ಗುಬ್ಬಿವೀರಣ್ಣ ರಂಗಮಂದಿರಕ್ಕೆ ಮತ್ತೆ ಒಳ್ಳೆಯ ದಿನಗಳು

ಬೆಂಗಳೂರು, ಮೇ 24: ಅಳಿವಿನಂಚಿನಲ್ಲಿರುವ ಖ್ಯಾತ ಗುಬ್ಬಿ ವೀರಣ್ಣ ರಂಗಮಂದಿರದತ್ತ ಬಿಬಿಎಂಪಿ ಕೃಪಾಕಟಾಕ್ಷ ಬೀರಿದೆ. ಈ ಹಿಂದೆ ಅವಸಾನದಲ್ಲಿದ್ದ ಖ್ಯಾತ ರಂಗಮಂದಿರವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೀಗ ಗುಬ್ಬಿ ವೀರಣ್ಣ ರಂಗಮಂದಿರಕ್ಕೆ ಕಾಯಕಲ್ಪ ನೀಡುವುದಾಗಿ ಬಿಬಿಎಂಪಿ ಪ್ರಕಟಿಸಿದೆ.

'ನೂರಾರು ಕಲಾವಿದರಿಗೆ ಆಶ್ರಯ ತಾಣವಾಗಿದ್ದ ಸಂಸ್ಥೆಯನ್ನು ಹಾಗೂ ಗುಬ್ಬಿ ವೀರಣ್ಣ ಅವರ ಹೆಸರು ಚಿರಸ್ಥಾಯಿಯಾಗಿಸಲು 50 ಲಕ್ಷ ರೂ ವೆಚ್ಚದಲ್ಲಿ ಈ ರಂಗ ಮಂದಿರವನ್ನು ಪುನರುತ್ಥಾನಗೊಳಿಸುವ ಕಾಮಗಾರಿಯನ್ನು ಸೋಮವಾರದಿಂದಲೇ ಕೈಗೆತ್ತಿಕೊಳ್ಳಲಾಗುವುದು. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮವು (KRIDL) ಇದರ ಜವಾಬ್ದಾರಿ ಹೊರಲಿದೆ' ಎಂದು ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎಎಚ್ ಬಸವರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಈ ಹಿಂದೆ ಅಸಮರ್ಪಕ ನಿರ್ವಹಣೆ ಕಾರಣವೊಡ್ಡಿ 22 ವರ್ಷದಷ್ಟು ಹಳೆಯದಾದ ರಂಗಮಂದಿರವನ್ನೇ ಪರಭಾರೆ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು. ಕಲಾವಿದರು ಸೇರಿದಂತೆ ಗುಬ್ಬಿ ವೀರಣ್ಣ ಕುಟುಂಬದವರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಪರಭಾರೆ ಮಾಡುವ ವಿಚಾರವನ್ನು ಕೈ ಬಿಟ್ಟು 50 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರವನ್ನು ಪುನರ್ ನವೀಕರಣಗೊಳಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

gubbi-veeranna-mandira-in-gandhi-nagar-bangalore-to-be-renovated-bbmp

ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಬಸವರಾಜು ಮಾಹಿತಿ ನೀಡಿದ್ದಾರೆ. ಗುಬ್ಬಿಯಲ್ಲಿ 1924 ರಲ್ಲಿ ಜನಿಸಿದ ಗುಬ್ಬಿ ವೀರಣ್ಣ ಅವರು 7 ವರ್ಷದಲ್ಲಿದ್ದಾಗಲೇ ನಾಟಕ ಕಂಪನಿ ಸೇರಿ, ನಟನೆಯಲ್ಲಿ ತೊಡಗಿ ಕೊನೆಗೆ ತಾವೇ ಕಂಪನಿಯನ್ನು ಹುಟ್ಟು ಹಾಕಿದರು. ಈ ಮೂಲಕ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ.

ಇವರ ಗರಡಿಯಲ್ಲಿ ವರನಟ ಡಾ. ರಾಜ್‌ ಕುಮಾರ್, ಜಿವಿ ಅಯ್ಯರ್, ನರಸಿಂಹರಾಜು, ಉದಯ ಕುಮಾರ್, ಮಾಸ್ಟರ್ ಹಿರಣ್ಣಯ್ಯ, ಚಿಂದೋಡಿಲೀಲಾ, ಡಿಂಗ್ರಿ ನಾಗರಾಜ್, ಲಕ್ಷ್ಮೀದೇವಮ್ಮ ಅಂತಹ ಅನೇಕಾನೇಕ ಕಲಾವಿದರು ತರಬೇತಿ ಪಡೆದು ಕನ್ನಡ ಸಿನಿಮಾದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನಗರದ ಗಾಂಧಿನಗರದಲ್ಲಿ ರಂಗಮಂದಿರ ನಿರ್ಮಿಸಲಾಗಿತ್ತು.

ಆದರೆ, ದುರಸ್ತಿ ನೆಪದಲ್ಲಿ ಒಂದು ವರ್ಷದಿಂದ ಮುಚ್ಚಲಾಗಿತ್ತು. ಇದನ್ನು ಮನಗಂಡು ಪುನರ್ ನವೀಕರಣ ಮಾಡಲು ನಿರ್ಧರಿಸಿ ಕಾಮಾಗಾರಿಗೆ ಚಾಲನೆ ನೀಡುತ್ತೇವೆ. ಇದು ಪುನರಾರಂಭಗೊಂಡರೆ ಸಾಂಪ್ರದಾಯಿಕ ನಾಟಕ ಕಲೆ ಉಳಿಸಿದಂತಾಗುತ್ತದೆ. ಜತೆಗೆ ಅರ್ಹ ಕಲಾವಿದರಿಗೆ ಬಾಡಿಗೆಗೆ ಕೊಡುವ ಮೂಲಕ ಪಾಲಿಕೆಗೆ 24 ಲಕ್ಷ ರೂ. ಆದಾಯವೂ ಬರುತ್ತದೆ ಎಂದು ಬಸವರಾಜು ಅಭಿಪ್ರಾಯಪಟ್ಟರು.

ಇದರ ಜತೆಗೆ ಮಡಿವಾಳದಲ್ಲಿರುವ ಹೆರಿಗೆ ಆಸ್ಪತ್ರೆಯನ್ನು 83 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಆರ್ ಆರ್ ನಗರ ವ್ಯಾಪ್ತಿಯಲ್ಲಿ ಯೋಜನೆ, ಆರೋಗ್ಯ ಮತ್ತು ಕಾಮಗಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿದ್ದು 75 ಸಾವಿರ ರೂ ಬಾಡಿಗೆ ಕಟ್ಟುತ್ತಿದ್ದೇವೆ. ಇದನ್ನು ತಪ್ಪಿಸಲು ಹಾಲಿ ಕಂದಾಯ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ 2 ಅಂತಸ್ಥಿನ ಕಟ್ಟಡ ಹಾಗೂ ಯಲಹಂಕದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಮತ್ತೊಂದು ರಂಗಮಂದಿರ ನಿರ್ಮಿಸುವುದು ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ನಮ್ಮ ಸಮಿತಿ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು. (ಚಿತ್ರ ಕೃಪೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+