ಸಿಲಿಕಾನ್ ಸಿಟಿಯಲ್ಲಿ ಬೇಸಿಗೆ ಮಳೆಯ ಅವಾಂತರ: ಆಸ್ತಿ-ಪಾಸ್ತಿ ಹಾನಿ

ಬೆಂಗಳೂರು ಏಪ್ರಿಲ್ 15: ಕಳೆದ ಎರಡು ದಿನಗಳಿಂದ ಭಾರೀ ಮಳೆಗೆ ಸಿಲಿಕಾನ್‌ಸಿಟಿಯಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಹಾನಿಯಾಗಿದೆ. ಮನೆಗೆ ನೀರು ನುಗ್ಗಿ ಬೆಂಗಳೂರಿನ ಜನ ನಿದ್ದೆ ಇಲ್ಲದೆ ಜಾಗರಣೆ ಮಾಡಿದ್ದಾರೆ. ಬೆಂಗಳೂರಿನ ಹಲವಾರು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ.

ಎರಡು ದಿನ ಸುರಿದ ಅಧಿಕ ಮಳೆಗೆ ಕಾಮಾಕ್ಯ ಲೇಔಟ್‌ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಇದು ತಗ್ಗು ಪ್ರದೇಶದಲ್ಲಿರುವುದರಿಂದ ಅಧಿಕ ಮಳೆಗೆ ಚರಂಡಿ ನೀರು ಮಿಶ್ರಿತ ನೀರು ಮನೆಗಳಿಗೆ ನುಗ್ಗಿ ಮನೆ ವಸ್ತುಗಳು ನೀರು ಪಾಲಾಗಿವೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮನೆ ಮಾಲೀಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾತ್ರಿ ಇಡೀ ನಿದ್ದೆ ಇಲ್ಲದೇ ಕುಳಿತುಕೊಳ್ಳವಂತ ಪರಿಸ್ಥಿತಿ ಎದುರಾಗಿದೆ. ನಲವತ್ತಕ್ಕೂ ಹೆಚ್ಚು ಕಾರುಗಳು ಬೈಕ್‌ಗಳು ಆಟಿಕೆಗಳಂತೆ ಮಳೆ ನೀರಿನಲ್ಲಿ ತೇಲಾಡಿವೆ. ಮೂರು ನಾಯಿಗಳು ಮೃತವಾಗಿವೆ.

ಇನ್ನೂ ಕಾಮಾಕ್ಯ ಥಿಯೇಟರ್ ಗೆ ಕೆಜಿಎಫ್ ಸಿನಿಮಾ ನೋಡಲು ಬಂದ ದಂಪತಿಯ ಕಾರು ಮಳೆ ನೀರಿನಲ್ಲಿ ತೇಲಿ ಹೋದ ಘಟನೆ ನಡೆದಿದೆ. ರಸ್ತೆ ಪಕ್ಕದ ನರ್ಸರಿ ಗಿಡಗಳಿಗೆ ನೀರು ನುಗ್ಗಿ ಸಾವಿರಾರು ಗಿಡಗಳು ಹಾಳಾಗಿವೆ. ಇನ್ನೂ ರಸ್ತೆ ಪಕ್ಕದ ಜಿಮ್ ಗೂ ಮಳೆ ನೀರು ನುಗ್ಗಿ ಇಂದು ಮಳೆ ನೀರು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ.

Haevy Rain in Bangalore: Property damage

ಇನ್ನೂ ಈ ಬಗ್ಗೆ ಮಾತನಾಡಿದ ಸ್ಥಳೀಯರು, 'ಟ್ಯಾಕ್ಸ್ ಕೇಳೋಕೆ ಮಾತ್ರ ಅಧಿಕಾರಿಗಳು ಬರುತ್ತಾರೆ. ಆದರೆ ಯಾರೂ ಕೂಡ ಇಂಥಹ ಸಂದರ್ಭದಲ್ಲಿ ಕರೆ ಸ್ವೀಕರಿಸುವುದಿಲ್ಲ' ಎಂದು ಕಿಡಿ ಕಾರಿದ್ದಾರೆ. ಹಾವು ಬಂದಿದೆ ಎಂದು ಕರೆ ಮಾಡಿದರೆ ಮೂರು ಸಾವಿರ ಕೇಳ್ತಾರೆ ಎಂದು ಗರಂ ಆಗಿದ್ದಾರೆ.

ಉತ್ತರಹಳ್ಳಿ ಪರಿಸ್ಥಿತಿ ಹೇಳತೀರದಾಗಿದೆ. ಚಾಮರಾಜಪೇಟೆಯಲ್ಲಿ ಬೃಹತ್ ಮರ ಧರಗೆ ಉರುಳಿದೆ. ವಿದ್ಯಾಪೀಠದಲ್ಲಿ ಹೆಚ್ಚು ಮಳೆಯಾಗಿದ್ದು ಕಾರ್ಮಿಕ ಬಂಡಿಗಳು ನೀರು ಪಾಲಾಗಿವೆ. ಎಲ್ಲಲ್ಲಿ ಎಷ್ಟು ಮಳೆಯಾಗಿದೆ ನೋಡಿ

Haevy Rain in Bangalore: Property damage

ವಿದ್ಯಾಪೀಠದಲ್ಲಿ 3.7ಸೆ.ಮಿ

ಮೈಸೂರು ರಸ್ತೆ 3.7 ಸೆ.ಮಿ

ಸಂಪಗಿರಾಮನಗರ 4.9 ಸೆ.ಮಿ

ಅಂಜನಾಪುರ 3.6ಸೆ.ಮಿ

ವಿವಿ ಪುರಂ 4.5ಸೆ.ಮಿ

ಬೊಮ್ಮನಳ್ಳಿ 4.2ಸೆ.ಮಿ

ಆರ್.ಆರ್ ನಗರ 4.4ಸೆ.ಮಿ

ಕೋರಮಂಗಲ 3.4ಸೆ.ಮಿ

ಬೆಳ್ಳಂದೂರು4ಸೆ.ಮಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+