ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಅಭಿವೃದ್ಧಿ: ಡಿಸಿಎಂ ಜತೆ ಜರ್ಮಿನಿ ನಿಯೋಗ ಚರ್ಚೆ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 7: ದಿನದಿಂದ ದಿನಕ್ಕೆ ತಂತ್ರಜ್ಞಾನ ಹೀಗೆ ಎಲ್ಲಾ ರೀತಿಯಲ್ಲೂ ಬೆಳೆಯುತ್ತಿರುವ ಬೆಂಗಳೂರಿನ ಇನ್ನಷ್ಟು ಅಭಿವೃದ್ಧಿಯ ಕುರಿತಂತೆ ಚರ್ಚಿಸಲು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಜರ್ಮನಿ ನಿಯೋಗವನ್ನು ಸೋಮವಾರ ಭೇಟಿ ಮಾಡಿದರು.

ಬೆಂಗಳೂರು ಅಭಿವೃದ್ಧಿ ಹಾಗೂ ಹೊಸ ಯೋಜನೆಗಳಿಗೆ ನೂತನ ಟೆಕ್ನಾಲಜಿ ಬಳಕೆ ಇತ್ಯಾದಿ ವಿಚಾರಗಳ ಬಗ್ಗೆ ಜರ್ಮನಿಯ ಪ್ರತಿನಿಧಿಗಳಾದ ಪೊಲಿಟಿಕಲ್‌ ಅಂಡ್‌ ಕಾರ್ಪೊರೇಟರ್‌ ಅಫೇರ್ಸ್‌ನ ಅಡ್ವೈಸರ್ ಆದ ಅಂಬಿಕಾ ಬನೋತ್ರ ಹಾಗೂ ಫಡೆರಲ್‌ ಜನರಲ್‌ ಕಾನ್ಸುಲೇಟ್‌ ಜನರಲ್‌ ಮಾರ್ಗಿಟ್‌ ಹೆಲ್‌ವಿಗ್‌ ಅವರು ಪರಮೇಶ್ವರ್‌ ಅವರನ್ನು ಭೇಟಿ ಮಾಡಿದರು.

ಸಮಾಜಕಲ್ಯಾಣ ಇಲಾಖೆಗೂ ಬಂತು 24/7 ಸಹಾಯವಾಣಿಸಮಾಜಕಲ್ಯಾಣ ಇಲಾಖೆಗೂ ಬಂತು 24/7 ಸಹಾಯವಾಣಿ

ಬೆಂಗಳೂರಿನಲ್ಲಿ ಪ್ರಮುಖ ಸಮಸ್ಯೆ ಎಂದರೆ ಟ್ರಾಫಿಕ್, ಕಸ ಹಾಗೂ ರಸ್ತೆ ಕಾಮಗಾರಿಗಳು. ಗುಂಡಿ ಬೀಳದಂಥ ರಸ್ತೆ‌ ನಿರ್ಮಾಣಕ್ಕೆ ಈಗಾಗಲೇ ವೈಟ್‌ಟಾಪಿಂಗ್ ಮಾಡಿಸಲಾಗುತ್ತಿದೆ.‌ ಈ ರಸ್ತೆ 25 ವರ್ಷಕ್ಕೂ ಹೆಚ್ಚು ವರ್ಷ ಬಾಳಿಕೆ ಬರಲಿದೆ.

Germany delegates meet DCM Parameshwar

ಅದೇ ರೀತಿ ಟ್ರಾಫಿಕ್ ನಿಯಂತ್ರಣಕ್ಕೂ‌ ಕೇಂದ್ರ ರಚಿಸಿದ್ದೇವೆ. ಆದರೂ ಇನ್ನಷ್ಟು ಪ್ರಭಲವಾದ ಯೋಜನೆ ತರಲು ಉದ್ದೇಶಿಸಿದ್ದೇವೆ ಎಂದರು. ಜರ್ಮನಿಯಲ್ಲಿನ ಅಭಿವೃದ್ಧಿ ಬಗ್ಗೆ ನಮ್ಮ‌ತಂಡ ಆಗಮಿಸಿ ಅಧ್ಯಯನ‌ ಮಾಡಲಾಗುವುದು ಎಂದರು.

English summary
Consulate general of the federal republic of Germany Margit hellwig and political and corporate advisor Ambika Banotra have met deputy chief minister Dr.G.Parameshwar at Vidhana Soudha on Tuesday and discussed about development of Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X