Bengaluru Property: ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಭರ್ಜರಿ ಹೆಚ್ಚಳ: ಮನೆ ಮಾರಾಟಕ್ಕೆ ಮಾತ್ರ ಸರ್ಕಸ್
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭೂಮಿ ಹಾಗೂ ಪ್ರಾಪರ್ಟಿಗೆ ಹೆಚ್ಚಿನ ಡಿಮ್ಯಾಂಡ್ ಇದೆ. ಅದರಲ್ಲೂ ಉತ್ತರ ಭಾರತದ ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ವಾಯುಮಾಲಿನ್ಯ ಸೇರಿದಂತೆ ವಿವಿಧ ಸಮಸ್ಯೆಗಳು ಹೆಚ್ಚಾಗುತ್ತಿರುವುದರ ನಡುವೆ ಜನ ದಕ್ಷಿಣ ಭಾರತದ ನಗರಗಳ ಕಡೆ ಮುಖ ಮಾಡಿದ್ದಾರೆ. ಇದು ಬೆಂಗಳೂರಿಗೆ ಏಕಕಾಲಕ್ಕೆ ಲಾಭ ಹಾಗೂ ನಷ್ಟವನ್ನೂ ತರುತ್ತಿದೆ. ಆದರೆ ಈ ಚರ್ಚೆಗಳ ನಡುವೆಯೇ ಬೆಂಗಳೂರಿನಲ್ಲಿ ಮನೆ ಮಾರಾಟವು ಭರ್ಜರಿ ಕುಸಿತ ಕಂಡಿದೆ. ಅದು ಯಾಕೆ ಹಾಗೂ ವರದಿಯಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿಗೆ ಯಾವಾಗಲೂ ಒಳ್ಳೆಯ ಬೆಲೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ನ ಮೇಲೆ ಬೇರೆಯದ್ದೇ ಪರಿಣಾಮ ಬೀರುತ್ತಿದೆ ಎಂದು Anarock ವರದಿ ಮಾಡಿದೆ. ಈ ಸಂಸ್ಥೆ ವರದಿ ಮಾಡಿರುವ ಪ್ರಕಾರ ಬೆಂಗಳೂರಿನಲ್ಲಿ ಮನೆ ಮಾರಾಟವು 2025ನೇ ಸಾಲಿನಲ್ಲಿ ಶೇ.5% ರಷ್ಟು ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಳವೇ ಪರೋಕ್ಷವಾಗಿ ಪ್ರಾಪರ್ಟಿಗಳ ಮಾರಾಟ ಅಥವಾ ಮನೆಗಳ ಖರೀದಿ ವಿಚಾರದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಪ್ರಾಪರ್ಟಿಗಳ ಬೆಲೆ ಹೆಚ್ಚಳವಾಗುತ್ತಿರುವುದರಿಂದ, ಆಸ್ತಿ ಬೆಲೆಗಳು ಮತ್ತು ಖರೀದಿದಾರರ ಎಚ್ಚರಿಕೆಯ ಭಾವನೆಯು ಸಹ ಮನೆಗಳ ಬೇಡಿಕೆಯನ್ನು ತಗ್ಗಿಸಿದೆ.

ಬೆಂಗಳೂರಲ್ಲಿ ಮನೆ ಮಾರಾಟ ಇಳಿಕೆಗೆ ಕಾರಣಗಳು
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮನೆ ಮಾರಾಟ ಪ್ರಮಾಣವು ಇಳಿಕೆಯಾಗಿದೆ ಎಂದು ವರದಿಯು ಹೇಳಿದೆ. ಈ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಮನೆಗಳ ಮಾರಾಟ ಪ್ರಮಾಣ ಇಳಿಯುವುದಕ್ಕೆ ಹಲವು ಕಾರಣಗಳು ಇವೆ. ಅದರಲ್ಲಿ ಮುಖ್ಯವಾಗಿ ಆಸ್ತಿಗಳ ಬೆಲೆ ಹೆಚ್ಚಳವಾಗಿರುವುದು, ಬೆಲೆ ಏರಿಕೆ, ಐಟಿ ವಲಯದ ಉದ್ಯಮಿಗಳು ಉದ್ಯೋಗ ಕಳೆದುಕೊಳ್ಳುವ ಭಯ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸೇರಿದಂತೆ ಹಲವು ವಿಚಾರಗಳು ಭಾರತದ ವಸತಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿವೆ.
