ಏರ್ಪೋರ್ಟ್ ರಸ್ತೆಯಲ್ಲಿ ಅಕ್ರಮ ಟೋಲ್ ವಸೂಲಿಗೆ ಸಾರ್ವಜನಿಕರ ಆಕ್ಷೇಪ
ಬೆಂಗಳೂರು, ಮೇ 22: ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್ಗಳನ್ನು ಮುಚ್ಚಿದ್ದರೂ ಟೋಲ್ ಸಂಗ್ರಹ ಮಾಡುತ್ತಿರುವುದಕ್ಕೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗುತ್ತಿದೆ.
Recommended Video
ಬೆಂಗಳೂರಿನ ಹೆಬ್ಬಾಳದಿಂದ ಏರ್ಪೋರ್ಟ್ ಟೋಲ್ವರೆಗೆ ಸಿಗ್ನಲ್ರಹಿತ ಎಕ್ಸ್ಪ್ರೆಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಬೆಂಗಳೂರಿನಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ವಾಹನ ದಟ್ಟಣೆ ನಿಯಂತ್ರಣ ಹಾಗೂ ವಾಹನ ತಪಾಸಣೆಗೆ ನೆರವಾಗುವ ಉದ್ದೇಶದಿಂದ ಎಕ್ಸ್ಪ್ರೆಸ್ ಫ್ಲೈಓವರ್ ಮಾರ್ಗವನ್ನು ಪೊಲೀಸರು ಮುಚ್ಚಿದ್ದಾರೆ.
ಹೀಗಾಗಿ ಸಾರ್ವಜನಿಕರು ಸರ್ವೀಸ್ ರಸ್ತೆಯನ್ನು ಬಳಸಿಯೇ ಪ್ರಯಾಣಿಸುತ್ತಿದ್ದಾರೆ, ಆದಾಗ್ಯೂ ಏರ್ಪೋರ್ಟ್ ಬಳಿಯ ಟೋಲ್ನಲ್ಲಿ ಪ್ರತಿ ವಾಹನಕ್ಕೆ 95 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿರುವ ಕಿರಿಕ್ ಕೀರ್ತಿ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ಕೊಡಲಾಗದೆ ಟೋಲ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
ಪ್ರತಿ ದಿನ ಅಗತ್ಯ ಸೇವೆಗಳಿಗಾಗಿ ಹಲವಾರು ಟ್ಯಾಕ್ಸಿ ಹಾಗೂ ಆಸ್ಪತ್ರೆಗಾಗಿ ಕೆಲವು ಸಾರ್ವಜನಿಕರು ಬೆಂಗಳೂರಿಗೆ ಈ ಟೋಲ್ ಮೂಲಕ ಹೋಗಿ ಬಂದು ಮಾಡುತ್ತಾರೆ. ಈ ಹಗಲು ದರೋಡೆ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ ಎಂದು ಕಿರಿಕ್ ಕೀರ್ತಿ ಆಗ್ರಹಿಸಿದ್ದಾರೆ.












Click it and Unblock the Notifications