Good News: ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಮಾಸ್ಟರ್‌ ಪ್ಲಾನ್!

ಬೆಂಗಳೂರಲ್ಲಿ ರಸ್ತೆಗುಂಡಿಗಳದ್ದು ಬಹುದೊಡ್ಡ ಸಮಸ್ಯೆಯಾಗಿದೆ. ಕಳೆದ ತಿಂಗಳು ಸುರಿದ ಮಳೆಯಿಂದ ಬೆಂಗಳೂರಿನ ರಸ್ತೆಗಳು ಯಮಸ್ವರೂಪಿಯಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇದೀಗ ಬೆಂಗಳೂರಲ್ಲಿ ರಸ್ತೆಗಳ ನಿರ್ವಹಣೆ ಹಾಗೂ ರಸ್ತೆ ಗುಂಡಿಗಳನ್ನು

ಮುಚ್ಚುವ ನಿಟ್ಟಿನಲ್ಲಿ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಯು ಮಾಸ್ಟರ್‌ ಪ್ಲಾನ್‌ವೊಂದನ್ನು ಮಾಡಿಕೊಂಡಿದೆ. ಬೆಂಗಳೂರಲ್ಲಿ ರಸ್ತೆ ಗುಂಡಿಗಳನ್ನು ಪಾಲಿಕೆಯೇ ಮುಚ್ಚಿತ್ತು. ಆದರೆ, ಇದೀಗ ಬೆಂಗಳೂರಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೊನೆಗೂ ಪಾಲಿಕೆ ಮುಂದಾಗಿದೆ.

Good News BBMP master plan to close potholes in Bengaluru

ಬೆಂಗಳೂರಲ್ಲಿ ರಸ್ತೆಗಳ ನಿರ್ಮಾಣ, ಮೇಲ್ದರ್ಜೆಗೇರಿಸುವುದು, ನಿರ್ವಹಣೆಯ ಹಾಗೂ ಎಸ್‌ಒಪಿ ಕೈಪಿಡಿಯ ರಚಿಸುವ ಉದ್ದೇಶದಿಂದಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದಾಗಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಹೇಳಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ನಿರ್ಮಾಣ, ಮೇಲ್ದರ್ಜೆಗೇರಿಸುವುದು, ಅಭಿವೃದ್ಧಿ ಹಾಗೂ ನಿರ್ವಹಣೆಯ ದೃಷ್ಟಿಯಿಂದ ಸಮಗ್ರ ನಿರ್ಧಾರಿತ ಕಾರ್ಯಾಚರಣೆ ವಿಧಾನ(SOP) ಮತ್ತು ಕೈಪಿಡಿಯನ್ನು ರಚಿಸಲು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿರುವುದಾಗಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಹೇಳಿದ್ದಾರೆ.

ಬೆಂಗಳೂರಲ್ಲಿ (ಪಾಲಿಕೆ ವ್ಯಾಪ್ತಿಯಲ್ಲಿ) ಹೈಡೆನ್ಸಿಟಿ ಕಾರಿಡಾರ್, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಲಯ ಮಟ್ಟದ ರಸ್ತೆಗಳು ಸೇರಿದಂತೆ ಒಟ್ಟು 12878.78 ಕಿ.ಮೀ ಉದ್ದ ರಸ್ತೆ ಜಾಲವಿದೆ. ಇನ್ನು ಬೆಂಗಳೂರಿನ ಪ್ರತಿ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ದೃಢ ಹಾಗೂ ದೀರ್ಘ ಬಾಳಿ ಮಾಡುವುದು. ಅದಕ್ಕೆ ವಿನ್ಯಾಸಗೊಳಿಸುವುದು, ನಿರ್ಮಾಣ ಮಾಡುವುದು ಹಾಗೂ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಹೀಗಾಗಿ, ಕೆಲವು ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಪಾಲಿಕೆ ಹೇಳಿದೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನೇತೃತದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಂಗಳೂರು ನಗರದ ರಸ್ತೆಗಳನ್ನು ವೈಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿವಿಧ ರಸ್ತೆಗಳನ್ನು ಒಂದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ರಸ್ತೆಗಳ ನಿರ್ಮಾಣ, ಮೇಲೇರ್ಜಗೆ ಏರಿಸುವುದು ಹಾಗೂ ಅಭಿವೃದ್ಧಿಪಡಿಸಿ, ನಿರ್ವಹಣೆ ಕೈಗೊಳ್ಳಲು ಒಂದು ಸಮಗ್ರ ನಿರ್ಧಾರಿತ ಕಾರ್ಯಚಾರಣೆ ವಿಧಾನ(SOP)ಅನ್ನು ಮತ್ತು ರಸ್ತೆ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಕೈಪಿಡಿಯನ್ನು ಬಿಬಿಎಂಪಿಯ ಮುಖ್ಯ ಎಂಜಿನಿಯರ್‌ ನೇತೃತ್ವದಲ್ಲಿ "ಪಾಲಿಕೆಯ ಮುಖ್ಯ ಎಂಜಿನಿಯರ್‌ಗಳನ್ನು ಒಳಗೊಂಡಂತೆ ಐ.ಐ.ಎಸ್.ಸಿ ಸಂಸ್ಥೆಯ ಪ್ರೊಫೇಸರ್‌, ಬಿಬಿಎಂಪಿ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಬ್ಲ್ಯೂ.ಆ‌ರ್.ಐ(ಇಂಡಿಯಾ) ನುರಿತ ತಜ್ಞರ ಸಮಿತಿ"ಯನ್ನು ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸಮಿತಿಯು ತಿಂಗಳ 1ನೇ ಹಾಗೂ 3ನೇ ಬುಧವಾರ ಸಭೆಯನ್ನು ಸೇರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದೆ. ಡಿಸೆಂಬರ್‌ 15ರ ಒಳಗೆ ಕೈಪಿಡಿ ರಚನೆಯಾಗಲಿದೆ. ಕೈಪಿಡಿಯಂತೆ ಕಾಮಗಾರಿಯ ನಿರ್ವಹಣೆಯ ಬಗ್ಗೆ ಮೇಲ್ವಿಚರಣೆ ನಡೆಸಲು ಬಿಬಿಎಂಪಿಯ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಮಾಡಿದ್ದಾರೆ.

