• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಯಿ ಚಿನ್ನ ಕದ್ದು ಪ್ರಿಯಕರನೊಂದಿಗೆ ಮಜಾ: ಕಿಲಾಡಿ ಲವ್‌ಬರ್ಡ್ಸ್ ಬಂಧನ

|
Google Oneindia Kannada News

ಬೆಂಗಳೂರು, ಮೇ17: ಮನೆಯಲ್ಲಿ ಅಮ್ಮ ಮಗಳು ಪ್ರೀತಿಯಿಂದ ಇದ್ದರು. ಮಗಳು ನೆಮ್ಮದಿಯಾಗಿ ಜೀವನ ಮಾಡಲಿ ಎಂದು ಮದುವೆ ಮಾಡಿಕೊಟ್ಟರು. ಆದರೆ ಮಗಳು ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ವಿಚ್ಛೇದನವನ್ನು ಪಡೆದು ತಾಯಿಯ ಮನೆಯನ್ನು ಸೇರಿಕೊಂಡಿದ್ದಳು. ಈ ನಡುವೆ ಕಾರು ಕಲಿಯಲು ಹೋಗಿದ್ದ ವೇಳೆ ಚಿಗುರಿದ ಹೊಸ ಪ್ರೇಮ ಮಗಳನ್ನು ಜೈಲು ಸೇರುವಂತೆ ಮಾಡಿದೆ.

ದೀಪ್ತಿ ಎಂಬ ಮಹಿಳೆ ಮದುವೆಯಾಗಿ ವಿಚ್ಛೇದನ ಪಡೆದಿದ್ದಳು. ಕಾರು ಕಲಿಯೋಕೆ ಅಂತಾ ಡ್ರೈವಿಂಗ್ ಸ್ಕೂಲ್ ಸೇರಿಕೊಂಡಿದ್ದಳು. ಈಕೆಗೆ ಡ್ರೈವಿಂಗ್ ಹೇಳಿ ಕೊಡ್ತಾ ಇದ್ದದ್ದು ಮದನ್ ಎಂಬ ಚಾಲಕ. ಕಾರಲ್ಲಿ ಓಡಾಡ್ತಾ ಓಡಾಡ್ತನೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿ ಪರಸ್ಪರ ಓಡಾಟ ಸುತ್ತಾಟ ಎಲ್ಲವೂ ನಡೆಸಿದ್ದಾರೆ. ಅಷ್ಟೇ ಅಲ್ಲ ಈತನಿಗಾಗಿ ತನ್ನ ಮನೆಯಲ್ಲಿದ್ದ ತಾಯಿಯ 1 ಕೆಜಿಯಷ್ಟು ಚಿನ್ನದ ಒಡವೆಗಳನ್ನು ತಂದುಕೊಟ್ಟಿದ್ದಾಳೆ. 2021 ರಿಂದ ಶುರುವಾದ ಕಳ್ಳಾಟ ಬರೋಬ್ಬರಿ ಒಂದು ವರ್ಷದವರೆಗೆ ನಡೆದಿದೆ. ಇತ್ತೀಚೆಗೆ ಕಬೋರ್ಡ್ ನಲ್ಲಿ ಚಿನ್ನದ ಒಡವೆ ನೋಡಿದ ತಾಯಿಗೆ ಅನುಮಾನ ಶುರುವಾಗಿತ್ತು. ಒರಿಜಿನಲ್ ಚಿನ್ನ ಇದ್ದ ಜಾಗದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ಕಾಣಿಸಿತ್ತು. ತೂಕದಲ್ಲಿಯೂ ವ್ಯತ್ಯಾಸ ಕಂಡುಬಂದಿತ್ತು. ಹೆಚ್ಚಾಗಿ ಇದ್ದ ಚಿನ್ನದ ಒಡವೆ ಇದ್ದಕ್ಕಿದ್ದಂತೆ ಕಡಿಮೆ ಕೂಡ ಆಗಿಬಿಟ್ಟಿತ್ತು.ಇದ್ದ ಇಬ್ಬರಲ್ಲಿ‌ ಕದ್ದವರ್ಯಾರು ಅನ್ನೋ ಅನುಮಾನ ಶುರುವಾಗಿತ್ತು.ಅಲ್ಲಿಗೆ ಮಗಳ ಮೇಲೆ ಅನುಮಾನ ಮೂಡಿತ್ತು. ಚಿನ್ನಾಭರಣದ ಬಗ್ಗೆ ಮಗಳನ್ನು ಪ್ರಶ್ನಿಸಿದ್ರೆ ತನಗೇನು ಗೊತ್ತಿಲ್ಲ ಎಂದು ತಾಯಿಯ ಮುಂದೆಯೇ ವರಸೆಯನ್ನು ತೆಗೆದಿದ್ದಳು. ಇಷ್ಟಾಗುತ್ತಿದ್ದಂತೆ ತಾಯಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .ಠಾಣೆಗೆ ಇಬ್ಬರನ್ನು ಕರೆಸಿ ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಚಿನ್ನದ ಒಡವೆ ತೆಗೆದುಕೊಂಡು ಹೋಗಿದ್ದ ದೀಪ್ತಿ ಎಲ್ಲವನ್ನು ಮದನ್ ಗೆ ನೀಡಿದ್ದಳು.

ಮನೆಯಲ್ಲಿದ್ದ ತಾಯಿ ಚಿನ್ನ ತಂದಳು..

