50 ಪ್ರಯಾಣಿಕನ್ನೇ ಬಿಟ್ಟು ಬೆಂಗಳೂರು ಏರ್‌ಪೋರ್ಟ್‌ನಿಂದ ಆಕಾಶಕ್ಕೆ ಜಿಗಿದ ವಿಮಾನ: 'ಗೋ ಫಸ್ಟ್ ಏರ್‌ವೇಸ್' ಎಡವಟ್ಟು
ಬೆಂಗಳೂರು, ಜನವರಿ 10: ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ವಿಮಾನವೊಂದು ಟೇಕಾಫ್ ಆಗಿದ್ದು, ತನ್ನ 50 ಪ್ರಯಾಣಿಕರನ್ನು ಬಿಟ್ಟು ಆಕಾಶಕ್ಕೆ ಜಿಗಿದಿದೆ. ಈ ಎಡವಟ್ಟನ್ನು ಮಾಡಿದ್ದು 'ಗೋ ಫಸ್ಟ್' ವಿಮಾನ ಸಂಸ್ಥೆ.
ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ನಿರ್ಲಕ್ಷ್ಯ ತೋರಿಸಿದೆ ಎಂದು ಪ್ರಯಾನಿಕರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನವು ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಟೇಕ್ ಆಫ್ ಆಗಿದೆ ಎಂದು ಟ್ವಿಟರ್‌ನಲ್ಲಿ ತಿಳಿಸಲಾಗಿದೆ. ಈ ಟ್ವಿಟ್‌ಗೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಖ್ಯಾತೆಯನ್ನು ಟ್ಯಾಗ್ ಮಾಡಲಾಗಿದೆ.

ಗೋ ಫಸ್ಟ್ ಏರ್‌ವೇಸ್, ಅಂತಹ ಕನಿಷ್ಠ ಮೂರು ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದೆ. ಬಳಕೆದಾರರು ತಮ್ಮ ವಿವರಗಳನ್ನು ಹಂಚಿಕೊಳ್ಳಲು ಒತ್ತಾಯಿಸಿದೆ. 'ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ' ಎಂದು ಗೋ ಫಸ್ಟ್ ಏರ್‌ವೇಸ್ ತಿಳಿಸಿದೆ.
ಶ್ರೇಯಾ ಸಿನ್ಹಾ ಎಂಬುವವರು 'ಅತ್ಯಂತ ಭಯಾನಕ ಅನುಭವ' ಎಂದು ಕರೆದಿದ್ದಾರೆ. ಪ್ರಯಾಣಿಕರು ಬೆಳಿಗ್ಗೆ 5.35 ಕ್ಕೆ ವಿಮಾನಕ್ಕಾಗಿ ಬಸ್ ಹತ್ತಿದರು ಆದರೆ ಒಂದು ಗಂಟೆ ಅದರಲ್ಲಿಯೇ ಇದ್ದರು ಎಂದು ಅವರು ತಿಳಿಸಿದ್ದಾರೆ.
'@GoFirstairways ನೊಂದಿಗೆ ಅತ್ಯಂತ ಭಯಾನಕ ಅನುಭವವಾಗಿದೆ. 5:35 ಗಂಟೆಗೆ ವಿಮಾನಕ್ಕಾಗಿ ಬಸ್ ಹತ್ತಿದೆ. 6:30 ಆದರೂ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿದ ಬಸ್‌ನಲ್ಲಿ ಇರಿಸಲಾಗಿತ್ತು. ಬಲವಂತದ ನಂತರ ಚಾಲಕ ನಮ್ಮನ್ನು ಬಸ್‌ನಿಂದ ಕೆಳಗಿಳಿಸಿದನು. ಫ್ಲೈಟ್ G8 116 ಟೇಕ್ ಆಫ್ ಆಗಿತ್ತು. 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ಹೋಗಿದೆ. ಇದು ನಿರ್ಲಕ್ಷ್ಯದಿಂದ ಆಗಿದೆ' ಎಂದು ಶ್ರೇಯಾ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಟಿಕೆಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಸತೀಶ್ ಕುಮಾರ್, 'ವಿಮಾನ G8 116 (BLR - DEL) ಪ್ರಯಾಣಿಕರನ್ನು ನೆಲದ ಮೇಲೆ ಬಿಟ್ಟು ಹಾರಿಹೋಯಿತು. 1 ಬಸ್‌ನಲ್ಲಿ 50 ಕ್ಕೂ ಹೆಚ್ಚು ಪ್ರಯಾಣಿಕರನ್ನು ನೆಲದ ಮೇಲೆ ಬಿಡಲಾಯಿತು. ಮತ್ತು ಇನ್ನೊಂದು ಬಸ್‌ನ ಕೆಲವೇ ಪ್ರಯಾಣಿಕರನ್ನು ಹತ್ತಿಸಿಕೊಂಡು ವಿಮಾನ ಟೇಕ್ ಆಫ್ ಆಗಿದೆ' ಎಂದು ಟ್ವೀಟ್ ಮಾಡಿ @GoFirstairwaysಗೆ ಟ್ಯಾಗ್ ಮಾಡಿದ್ದಾರೆ.
Hi Satish, we are sorry for the inconvenience. We have shared your concern along with your details to our team and they'll assist you at the earliest.
— GO FIRST (@GoFirstairways) January 9, 2023
ಬೆಂಗಳೂರಿನ ಆಟೋಪ್ಯಾಕ್ಟ್‌ನಲ್ಲಿ ಉದ್ಯೋಗಿಯಾಗಿರುವ ಸುಮಿತ್‌ಕುಮಾರ್, 'ಪ್ರಯಾಣಿಕರಿಗೆ ಇಂದು (ಸೋಮವಾರ) ಬೆಳಿಗ್ಗೆ 10:00 ಗಂಟೆಗೆ ಏರ್ ಇಂಡಿಯಾ ವಿಮಾನದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ' ಎಂದು ಹೇಳಿದ್ದಾರೆ.
'ನಾವು ಬಸ್‌ನಲ್ಲಿ 54 ಕ್ಕೂ ಹೆಚ್ಚು ಜನರಿದ್ದೇವೆ. ಬೋರ್ಡಿಂಗ್ ಪೂರ್ಣಗೊಂಡಿಲ್ಲ. ಬೆಳಿಗ್ಗೆ 6:20 ಕ್ಕೆ ವಿಮಾನವಿತ್ತು. ಮತ್ತು ಅವರು ನಮ್ಮನ್ನು ರಾತ್ರಿ 10 ಗಂಟೆಗೆ ಮತ್ತೊಂದು ವಿಮಾನ ಏರ್ ಫ್ಲೈಟ್‌ಗೆ ವ್ಯವಸ್ಥೆ ಮಾಡಿದರು. ನಾಲ್ಕು ಬಸ್‌ಗಳಿವೆ. ನಾವು ಮೂರನೇ ಬಸ್‌ನಲ್ಲಿದ್ದೆವು. ನಾಲ್ಕನೇ ಬಸ್ಸಿನಲ್ಲಿ ಪ್ರಯಾಣಿಕರು ಹತ್ತಿದರು. ಆದರೆ ಮೂರನೇ ಬಸ್ಸು ಗೇಟ್ ಬಳಿಯೇ ಇತ್ತು. ವಿಮಾನವು ಬೆಂಗಳೂರಿನಿಂದ ದೆಹಲಿಗೆ ಟೇಕಾಫ್ ಆಗುತ್ತತ್ತು. ಫ್ಲೈಟ್ ಟೇಕಾಫ್ ಆಗುತ್ತದೋ ಇಲ್ಲವೋ ಎಂದು ಗ್ರೌಂಡ್ ಸ್ಟಾಫ್ ಪರಿಶೀಲಿಸುತ್ತಿದ್ದರು. ಆರಂಭದಲ್ಲಿ ಫ್ಲೈಟ್ ವಾಪಸಾಗುತ್ತೆ ಅಂತ ಹೇಳಿದರು. ಆದರೆ, ಫ್ಲೈಟ್ ವಾಪಾಸ್ಸು ಬರಲೇ ಇಲ್ಲ' ಎಂದು ಕುಮಾರ್ 'ಎನ್‌ಡಿಟಿವಿ'ಗೆ ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳು ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆಯು ಬೆಳಕಿಗೆ ಬಂದಿದೆ. ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ 70 ವರ್ಷದ ಮಹಿಳೆಯ ಮೇಲೆ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದ. ಆರು ವಾರಗಳ ನಂತರ ಪ್ರಯಾಣಿಕರನ್ನು ಬಂಧಿಸಲಾಗಿದೆ. ಕಳೆದ ವಾರವಷ್ಟೇ ಪೊಲೀಸರಿಗೆ ದೂರು ನೀಡಿದ್ದ ಏರ್ ಇಂಡಿಯಾ ತನ್ನ ತಪ್ಪನ್ನು ಒಪ್ಪಿಕೊಂಡಿದೆ












Click it and Unblock the Notifications