ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆಗೆ ತರಲಿದೆ ಓಲಾ

ಬೆಂಗಳೂರು, ಮೇ 10; ಕೋವಿಡ್ 2ನೇ ಅಲೆ ಜನರಲ್ಲಿ ಆತಂಕ ಉಂಟುಮಾಡಿದೆ. ಹಲವಾರು ಸೋಂಕಿತರಿಗೆ ಆಕ್ಸಿಜನ್ ಅವಶ್ಯಕತೆ ಇದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಮನೆಗೆ ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಬಂದು ತಲುಪಲಿದೆ.

ಕೋವಿಡ್ ಸೋಂಕಿತರು ಮತ್ತು ಸೋಂಕಿನಿಂದ ಗುಣಮುಖಗೊಂಡ ಕೆಲವು ಜನರಿಗೆ ಆಕ್ಸಿಜನ್ ಸೌಲಭ್ಯ ಒದಗಿಸುವ ಅಗತ್ಯವಿದೆ. ಇದಕ್ಕಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಬಳಕೆ ಮಾಡಲಾಗುತ್ತಿದೆ. ಓಲಾ ಬೆಂಗಳೂರು ನಗರದಲ್ಲಿ ಉಚಿತವಾಗಿ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭಿಸಿದೆ.

ಗೀವ್ ಇಂಡಿಯಾ ಎಂಬ ಅಭಿಯಾನದಡಿ ಓಲಾ ಈ ಸೇವೆಯನ್ನು ಆರಂಭಿಸಿದೆ. ಓಲಾ ಅಪ್ಲಿಕೇಶನ್ ಮೂಲಕ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ ಉಚಿತವಾಗಿ ಮನೆಗೆ ತಲುಪಿಸುವ ಸೇವೆಯನ್ನು ಮೇ 10ರಂದು ಆರಂಭಿಸಲಾಗಿದೆ ಎಂದು ಓಲಾ ಹೇಳಿದೆ.

Get Free Doorstep Delivery Of Oxygen Concentrators By OLA

"ಇಂತಹ ಕಠಿಣ ಸಮಯದಲ್ಲಿ ನಾವು ಜನರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ. ಒ2 ಫಾರ್ ಇಂಡಿಯಾ ಅಭಿಯಾನದಡಿ ಗೀವ್ ಇಂಡಿಯಾ ಅವರ ಜೊತೆ ಸೇರಿ ನಾವು ಸುಲಭವಾಗಿ ಜನರಿಗೆ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ ಸಿಗುವಂತೆ ಮಾಡಲಿದ್ದೇವೆ ಹಾಗೂ ಉಚಿತವಾಗಿ ಮನೆಗೆ ತಲುಪಿಸಲಿದ್ದೇವೆ" ಎಂದು ಓಲಾ ಸಂಸ್ಥಾಪಕ ಭವಿಷ್‌ ಅಗರ್‌ವಾಲ್‌ ಹೇಳಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಒಂದು ವಾರದಲ್ಲಿ ದೇಶದ ಇತರ ನಗರಳಿಗೆ ಈ ಸೇವೆ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ.

ಜನರು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ ಪಡೆಯಲು ಓಲಾ ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕು ಮತ್ತು ಕೆಲವು ಮೂಲ ಮಾಹಿತಿಗಳನ್ನು ದಾಖಲು ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+