ದೀಪ್ತಿ ಮತ್ತು ಮದನ್ ನಡುವೆ ಪ್ರೇಮಾಕುರವಾದ ನಂತರ ಮನೆಯಲ್ಲಿದ್ದ ಒಂದೊಂದೇ ಚಿನ್ನ ಸಾಗಾಟ ಪ್ರಾರಂಭವಾಗಿತ್ತು. ಆ ಚಿನ್ನವನ್ನು ಹಂತ ಹಂತವಾಗ ಪಡೆದಿದ್ದ ಮದನ್ ಮಣಪ್ಪುರಂ ಗೊಲ್ಡ್ ಲೋನ್ ಮತ್ತು ಮುತ್ತೂಟ್ ಗೊಲ್ಡ್ ಲೋನ್ ನಲ್ಲಿ ಅಡವಿಟ್ಟು ಕೆಲವನ್ನು ಮಾರಾಟ ಮಾಡಿದ್ದರು. ಚಿನ್ನವನ್ನು ಮಾರಾಟ ಮಾಡಿದ್ದ ಬಂದ ಹಣದಲ್ಲಿ ಶೋಕಿಯನ್ನು ಮಾಡಿದ್ದರು.

ಮೂರು ಐಶಾರಾಮಿ ಕಾರು ಖರೀದಿ.

ಚಿನ್ನವನ್ನು ಮಾರಾಟ ಮಾಡಿದ್ದ ಹಣ 30 ಲಕ್ಷಕ್ಕೂ ಹೆಚ್ಚು. ಈ ಹಣದಲ್ಲಿ ಮೂರು ಐಶಾರಾಮಿ ಕಾರನ್ನು ಸುಮಾರು 18 ಲಕ್ಷ ಮೌಲ್ಯದಲ್ಲಿ ತೆಗೆದುಕಂಡಿದ್ದರು. ಕಾರನ್ನು ಖರೀದಿಸಿ ಉಳಿದ ಹಣವನ್ನು ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತೆ ಆಧುನಿಕ ರೋಮಿಯೋ ಜೂಲಿಯಟ್ ಜೋಡಿ ಜಾಲಿರೈಡು ಮಾಡುತ್ತ ಊರೂರು ಸುತ್ತಿ ಮಸ್ತ್ ಮಜಾವನ್ನು ಮಾಡುತ್ತಿದ್ದರು.

Bengaluru: Girl steals moms 1 kg Gold for boyfreind; Police Arrest Lovers

ಕಿಲಾಡಿ ಲವ್ ಬರ್ಡ್ ಗಳ ಹಿನ್ನೆಲೆ

ದೀಪ್ತಿ ವಯಸ್ಸು ಇನ್ನೂ 24 ವರ್ಷ ಮದುವೆಯಾಗಿ ಗಂಡನಿಂದ ವಿಚ್ಛೇದನ ಪಡೆದ್ದಳು. ಅಮೃತಹಳ್ಳಿಯ ಜಕ್ಕೂರು ಲೇಔಟ್ ನಲ್ಲಿ ತನ್ನ ತಾಯಿ ಜೊತೆಗೆ ವಾಸವಾಗಿದ್ದಾಳೆ. ಈಕೆಯ ತಾಯಿಯದ್ದು ಟೈಲರ್ ಕೆಲಸ. ಈಕೆಯ ಪ್ರಿಯಕರನೇ ಮದನ್. ವಯಸ್ಸು 27 ವರ್ಷ, ಈತನು ಅಮೃತಹಳ್ಳಿಯ ನಿವಾಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಹೊಟ್ಟೆಪಾಡಿಗೆ ಡ್ರೈವಿಂಗ್ ಸ್ಕೂಲ್ ಒಂದರಲ್ಲಿ ಕಾರ್ ಡ್ರೈವಿಂಗ್ ಹೇಳಿಕೊಡ್ತಿದ್ದ. ಇಷ್ಟಾಗಿದ್ದಿದ್ದರೇ ಕಂಬಿ ಹಿಂದೆ ಬೀಳುತ್ತಿರಲಿಲ್ಲ. ಡ್ರೈವಿಂಗ್ ಕಲಿಯೋಕೆ ಬಂದವಳನ್ನೇ ಬುಟ್ಟಿಗೆ ಹಾಕ್ಕೊಂಡಿದ್ದಾನೆ. ನಂತರ ಆಕೆಯ ಮನೆಯಲ್ಲಿದ್ದ ಒಂದೊಂದೇ ಚಿನ್ನದ ಒಡವೆ ತಂದು ಅಡಮಾನ ಇಟ್ಟು.ಇಬ್ಬರು ಮಜಾ ಮಾಡಿದ್ದಾರೆ.

ಪ್ರೇಮಿಗಳನ್ನು ಬಂಧಿಸಿದ ಅಮೃತಹಳ್ಳಿ ಪೊಲೀಸರು

ಚಿನ್ನ ಕಳವು ಬಗ್ಗೆ ತಾಯಿ ಕೊಟ್ಟ ದೂರಿನಂತೆ ತನಿಖೆ‌ ನಡೆಸಿದ ಅಮೃತಹಳ್ಳಿ ಠಾಣೆ ಪೊಲೀಸರು ದೀಪ್ತಿ ಮತ್ತು ಮದನ್ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 700 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು. ಪ್ರೇಮಿಗಳಿಬ್ಬರನ್ನು ಜೈಲಿಗೆ ತಳ್ಳಿದ್ದಾರೆ.

   ಪ್ರವಾಹದಿಂದ ತತ್ತರಿಸಿದ ಅಸ್ಸಾಂ:ಸಂಕಷ್ಟದಲ್ಲಿ ಸಿಲುಕಿದ 4 ಲಕ್ಷಕ್ಕೂ ಹೆಚ್ಚು ಜನ | Oneindia Kannada
   English summary
   Bengaluru: Girl steals mother's 1 kg Gold for boyfreind; Amruthahalli Police Arrest Lovers.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X