ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದರೆ ಪೊಲೀಸರಿಗೆ whatsapp ಮಾಡಿ
ಬೆಂಗಳೂರು, ನವೆಂಬರ್ 27 : ಬೆಂಗಳೂರು ಸಂಚಾರಿ ಪೊಲೀಸರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಸಹಾಯವಾಣಿ ಆರಂಭಿಸಲಾಗಿತ್ತು. ವಾಟ್ಸಪ್ ಮೂಲಕ ಜನರು ಮಾಹಿತಿ ನೀಡುವ ವ್ಯವಸ್ಥೆ ಮಾಡಿದ್ದರು.
ಸಹಾಯವಾಣಿಯನ್ನು ಆರಂಭಿಸಿದ ಎರಡು ದಿನದಲ್ಲಿ ಸಂಚಾರ ದಟ್ಟಣೆ ಕುರಿತು 750 ಸಂದೇಶಗಳು ಹಾಗೂ 250 ಫೋಟೊಗಳು ಪೊಲೀಸರಿಗೆ ಬಂದಿವೆ. ವಾಟ್ಸಪ್ ಮೂಲಕ ದೂರು ಬಂದ ಕುಂದಲಹಳ್ಳಿ, ಹೊಸೂರು ರಸ್ತೆ, ಪದ್ಮನಾಭನಗರ ಸೇರಿದಂತೆ ಸಂಚಾರ ದಟ್ಟಣೆ ಉಂಟಾದ ಪ್ರದೇಶಗಳಿಗೆ ಪೊಲೀಸರು ತೆರಳಿ ಸಂಚಾರ ಸುಗಮಗೊಳಿಸಿದ್ದಾರೆ. [ಬೆಂಗಳೂರು ಟ್ರಾಫಿಕ್ ಸಮಸ್ಯೆ ಕತೆ ಹೇಳುವ 'ಹಿಟ್ಲರ್' ವಿಡಿಯೋ]

'ಎಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಪೊಲೀಸರಿಗೆ ತಕ್ಷಣ ತಿಳಿಯುವುದಿಲ್ಲ. ಈ ಸಹಾಯವಾಣಿ ನೆರವಿನಿಂದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ಸಾಧ್ಯವಾಗುತ್ತದೆ' ಎಂದು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಹೇಳಿದ್ದಾರೆ. [ಬೆಂಗಳೂರಿನ ಬಗ್ಗೆ ಅಬ್ದುಲ್ ಕಲಾಂ ಹೇಳಿದ್ದೇನು?]
ಮಾಹಿತಿ ಕೊಡುವುದು ಹೇಗೆ? : ಪೊಲೀಸರು ಆರಂಭಿಸಿರುವ ಸಹಾಯವಾಣಿಯ ನಂಬರ್ 7259100100. ಸಂಚಾರ ದಟ್ಟಣೆಯಲ್ಲಿ ಸಿಲುಕಿರುವ ಸವಾರರು ಈ ಮೊಬೈಲ್ ನಂಬರ್‌ಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಬಹುದು, ಫೋಟೋವನ್ನು ಹಾಕಬಹುದು. [ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಸಲಾಂ!]
ಈ ದೂರು ಸಂಚಾರ ನಿರ್ವಹಣಾ ಕೇಂದ್ರದಲ್ಲಿರುವ (ಟಿಎಂಸಿ) ಸಿಬ್ಬಂದಿಯ ಮೊಬೈಲ್‌ಗೆ ಹೋಗುತ್ತದೆ. ಅಲ್ಲಿರುವ ಸಿಬ್ಬಂದಿ ಆ ಸ್ಥಳಕ್ಕೆ ಸಮೀಪದ ಜಂಕ್ಷನ್ ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸುತ್ತಾರೆ.












Click it and Unblock the Notifications