ಭಾರತದ ವಿವಿಧ ನಗರಗಳಲ್ಲೂ ಮನೆ ಮಾರಾಟ ಕುಸಿತ
ಇನ್ನು 2025ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ಮಾತ್ರವಲ್ಲ ಬೆಂಗಳೂರಿನ 7 ಪ್ರಮುಖ ನಗರಗಳಲ್ಲೂ ಪ್ರಾಪರ್ಟಿ ಸೇಲ್ ಕಡಿಮೆಯಾಗಿದೆ. ಅದರಲ್ಲಿ ಮುಖ್ಯವಾಗಿ ಮನೆಗಳ ಮಾರಾಟವು ಕುಸಿತ ಕಂಡಿದೆ. ಬಳಕೆದಾರರು ಮತ್ತು ಹೂಡಿಕೆದಾರರಿಂದ ನಿರಂತರ ಆಸಕ್ತಿಯ ಹೊರತಾಗಿಯೂ, ಭಾರತದ ಪ್ರಮುಖ ವಸತಿ ಮಾರುಕಟ್ಟೆಯಲ್ಲಿ ಪ್ರಾಪರ್ಟಿ ಸೇಲ್ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ವರದಿ ಹೇಳಿದೆ. ಭಾರತದ ಪ್ರಮುಖ ಏಳು ನಗರಗಳಲ್ಲಿ ವಸತಿ ಮಾರಾಟವು 2025ರಲ್ಲಿ ಬರೋಬ್ಬರಿ ಶೇ. 14% ರಷ್ಟು ಕುಸಿತ ಕಂಡಿದೆ. 2025ನೇ ಸಾಲಿನಲ್ಲಿ 3.95 ಲಕ್ಷ ಯೂನಿಟ್ಗಳಿಗೆ ಮನೆ ಮಾರಾಟ ತಲುಪಿದ್ದು, 2024 ರಲ್ಲಿ 4.59 ಲಕ್ಷ ಯೂನಿಟ್ ಮಾರಾಟವಾಗಿತ್ತು.
ವಸತಿ ಬೆಲೆ ಭರ್ಜರಿ ಹೆಚ್ಚಳ
ಇನ್ನು ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ವಾರ್ಷಿಕ ಆಧಾರದ ಮೇಲೆ ಸಾಮೂಹಿಕ ಸರಾಸರಿ ವಸತಿ ಬೆಲೆಯು ಶೇ 8% ರಷ್ಟು ಏರಿಕೆ ಕಂಡಿದೆ. 2024ರ 4ನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಪ್ರತಿ ಚದರ ಅಡಿಗೆ 8,590 ರೂಪಾಯಿಯಿಂದ 2025ರ 4 ನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಪ್ರತಿ ಚದರ ಅಡಿಗೆ 9,260 ರೂಪಾಯಿಗೆ ತಲುಪಿದೆ ಎಂದು ವರದಿ ಉಲ್ಲೇಖಿಸಿದೆ.
ಮಾರಾಟವಾಗದ ಪ್ರಾಪರ್ಟಿ ಹೆಚ್ಚಳ
ಬೆಂಗಳೂರಿನಲ್ಲಿ ಮಾರಾಟವಾಗದ ಪ್ರಾಪರ್ಟಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ವಸತಿ ಪ್ರದೇಶಗಳು ಹಾಗೂ ಅಪಾರ್ಟ್ಮೆಂಟ್ಗಳು ಸೇರಿದಂತೆ ಈಗಾಗಲೇ ನಿರ್ಮಾಣವಾಗಿರುವ ಪ್ರಾಪರ್ಟಿಗಳು ಸಹ ಸಕಾಲದಲ್ಲಿ ಸೇಲ್ ಆಗುತ್ತಿಲ್ಲ. ಪೂರೈಕೆ ಮತ್ತು ಬೇಡಿಕೆಯ ನಡುವಿನ ಹೊಂದಾಣಿಕೆ ಸರಿ ಆಗುತ್ತಿಲ್ಲ. 2025ರ ಅಂತ್ಯದ ವೇಳೆಗೆ ಬೆಂಗಳೂರಿನ ಮಾರಾಟವಾಗದ ದಾಸ್ತಾನು ಶೇ. 23% ರಷ್ಟು ಏರಿಕೆಯಾಗಿದೆ. ಇದು ಪ್ರಮುಖ ನಗರಗಳಲ್ಲಿ ಅತ್ಯಂತ ತೀವ್ರ ಹೆಚ್ಚಳವಾಗಿದೆ. ಏಕೆಂದರೆ ಹೊಸ ಪೂರೈಕೆ ಮಾರಾಟವನ್ನು ಮೀರಿಸಿದೆ ಎಂದು ವರದಿ ಹೇಳಿದೆ.
-
GBA: ಆಸ್ತಿ ತೆರಿಗೆ ಬಾಕಿದಾರರಿಗೆ ಶಾಕ್: ಸ್ವತ್ತುಗಳನ್ನು ಪಾಲಿಕೆ ಹೆಸರಿಗೆ ವರ್ಗಾವಣೆ ಕ್ರಮ: ಜಿಬಿಎ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications