• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ತೆರಿಗೆ ಹೊರೆ!

|

ಬೆಂಗಳೂರು, ಜೂನ್ 11 : ಕೊರೊನಾ ವೈರಸ್ ಸೋಂಕಿನ ಪರಿಣಾಮ ಉದ್ಯೋಗ ನಷ್ಟ, ವೇತನ ಕಡಿತದಿಂದ ಬೆಂಗಳೂರಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೇ ಬಿಬಿಎಂಪಿ ಬೆಂಗಳೂರಿನ ಜನರ ಜೇಬಿಗೆ ಹೊಸ ತೆರಿಗೆ ಮೂಲಕ ಕತ್ತರಿ ಹಾಕಲು ಮುಂದಾಗಿದೆ.

   DK Shivakumar finally gets good news from BS Yediyurappa | Oneindia Kannada

   ನಿಮ್ಮ ಮನೆಯ ಬಾಗಿಲಿಗೆ ಬಂದು ಪೌರ ಕಾರ್ಮಿಕರು ಕಸವನ್ನು ತೆಗೆದುಕೊಂಡು ಹೋಗಲು ಪ್ರತಿ ತಿಂಗಳು 200 ರೂ. ತೆರಿಗೆ ಕಟ್ಟಬೇಕು. ಇದಕ್ಕಾಗಿ ಘನ ತ್ಯಾಜ್ಯ ನಿರ್ವಹಣೆ ಬೈಲಾಕ್ಕೆ ಬಿಬಿಎಂಪಿ ತಿದ್ದುಪಡಿಯನ್ನು ತರಲಿದೆ.

   ಬೆಂಗಳೂರಿನ 8 ವಲಯಗಳಿಂದ ಸಂಗ್ರಹವಾದ ಆಸ್ತಿ ತೆರಿಗೆ ಎಷ್ಟು?

   ಈ ಬೈಲಾ ಅನ್ವಯ ಬಿಬಿಎಂಪಿ ಕಟ್ಟಡದ ಮಾಲೀಕರಿಂದ ವಿಂಗಡನೆ ಮಾಡಿದ ಕಸವನ್ನು ಸಂಗ್ರಹ ಮಾಡಲು 200 ರೂ. ತೆರಿಗೆ ವಿಧಿಸಲಿದೆ. "ಇಂತಹ ಪ್ರಸ್ತಾಪ ಬಿಬಿಎಂಪಿ ಮುಂದಿದೆ" ಎಂದು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಹೇಳಿದ್ದಾರೆ.

   ಕಸ ಸಂಗ್ರಹ ಮಾಡುವ ಕಾರ್ಮಿಕನ ಮೇಲೆ ಹೂಮಳೆ ಸುರಿದ ನಾಗರಿಕರು

   ಈಗಾಗಲೇ ಕಟ್ಟಡದ ಮಾಲೀಕರು ಆಸ್ತಿ ತೆರಿಗೆ ಕಟ್ಟುವಾಗ ಘನ ತಾಜ್ಯ ನಿರ್ವಹಣೆ ಸೆಸ್ ಕಟ್ಟುತ್ತಿದ್ದಾರೆ. ಆದರೆ, ಈಗ ಪ್ರತ್ಯೇಕವಾಗಿ ಕಸ ಸಂಗ್ರಹಣೆಗೆ ತೆರಿಗೆ ವಸೂಲಿ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

   ಬೆಂಗಳೂರು-ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಜುಲೈನಲ್ಲಿ ಚಾಲನೆ

   ಕಸ ಸಂಗ್ರಹಣೆಯ ಆಧಾರದ ಮೇಲೆ ತೆರಿಗೆಯಲ್ಲಿಯೂ ವ್ಯತ್ಯಾಸವಾಗಲಿದೆ. ಎಲ್ಲಾ ಮನೆಗಳ ಮಾಲೀಕರು 200 ರೂ. ತೆರಿಗೆಯನ್ನು ಪಾವತಿ ಮಾಡಬೇಕು.

   ಪ್ರತಿ ದಿನ 5 ಕೆಜಿಯಷ್ಟು ಕಸ ಸಂಗ್ರಹವಾದರೆ ತಿಂಗಳಿಗೆ 500 ರೂ., 10 ಕೆಜಿ ಕಸ ಸಂಗ್ರಹವಾದರೆ 1,400 ರೂ., 25 ಕೆಜಿ ಕಸ ಸಂಗ್ರಹವಾದರೆ 3,500 ರೂ. ತೆರಿಗೆಯನ್ನು ಪಾವತಿ ಮಾಡಬೇಕಿದೆ.

   50 ಕೆಜಿ ಕಸ ಸಂಗ್ರಹವಾದರೆ 7,000 ಮತ್ತು 100 ಕೆಜಿ ಕಸ ಸಂಗ್ರಹವಾದರೆ 14,000 ರೂ.ಗಳನ್ನು ತಿಂಗಳಿಗೆ ನೀಡಬೇಕಾಗುತ್ತದೆ. ಇನ್ನು ಖಾಲಿ ನಿವೇಶನಗಳನ್ನು ಹೊಂದಿರುವ ಮಾಲೀಕರಿಗೆ ಸಹ ಕಸ ಸಂಗ್ರಹದ ತೆರಿಗೆ ಹಾಕಲು ಬಿಬಿಎಂಪಿ ಮುಂದಾಗಿದೆ.

   English summary
   Bruhat Bengaluru Mahanagara Palike (BBMP) to impose Rs 200 cess to pick up waste from your doorstep. BBMP to change bye-laws on solid waste management.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X