ಜರ್ಮನ್ ವಿದ್ಯಾರ್ಥಿಗಳಿಂದ 'ಆಚಾರ್ಯ' ಗುಣಗಾನ
ಬೆಂಗಳೂರು,
ನ. 27 : ಭಾರತದಲ್ಲಿನ ಮೂಲಸೌಕರ್ಯ ಯೋಜನೆಗಳ ಅಧ್ಯಯನ ಮಾಡುವ ಉದ್ದೇಶದಿಂದ ಜರ್ಮನಿಯ ಸ್ಟಾಟ್ ಗಟ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಪ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿದ್ದಾರೆ. ಹೆಸರಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಆಚಾರ್ಯ ವಿದ್ಯಾಸಂಸ್ಥೆಯ ಎನ್ಆರ್‌ವಿ ಸ್ಕೂಲ್ ಆಫ್ ಆರ್ಕಿಟೆಕ್ಟ್ ವಿದೇಶಿ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡುತ್ತಿದೆ. [ಪದವೀಧರರಿಗೆ ಕೆಲಸ ಇಲ್ಲಿದೆ] id="toptextpromo"> id='are-slot-1' class='oiad oi-axt oiadv'>ಏಷ್ಯಾ,
ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಖಂಡಗಳ ಮತ್ತು ಜರ್ಮನಿ ದೇಶದ ಸುಮಾರು 30 ಪದವಿ ವಿದ್ಯಾರ್ಥಿಗಳು ಈ ಅಧ್ಯಯನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರೊಫೆಸರ್ ಡೀಟರ್ಲೆ ಅವರ ನೇತೃತ್ವದಲ್ಲಿ ಬಂದಿರುವ ವಿದ್ಯಾರ್ಥಿಗಳು ಆಚಾರ್ಯ ಸಂಸ್ಥೆಯ ವಾತಾವರಣ, ಆತಿಥ್ಯ, ಬೆಂಗಳೂರಿನ ಹವಾಮಾನ ಕಂಡು ಪುಳಕಿತರಾಗಿದ್ದಾರೆ. [ಆಚಾರ್ಯ ಸಂಸ್ಥೆಯಲ್ಲಿ ಹೊಸ ಅಲೆ] [ಆಚಾರ್ಯ ಹಬ್ಬ 2013 ಚಿತ್ರಗಳು] id='are-slot-2' class='oiad oi-axt oiadv'>
ಡೀನ್ ಪ್ರೊ. ವಸಂತ್ ಭಟ್ ಪ್ರಶಂಸೆ
ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಟ್‌ನ ಡೀನ್ ಆಗಿರುವ ಪ್ರೊ. ವಸಂತ್ ಭಟ್ ಅವರು, "ವಿದೇಶಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಮಾತ್ರವಲ್ಲ, ವಿಭಿನ್ನ ಸಂಸ್ಕೃತಿ ಇರುವ ಭಾರತದಲ್ಲಿ, ಕಡಿಮೆ ಮೂಲಸೌಕರ್ಯಗಳ ನಡುವೆ ಭಾರೀ ಪ್ರಮಾಣದ ಯೋಜನೆಗಳನ್ನು ನಿಭಾಯಿಸುವ ಕುರಿತು ಅನುಭವ ಗಳಿಸಲಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಕೂಡ ಅವರು ಸಾಕಷ್ಟು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ" ಎಂದು ವಿವರಣೆ ನೀಡಿದ್ದಾರೆ.

ತಿಳಿವಳಿಕೆ ಮತ್ತು ಜ್ಞಾನ ಇನ್ನಷ್ಟು ವೃದ್ಧಿ
ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಟ್‌ನ ವಿದ್ಯಾರ್ಥಿ ದರ್ಶನ್ ಗೌಡ ಅವರು, "ಜರ್ಮನಿ ವಿಶ್ವವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಡನೆ ನಡೆಸಿದ ವಿಚಾರ ವಿನಿಮಯದಿಂದಾಗಿ ವಾಸ್ತುಶಾಸ್ತ್ರದ ಬಗ್ಗೆ ನನಗಿರುವ ತಿಳಿವಳಿಕೆ ಮತ್ತು ಜ್ಞಾನ ಇನ್ನಷ್ಟು ವೃದ್ಧಿಯಾಗಿದೆ. ಮೂಲಭೂತ ಸೌಕರ್ಯ ವಿಭಾಗದಲ್ಲಿ ವಿಶ್ವಾದ್ಯಂತ ಇರುವ ಅವಕಾಶಗಳ ಬಗ್ಗೆ ಕೂಡ ಮಾಹಿತಿ ದೊರೆತಿದೆ" ಎಂದು ಆನಂದತುಂದಿಲರಾಗಿ ಹೇಳುತ್ತಾರೆ.

ಉನ್ನತ ಅಧ್ಯಯನಕ್ಕೆ ಜರ್ಮನಿಗೆ
ಆಚಾರ್ಯ ಸ್ಕೂಲ್ ಆಫ್ ಆರ್ಕಿಟೆಕ್ಟ್‌ನ ಮೊದಲ ವರ್ಷದ ವಿದ್ಯಾರ್ಥಿನಿಯಾಗಿರುವ ಸಾಹಿತ್ಯ ಅವರು, ಜರ್ಮನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜ್ಞಾನಮಟ್ಟ ಮತ್ತು ಅವರ ನಿಖರತೆ ಕುರಿತು ತುಂಬಾ ಪ್ರಭಾವಿತರಾಗಿದ್ದು, ಉನ್ನತ ಅಧ್ಯಯನಕ್ಕಾಗಿ ಯುನಿವರ್ಸಿಟಿ ಆಫ್ ಸ್ಟಾಟ್ ಗಟ್ - ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್‌ಗೆ ಹೋಗಬೇಕೆಂದು ನಿಶ್ಚಯಿಸಿದ್ದಾರೆ.

ಆಚಾರ್ಯ ಸಂಸ್ಥೆ ಕೊಂಡಾಡಿದ ಜರ್ಮನ್
ಕಾಲೇಜು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿ ವೈಫೈ, ಡಿಸೈನ್ ಸ್ಟುಡಿಯೋದಲ್ಲಿ ಎವಿ ಉಪಕರಣಗಳು, ಉಪನ್ಯಾಸಕರ ಹಾಲ್ ಮುಂತಾದವುಗಳನ್ನು ನೋಡಿ, ಜರ್ಮನ್ ದೇಶದಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯ ಉನ್ನತ ಮಟ್ಟದ ಸೌಲಭ್ಯ ಸಿಗುತ್ತದೆ. ಆಚಾರ್ಯ ಶಿಕ್ಷಣ ಸಂಸ್ಥೆ ಕೂಡಾ ತನ್ನ ಕಾಲೇಜಿನಲ್ಲಿ ಈ ಸೌಲಭ್ಯಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆಂದು ನಿಯೋಗ ಮೆಚ್ಚುಗೆ ವ್ಯಕ್ತ ಪಡಿಸಿದೆ.












Click it and Unblock the Notifications