ಕೆರಗೋಡು ಮತ್ತು ಇತರ ಗ್ರಾಮಗಳ ಎಲ್ಲಾ ಮನೆಗಳ ಮೇಲೆ ಹನುಮ ಧ್ವಜಾರೋಹಣಕ್ಕೆ ಬಿಜೆಪಿ ಕರೆ
ಮೈಸೂರು, ಫೆಬ್ರವರಿ 01: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದೆ. ವಿವಾದಕ್ಕೆ ಕಾರಣವಾದ ಕೆರಗೋಡು ಮತ್ತು ಅದರ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿನ ಗ್ರಾಮಸ್ಥರನ್ನು ಅವರ ಎಲ್ಲಾ ಮನೆಗಳ ಮೇಲೆ ಹನುಮ ಧ್ವಜವನ್ನು ಹಾರಿಸುವಂತೆ ಕರೆ ನೀಡಿದೆ.
ಈಗಾಗಲೇ ಹಲವು ಹಳ್ಳಿಗಳ ಮನೆಗಳು ಬಾವುಟ ಹಾರಿಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಹೀಗೆ ಎಲ್ಲ ಆಮನೆಗಳ ಮೇಲೂ ಧ್ವಜ ಹಾರಿಸಬೇಕು ಎಂದು ಬಿಜೆಪಿ ನಿರ್ಧರಿಸಿದ್ದು, ತನ್ನ ಕಾರ್ಯಕರ್ತರ ಮೂಲಕ ಕೆಲಸ ಮಾಡಿಸುತ್ತಿದೆ. ಇನ್ನು, ಬುಧವಾರ, ಬಿಜೆಪಿ ಮುಖಂಡರ ನಿಯೋಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿ ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಆರೋಓಗ್ಯ ವಿಚಾರಿಸಿದೆ.

ಇನ್ನು, ಈ ಹನುಮ ಧ್ವಜ ಆಂದೋಲನದ ಮುಂದಿನ ರೂಪುರೇಷೆಗಳನ್ನು ಯೋಜಿಸಲು ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ಪ್ರತಿಭಟನೆಯ ವೇಳೆ ಕಾಂಗ್ರೆಸ್ ಮುಖಂಡರ ಪ್ರಚಾರದ ವಸ್ತುಗಳಿಗೆ ಹಾನಿ ಮಾಡಿದ್ದಕ್ಕಾಗಿ ಒಂಬತ್ತನೇ ತರಗತಿಯ ವಿದ್ಯಾರ್ಥಿ, ಅಪ್ರಾಪ್ತನನ್ನು ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಹೋಗಿರುವುದನ್ನು ಜಿಲ್ಲಾ ಪಕ್ಷದ ಅಧ್ಯಕ್ಷ ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ ಮತ್ತು ಇತರರನ್ನು ಒಳಗೊಂಡ ಬಿಜೆಪಿ ನಿಯೋಗ ಟೀಕಿಸಿದೆ.
ಈ ಬಿಜೆಪಿ ನಿಯೋಗ ಬಾಲಕನ ಮನೆಗೆ ತಲುಪಿದಾಗ, ಅವನ ತಂದೆ ಪಾಪಣ್ಣ ಬಾಗಿಲು ಮುಚ್ಚಿ, ಕುಟುಂಬಕ್ಕೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಹೇಳಿ ನಾಯಕರನ್ನು ಹೊರಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಜಿಲ್ಲಾ ಪಕ್ಷದ ಅಧ್ಯಕ್ಷ ಇಂದ್ರೇಶ್ ಅವರಿಗೆ ಸಾಂತ್ವನ ಹೇಳಿ ಕುಟುಂಬದವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಪೊಲೀಸರು ಮುಗ್ಧ ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಗ್ರಾಮಸ್ಥರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಆದರೆ ಅಧಿಕಾರಿಗಳಿಗೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲು ಸಮಯವಿಲ್ಲ. ಕಾಂಗ್ರೆಸ್ ಸರ್ಕಾರವು ಬ್ರಿಟಿಷರ ರಾಜ್ ಆಗಿ ಮಾರ್ಪಟ್ಟಿದೆ, ಅಪ್ರಾಪ್ತ ಬಾಲಕನನ್ನು ವಿಚಾರಣೆಗೆ ಒಳಪಡಿಸಿ, ಮಹಿಳೆಯರು ಮತ್ತು ಮಕ್ಕಳನ್ನು ಚಿಂತೆಗೀಡು ಮಾಡಿದೆ. ಗ್ರಾಮಸ್ಥರು, ಪಂಚಾಯಿತಿ ಸದಸ್ಯರು ಮತ್ತು ಗೌರಿಶಂಕರ್ ಸೇವಾ ಟ್ರಸ್ಟ್ ಸದಸ್ಯರ ಮಾತುಗಳನ್ನು ಕೇಳಿದ್ದೇವೆ ಎಂದು ಅಶೋಕ್ ಜೈರಾಮ್ ಹೇಳಿದರು. ಪೊಲೀಸರು ಗ್ರಾಮಸ್ಥರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌರಿಶಂಕರ ಸೇವಾ ಟ್ರಸ್ಟ್ ಸದಸ್ಯ ಆನಂದ್ ಅವರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್," 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮಾನ್ ಧ್ವಜಾರೋಹಣಕ್ಕೆ ಗ್ರಾಮದ ಎಲ್ಲಾ ನಿವಾಸಿಗಳು ಬೆಂಬಲ ನೀಡಿದ್ದರು, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ವಿಭಜಿಸುತ್ತಿವೆ. ಜಿಲ್ಲಾಡಳಿತವು ಧ್ವಜಸ್ತಂಭದ ಗಾತ್ರಕ್ಕೆ ಅನುಗುಣವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಧ್ವಜ ಸಂಹಿತೆಯನ್ನು ಉಲ್ಲಂಘಿಸಿದೆ" ಎಂದು ತಿಳಿಸಿದ್ದಾರೆ.
ಕೆರಗೋಡಿನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಲು ಸಿದ್ದರಾಮಯ್ಯ ಅವರನ್ನು 101 ಎತ್ತುಗಳ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿದ್ದೆವು. ಆದರೆ ಅವರು ಕೆರಗೋಡನ್ನು ಮರೆತಿದ್ದಾರೆ. ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ ಲೋಪ ಸರಿಪಡಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ನಾವು ಬಯಸುತ್ತೇವೆ. ನಾವು ನ್ಯಾಯ ಮತ್ತು ಶಾಂತಿಯನ್ನು ಬಯಸುತ್ತೇವೆ ಎಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications