ಗೌರಿ ಕೊಲೆಗಡುಕರ ಪತ್ತೆಗೆ ಆಗ್ರಹ, ಬೆಂಗಳೂರಿನಲ್ಲಿ ಪುನಃ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 05 : ಗೌರಿ ಲಂಕೇಶ್ ಹಂತರನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗೌರಿ ಬಳಗದವರು ಮಂಗಳವಾರ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಗೌರಿ ಲಂಕೇಶ್ ಹತ್ಯೆ ನಡೆದು ಮೂರು ತಿಂಗಳಾಗಿದೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಗ. ಆರೋಪಿಗಳ ಸುಳಿವು ಸಿಕ್ಕಿದೆ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಸರ್ಕಾರ ಹೇಳುತ್ತಿದೆ. ಇದುವರೆಗೂ ಒಬ್ಬರನ್ನೂ ಬಂಧಿಸಲು ಸಾಧ್ಯವಾಗಿಲ್ಲ.

ಸಿದ್ದರಾಮಯ್ಯ ಅವರನ್ನು ಈ ವಿಚಾರವಾಗಿ ಕೇಳಿದಾಗಲೆಲ್ಲ ಹಾರಿಕೆ ಉತ್ತರವನ್ನು ನೀಡುತ್ತಾರೆ ಎಂದು ಗೌರಿ ಬಳಗದವರು ಗೌರಿ ಲಂಕೇಶ್ ಕೊಲೆ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಮೌರ್ಯ ವೃತ್ತದಿಂದ ಸಿದ್ದರಾಮಯ್ಯ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗೌರಿ ಹತ್ಯೆಯಾಗಿ ಕೆಲವು ದಿನಗಳಲ್ಲೇ ಹಂತಕರ ಸ್ಕೆಚ್ ಗಳು ತಯಾರಾಗಿವೆ ಎಂದು ಹೇಳಿದ್ದರು. ಆದರೆ ಏನೂ ಪ್ರಯೋಜನವಾಗಿಲ್ಲ, ಗೌರಿ ಕೊಲೆಯ ವಿಚಾರವನ್ನು ಹಾಗೆಯೇ ಬಿಟ್ಟರೆ ಇನ್ನು ಅನೇಕ ಹತ್ಯೆಗಳು ನಡೆಯಲು ಕಾರಣವಾಗುತ್ತದೆ. ಸರ್ಕಾರದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದೇವೆ ಆದಷ್ಟು ಬೇಗ ಹಂತಕರ ಬಂಧನವಾಗಬೇಕು ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಹೇಳಿದರು.












Click it and Unblock the Notifications