ಈ ಸಮಿತಿಯ ಉದ್ದೇಶವೇನು

ಇದೀಗ ಬಿಬಿಎಂಪಿಯು ರಚಿಸಿರುವ ಸಮಿತಿಯ ಮುಖ್ಯ ಉದ್ದೇಶ ಹಾಗೂ ಕೆಲಸ ಬೆಂಗಳೂರಿನ ರಸ್ತೆಯ ವಿನ್ಯಾಸ, ರಸ್ತೆಗಳ ನಿರ್ಮಾಣ/ನಿರ್ವಹಣೆಗೆ ಬೇಕಾಗುವ ವೆಚ್ಚ, ವಾಹನಗಳ ಸಂಖ್ಯೆಗೆ ಅನುಗುಣವಾಗಿ ಮರುಡಾಂಬರೀಕರಣ (ಟಾರ್) ಪುನರಾವರ್ತನ ಅವಧಿ, ರಸ್ತೆ ಚರಂಡಿ ವ್ಯವಸ್ಥೆ ಮತ್ತು ವಿನ್ಯಾಸ, ರಸ್ತೆ ಉಬ್ಬರ ನಿರ್ಮಾಣ‌ (ಹಂಪ್ಸ್‌) ಮಾಡುವುದು ಆಗಿದೆ. ಅಲ್ಲದೇ ಥರ್ಮೋಪ್ಲಾಸ್ಟಿಕ್ ಬಣ್ಣ ಬಳೆಯುವುದು ಮತ್ತು ಪುನರಾವರ್ತನ ಅವಧಿ ನೋಡಿಕೊಳ್ಳುವುದು ಸೇರಿದಂತೆ ಹಲವು ಅಂಶಗಳು ಸೇರಿವೆ.

ಸಮಿತಿಯಲ್ಲಿರುವವರ ವಿವರ ಇಲ್ಲಿದೆ...

* ಸಮಿತಿಯ ಅಧ್ಯಕ್ಷರು: ಬಿಬಿಎಂಪಿ ಮುಖ್ಯ ಎಂಜಿನಿಯರ್‌

* ಸದಸ್ಯರು:

(1) ಮುಖ್ಯ ಎಂಜಿನಿಯರ್‌ (ಯೋಜನೆ-ಕೇಂದ್ರ),

(2) ಮುಖ್ಯ ಪ್ರಧಾನ ನಿರ್ವಹಾಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)

(3) ಅಧೀಕ್ಷಕ ಎಂಜಿನಿಯರ್‌ (ವಿದ್ಯುತ್)

(4) ಪ್ರೋ. ಆಶಿಷ್ ವರ್ಮ,ಪ್ರಾಚಾರ್ಯ , ಐ.ಐ.ಎಸ್.ಸಿ.

(5) ಪ್ರೋ. ವಿ.ಶ್ರೀನಿವಾಸ್, ಪ್ರಾಚಾರ್ಯ, ಐ.ಐ.ಎಸ್.ಸಿ.

(6) ಪ್ರೋ. ಅಂಜ್ಗನ್, ಪ್ರಾಚಾರ್ಯ, ಐ.ಐ.ಎಸ್.ಸಿ

(7) ಡಾ.ಸತ್ಯವತಿ, ಐ.ಐ.ಎಸ್.ಸಿ.

(8) ಶ್ರೀನಿವಾಸ್ ಅರವಳ್ಳಿ, ಮೆ.ಡಬ್ಲ್ಯೂ.ಆರ್.ಐ(ಇಂಡಿಯಾ).

(9) ಚೇತನ್, ಮೆ.ಡಬ್ಲ್ಯೂ.ಆರ್.ಐ(ಇಂಡಿಯಾ).

* ಸದಸ್ಯ ಕಾರ್ಯದರ್ಶಿ: ಉಪ ಮುಖ್ಯ ಎಂಜಿನಿಯರ್‌(ರ.ಮೂ.ಸೌ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+