• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರೋನಾ ಕಷ್ಟ: ಕೋವಿ ತಯಾರಿಸಿ ಅಕ್ರಮ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಸೆರೆ

|

ಬೆಂಗಳೂರು ಫೆಬ್ರವರಿ 19: ಕೋವಿ ರಿಪೇರಿ ಮಾಡುತ್ತಿದ್ದ ವ್ಯಕ್ತಿ ಕರೋನಾ ಹೊಡೆತಕ್ಕೆ ಸಿಲುಕಿ ಬಂದೂಕು ತಯಾರಿಸಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ರಾಮನಗರ ಮೂಲದ ಲಿಂಗಾಚಾರಿ ಬಂಧನಕ್ಕೆ ಒಳಗಾದ ಆರೋಪಿ. ಬಂಧಿತ ಆರೋಪಿಯಿಂದ ಹನ್ನೊಂದು ನಾಡ ಬಂದೂಕು, ಐದು ಮರದ ಬಟ್, ಕಬ್ಬಿಣದ ಬ್ಯಾರಲ್ ಕೊಳವೆಗಳು ಟ್ರಿಗರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂದೂಕು ರಿಪೇರಿ ಮಾಡುತ್ತಿದ್ದ ಲಿಂಗಾಚಾರಿ 2017 ರ ವರೆಗೂ ಪರವಾನಗಿ ಹೊಂದಿದ್ದರು. ರಿಪೇರಿ ಮಾಡುವ ಮೂಲಕವೇ ಕೋವಿ ತಯಾರಿಸುವ ಕಲೆ ಕರಗತ ಮಾಡಿಕೊಂಡಿದ್ದರು. ಕುಡಿತದ ಚಟಕ್ಕೆ ಬಿದ್ದಿದ್ದರು. ಕರೋನಾ ಹೊಡೆತ ಬಳಿಕ ಯಾವುದೇ ಕೋವಿ ರಿಪೇರಿಗೆ ಬರುತ್ತಿರಲಿಲ್ಲ. ಹೀಗಾಗಿ ಜೀವನ ಸಾಗಿಸುವುದೇ ಕಷ್ಟಕರವಾಗಿ ಪರಿಣಮಿಸಿತ್ತು.

   ಕೊರೊನಾ ಆಂತಕ ಹಿನ್ನೆಲೆ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಇಲ್ಲಿದೆ ಹೊಸ ಮಾರ್ಗಸೂಚಿ | Oneindia Kannada

   ಹೀಗಾಗಿ ಕೋವಿ ತಯಾರಿಸಲು ಮುಂದಾಗಿದ್ದಾರೆ. ಅದರಂತೆ ಆಂಧ್ರ ಮತ್ತಿತರ ಕಡೆ ಸಂಪರ್ಕವಿದ್ದ ವ್ಯಕ್ತಿಗಳಿಂದ ಮುಂಡಣ ಹಣ ಪಡೆದು ಬಂದೂಕು ತಯಾರಿಸಿ ಕೊಡುತ್ತಿದ್ದ. ಇತ್ತೀಚೆಗೆ ಸುಮಾರು ಹೊನ್ನೊಂದು ಬಂದೂಕು ತಯಾರಿಸಿ ಅವನ್ನು ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ, ಲಿಂಗಾಚಾರಿಯನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂಗಣ ಹಣ ನೀಡಿ ಪರಾರಿಯಾಗಿರುವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

   English summary
   Gun repair person arrested for trying to sell his own made gun without license. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X