ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ಬಿಬಿಎಂಪಿ ವ್ಯಾಪ್ತಿಯ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಬೆಂಗಳೂರು, ಆಗಸ್ಟ್ 30: ಸಾಂಸ್ಕೃತಿಕ ನಗರಿಯಲ್ಲಿ ಅದ್ದೂರಿಯಾಗಿ ಗೃಹಲಕ್ಷ್ಮಿ ಜಾರಿ ಮಾಡಲು ಸಕಲ ರೀತಿಯಲ್ಲಿಯೂ ಸಿದ್ಧತೆ ನಡೆಯುತ್ತಿದೆ. ಕೈ ಪಾಳಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲು ಇನ್ನೊಂದೇ ದಿನ ಬಾಕಿ ಇದೆ, ವೇದಿಕೆ ಸಜ್ಜಾಗಿದೆ.

ಜಾರಿ ಆಗುತ್ತಾ ಆಗಲ್ವಾ ಅನ್ನುವ ಅನುಮಾನಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೊನೆಗೂ ಜಾಗ ಬದಲು ಮಾಡಿದರು, ಫಿಕ್ಸ್ ಮಾಡಿರುವ ಡೇಟ್ ಗೆ ಗೃಹಲಕ್ಷ್ಮೀ ಯೋಜನೆ ಜಾರಿ ಆಗುತ್ತಿದೆ.
ಇತ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೂಡ ಯೋಜನೆ ಜಾರಿ ಜನರು ನೋಡಲು ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಬಿಬಿಎಂಪಿ ಪ್ರತಿ ವಾರ್ಡ್ ನಲ್ಲೂ ಕಾರ್ಯಕ್ರಮ ಆಯೋಜನೆಗೆ ಪ್ಲಾನ್ ಮಾಡಿದೆ.

Gruha Lakshmi Launching From Today, BBMP Organized Events In Each Wards

ಪಾಲಿಕೆಯ ನೋಡಲ್ ಅಧಿಕಾರಿ ಲಕ್ಷ್ಮೀದೇವಿ ನೇತೃತ್ವದಲ್ಲಿ ವಾರ್ಡ್ ಮಟ್ಟದ ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ. ವಲಯವಾರು ಜಂಟಿ ಆಯುಕ್ತರಿಗೆ ಕಾರ್ಯಕ್ರಮದ ಜವಾಬ್ದಾರಿ ನೀಡಲಾಗಿದೆ. ವಾರ್ಡ್ ಮಟ್ಟದಲ್ಲಿ ಸಕಲ ಸಿದ್ದತೆ ಗಳನ್ನ ಈಗಾಗಲೇ ಮಾಡಿಕೊಳ್ಳಲಾಗಿದೆ. ಪ್ರತಿ ವಾರ್ಡ್ ನಲ್ಲಿಯು ಸಾವಿರ ಜನರು ಸೇರಿಸಿ ಕಾರ್ಯಕ್ರಮ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿದೆ.

ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸೂಚನೆ

ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಬಿಬಿಎಂಪಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ಜಾಗ ನಿಗದಿ ಮಾಡಲಾಗಿದ್ದು ಅಲ್ಲಿಯೇ ಪ್ರೋಗ್ರಾಂ ನಡೆಯಲಿದೆ. ಮೈಸೂರಿನ ಉದ್ಘಾಟ‌ನಾ ಕಾರ್ಯಕ್ರಮ ಈ ಜಾಗಗಳಲ್ಲಿ ನೇರ ಪ್ರಸಾರ ಆಗಲಿದೆ. ಲೈವ್ ಅನ್ನ ಜನ ನೋಡೋದಕ್ಕೆ ಅಂತ ದೊಡ್ಡ ಎಲ್‌ಇಡಿ ಸ್ಕ್ರೀನ್, ಚೇರ್ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಇನ್ನೂ ಆಯಾ ವಾರ್ಡ್ ವ್ಯಾಪ್ತಿಗೆ ಬರುವ ಜನಪ್ರತಿನಿಧಿಗಳಿಗೆ, ಬಿಬಿಎಂಪಿ ಕಾರ್ಯಕ್ರಮಕ್ಕೆ ಬರುವಂತೆ ಕೋರಿ ಆಹ್ವಾನ ಕೊಡಲಾಗಿದೆ. ಇದೆಲ್ಲವುದರ ಜೊತೆಗೆ ಎಲ್ಲಾ‌ ಫಲಾನುಭವಿಗಳ ಖಾತೆಗೆ ನಾಳೆಯೇ ಹಣ ಹಾಕಲು ಕೂಡ ನಿರ್ಧಾರ ಮಾಡಲಾಗಿದೆ. ಒಂದು ವೇಳೆ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲ ಅಂದರೆ ಸ್ಥಳದಲ್ಲೇ ಆ ಬಗ್ಗೆ ಪರಿಶೀಲನೆ ಮಾಡುವ ವ್ಯವಸ್ಥೆ ಕೂಡ ಮಾಡಿ ಕೊಳ್ಳಲಾಗಿದೆ.

ವಾರ್ಡ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಮೊಬೈಲ್ ತರಲು ಸೂಚನೆ

ಹಣ ಪರಿಶೀಲನೆ ಮಾಡುವ ಸಲುವಾಗಿ ವಾರ್ಡ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಮೊಬೈಲ್ ತರಲು ಸೂಚಿಸಲಾಗಿದೆ, ಸ್ಥಳದಲ್ಲೇ ಫಲಾನುಭವಿಗಳ ಅಕೌಂಟ್ ಗೆ ಹಣ ಬಂದ ಬಗ್ಗೆ ಖಚಿತ ಪಡಿಸಿ ಕೊಳ್ಳಲಾಗುತ್ತದೆ. ಮೈಸೂರಿನಲ್ಲಿ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕ ಬಳಿಕ ಸಿಲಿಕಾನ್ ಸಿಟಿಯಲ್ಲಿ ಕಾರ್ಯಕ್ರಮ ಆರಂಭ ಆಗಲಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟೀ ಯೋಜನೆಗಳ ಪೂರೈಕೆ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದ ಮೇಲೆ ಪುನರುಚ್ಚರಿಸಿ ಜನರ ನಂಬಿಕೆಗೆ ಪಾತ್ರವಾಯಿತು.

ಜೊತೆಗೆ ಈಗ ಹೇಳಿದ ಹಾಗೇ ಕೊಟ್ಟ ಮಾತಿನಂತೆ ಉಚಿತ ಗ್ಯಾರಂಟೀ ಯೋಜನೆ ಅನುಷ್ಠಾನ ಮಾಡಿ ಜನರ ವಿಶ್ವಾಸ ದುಪ್ಪಟ್ಟು ಮಾಡಿ ಕೊಳ್ಳುತ್ತಿದೆ, ಶಕ್ತಿ ಯೋಜನೆ , ಗೃಹ ಜ್ಯೋತಿ, ಯೋಜನೆ ಜಾರಿ ಬೆನ್ನಲ್ಲೇ ಈಗ ಗೃಹಲಕ್ಷ್ಮೀ ಕೂಡ ಅನುಷ್ಠಾನ ಮಾಡುತ್ತಿದ್ದ ರಾಜ್ಯದ ಮಹಿಳೆಯರು ಸಿಎಂ ಸಿದ್ದು ಸರ್ಕಾರದ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+