್ ಎಮೋಜಿ ಹಾಕಿ ಸಂತಾಪ ಸೂಚಿಸಿ, ಭಾವುಕವಾಗಿ ಹನುಮಂತ ಬರೆದುಕೊಂಡಿದ್ದಾರೆ.
ಪ್ರತಿ ಅವಕಾಶ ಸಮರ್ಥ ಬಳಕೆ
ಹನುಮಂತ ಲಮಾಣಿ ಉತ್ತರ ಕರ್ನಾಟಕದ ಪ್ರತಿಭೆಯಾಗಿದ್ದು, ಕುರಿ ಮೇಯಿಸುತ್ತಲೇ ಜಾನಪದ ಹಾಡುಗಳನ್ನು ಅತ್ಯಂತ ಸೊಗಸಾಗಿ ಹಾಡಿದವರು. ಅದರಿಂದಲೇ ಅವರಿಗೆ ಸರಿಗಮಪ ಶೋ ನಲ್ಲಿ ಅವಕಾಶ ಸಿಕ್ಕಿತ್ತು. ಅಲ್ಲಿಂದ ಬಿಗ್ ಬಾಸ್‌ಗೆ ತೆರಳಿದರು. ಒಂದಷ್ಟು ಕಾಮಿಡಿ ಶೋಗಳಲ್ಲಿ ಸಹ ಕಾಣಿಸಿಕೊಂಡರು. ಸಿಕ್ಕ ಪ್ರತಿ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಅವರ ಸರಳ ವ್ಯಕ್ತಿತ್ವ, ಮಾತುಗಳು, ಹಾಡುಗಳು ಸಿ.ಜೆ. ರಾಯ್ ಅವರಿಗೆ ತುಂಬ ಇಷ್ಟವಾಗಿದ್ದವು. ಹೀಗಾಗಿ ಅವರು ಆರ್ಥಿಕ ಸಹಾಯ ಮಾಡಿದ್ದರು. ಇಂದು ಅದೆಲ್ಲವನ್ನು ಹನುಮಂತ ನೆನಪಿಸಿಕೊಂಡಿದ್ದಾರೆ.












Click it and Unblock the Notifications