ಖಾಸಗಿ ಲ್ಯಾಬ್‌ಗಳಲ್ಲಿ ಕೊವಿಡ್ ಪರೀಕ್ಷೆಗೆ ಶುಲ್ಕ ಘೋಷಿಸಿದ ಸರ್ಕಾರ

ಬೆಂಗಳೂರು, ಏಪ್ರಿಲ್ 17: ಖಾಸಗಿ ಲ್ಯಾಬ್‌ಗಳಲ್ಲಿ ಕೊರೊನಾ ಪರೀಕ್ಷೆಗೆ ನಿಗದಿತ ಶುಲ್ಕವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಒಬ್ಬ ವ್ಯಕ್ತಿಗೆ ಕೊವಿಡ್ ಪರೀಕ್ಷೆ ಮಾಡಿಸಲು 2,250 ರೂಪಾಯಿ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ಖಾಸಗಿ ಲ್ಯಾಬ್‌ಗಳ ಜೊತೆ ಕೊವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ, ಎಲ್ಲ ರೀತಿಯಲ್ಲೂ ಆಲೋಚಿಸಿ ಶುಲ್ಕವನ್ನು 2,250 ರೂಪಾಯಿಗೆ ನಿಗದಿ ಪಡಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.

Govt Fixed Rs 2250 Charges For COVID19 Testing In Private Labs

ಐಸಿಎಂಆರ್ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಲ್ಯಾಬ್‌ಗಳು ಕಾರ್ಯನಿರ್ವಹಿಸಬೇಕಿದೆ. ಸಮಯಕ್ಕೆ ತಕ್ಕಂತೆ ಕೊವಿಡ್ ಪರೀಕ್ಷೆಯ ಫಲಿತಾಂಶವನ್ನು ರಾಜ್ಯಸರ್ಕಾರಕ್ಕೆ ಮತ್ತು ಐಸಿಎಂಆರ್‌ಗೆ ತಿಳಿಸಬೇಕು. ಈ ಮಾಹಿತಿಯನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಖಾಸಗಿ ಲ್ಯಾಬ್‌ಗಳಿಗೆ ರಾಜ್ಯ ಸರ್ಕಾರವೂ ಯಾವುದೇ ರೀತಿ ಟೆಸ್ಟಿಂಗ್ ಕಿಟ್‌ಗಳನ್ನು ನೀಡುವುದಿಲ್ಲ ಎಂಬುದು ಕೂಡ ಈ ಒಪ್ಪಂದಲ್ಲಿದೆ.

ಅಂದ್ಹಾಗೆ, ಕರ್ನಾಟಕದಲ್ಲಿ ಒಟ್ಟು 16 ಕೊವಿಡ್ ಪರೀಕ್ಷೆ ಲ್ಯಾಬ್‌ಗಳಿವೆ. ಅದರಲ್ಲಿ 11 ಲ್ಯಾಬ್‌ಗಳು ಸರ್ಕಾರದ್ದು ಮತ್ತು 5 ಲ್ಯಾಬ್‌ಗಳು ಖಾಸಗಿಯದ್ದು. ಈ ಎಲ್ಲ ಲ್ಯಾಬ್‌ಗಳು ಐಸಿಎಂಆರ್ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+