Traffic Police: ಪೊಲೀಸ್ ಇರ್ತಾರೆ ನೋಡ್ಕೊಂಡ್ ಹೋಗಿ! ಗೂಗಲ್‌ ಮ್ಯಾಪ್‌ನಲ್ಲಿ ಹೀಗೆ ಸರ್ಚ್ ಮಾಡಿ ನೋಡಿ

ಗೂಗಲ್ ಮ್ಯಾಪ್ ದಾರಿ ತಪ್ಪದೇ ತಮ್ಮ ಸ್ಥಳಗಳಿಗೆ ತೆರಳಲು ಸಹಾಯ ಮಾಡಲು ಇರುವ ಬಹುಪಯೋಗಿ ಆಪ್. ಹೊಸ ಊರಿಗೆ ಹೋದಾಗ, ಯಾವುದೇ ವಿಳಾಸವನ್ನು ಪತ್ತೆ ಮಾಡಲು ಗೂಗಲ್ ಮ್ಯಾಪ್ ಸಹಾಯ ಮಾಡುತ್ತದೆ.

ನಗರ ಪ್ರದೇಶಗಳಲ್ಲಿ ಕರಾರುವಕ್ಕಾಗಿ ಕೆಲಸ ಮಾಡುವ ಗೂಗಲ್ ಮ್ಯಾಪ್, ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ದುರ್ಗಮ ಪ್ರದೇಶಗಳಲ್ಲಿ ಕೆಲವು ಬಾರಿ ಕೈಕೊಟ್ಟ ಉದಾಹರಣೆಗಳು ಉಂಟು. ಆದರೆ ಇದೇ ಗೂಗಲ್ ಮ್ಯಾಪ್‌ ಅನ್ನು ಟ್ರಾಫಿಕ್ ಪೊಲೀಸರನ್ನೇ ಯಾಮಾರಿಸಲು ಬಳಸಿದರೆ?

Google Maps Misused to Avoid Traffic Fines in Bengaluru

ಹೌದು, ನೀವೇನಾದರೂ ಗೂಗಲ್ ಮ್ಯಾಪ್‌ನಲ್ಲಿ police irtare... ಎಂದು ಹುಡುಕಿದರೆ ಅಂತಹ ಹಲವಾರು ಹೆಸರಿನ ಸ್ಥಳಗಳನ್ನು ನೋಡಬಹುದು. ಇದು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರುತಿಸಿದ್ದು, ಇತರೆ ವಾಹನ ಸವಾರರು ಟ್ರಾಫಿಕ್ ಪೊಲಿಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದೆ.

ರಾಜ್ಯದಲ್ಲಿ ಹಲವು ಸ್ಥಳಗಳು!

police iratre ಎಂದು ಗೂಗಲ್ ಮ್ಯಾಪ್‌ನಲ್ಲಿ ನೀವು ಹುಡುಕಿದರೆ ರಾಜ್ಯದ ಹಲವು ಸ್ಥಳಗಳನ್ನು ತೋರಿಸುತ್ತದೆ. 'ಪೊಲಿಸ್ ಇರ್ತಾರೆ ನೋಡ್ಕೊಂಡ್ ಹೋಗಿ', 'ಪೊಲೀಸ್ ಇರ್ತಾರೆ', 'ಪೊಲೀಸ್ ಇರ್ತಾರೆ ಹುಷಾರು' ಎಂದು ಹಲವು ಸ್ಥಳಗಳನ್ನು ನೋಡಬಹುದು.

ಪೊಲೀಸರು ಹಲವು ಕಡೆ ಗಾಡಿಗಳನ್ನು ಪರಿಶೀಲನೆ ಮಾಡುವುದು, ತಪಾಸಣೆ ಮಾಡುವ ಸ್ಥಳಗಳನ್ನು ಕಿಡಿಗೇಡಿಗಳು ಮ್ಯಾಪ್‌ನಲ್ಲಿ ಈ ರೀತಿ ಗುರುತಿಸಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವಂತಿದೆ.

ಬೆಂಗಳೂರಿನಲ್ಲಿ ಕೂಡ ಹಲವು ಸ್ಥಳಗಳನ್ನು ಹೀಗೆ ಗುರುತಿಸಲಾಗಿದೆ. ಪೊಲೀಸ್ ಇರ್ತಾರೆ ಹೆಲ್ಮೆಟ್ ಹಾಕೊಂಡ್ ಹೋಗಿ ಎಂದು ಹಾಕಿರುವುದನ್ನು ನೋಡಬಹುದು. ಬೆಂಗಳೂರು ಮಾತ್ರವಲ್ಲ, ಮೈಸೂರು, ಚಿಕ್ಕಮಗಳೂರು, ಹಿರಿಯೂರು, ದಾವಣಗೆರೆ, ಕೊಟ್ಟಿಗೆಹಾರ-ಚಿಕ್ಕಮಗಳೂರು ರಸ್ತೆಯಲ್ಲಿ ಕೂಡ ಪೊಲೀಸರ ತಪಾಸಣೆ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಹೀಗೆ ಗುರುತಿಸಲಾಗಿದೆ.

ಈ ರೀತಿ ಮಾಡುವುದರಿಂದ ಕೆಲವೊಮ್ಮೆ ತಪ್ಪಿತಸ್ಥರು ಕೂಡ ತಪ್ಪಿಸಿಕೊಳ್ಳುವ ಅಪಾಯ ಇದೆ. ಪೊಲೀಸರು ಈ ಬಗ್ಗೆ ಕೂಡಲೇ ಗಮನ ಹರಿಸಿ, ಇದನ್ನು ಗೂಗಲ್ ಮ್ಯಾಪ್‌ನಲ್ಲಿ ಅಳಿಸುವ ಕೆಲಸ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+