Property Tax: ಆಸ್ತಿ ಮಾಲೀಕರಿಗೆ GBA ಶಾಕ್: ತೆರಿಗೆ ವಸೂಲಾತಿಗೆ ಪಾಲಿಕೆ ಮಾಸ್ಟರ್ ಪ್ಲಾನ್
ಬೆಂಗಳೂರು, ನವೆಂಬರ್ 05: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ತನ್ನ ವ್ಯಾಪ್ತಿ ಆಸ್ತಿದಾರರಿಗೆ ಡಿಜಿಟಲ್ ಖಾತಾ (ಇ-ಖಾತಾ), ಬಿ-ಖಾತಾ, ಎ-ಖಾತಾ ವಿತರಣೆ, ಸ್ವಚ್ಚತಾ ಅಭಿಯಾನ ಸೇರಿದಂತೆ ಹಲವು ಕ್ರಮ ಕೈಗೊಂಡಿದೆ. ಇದೀಗ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹಿಸಲು ಮಹತ್ವ ಪ್ಲಾನ್ ಮಾಡಿಕೊಂಡಿದೆ. ಈ ಬಗ್ಗೆ ಖುದ್ದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ನವೆಂಬರ್ 2025 ರಲ್ಲಿ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಣೆ ಹಾಗೂ ಕಡಿಮೆ ವಿಸ್ತೀರ್ಣ ಘೋಷಣೆ ನೀಡಿರುವ ಆಸ್ತಿಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವ ಮೂಲಕ ಬಾಕಿ ಮೊತ್ತವನ್ನು ವಸೂಲಾತಿ ಮಾಡಲು 'ಟ್ಯಾಕ್ಸ್ ಡ್ರೈವ್' (ತೆರಿಗೆ ಅಭಿಯಾನ) ಆಯೋಜಿಸಲಾಗಿದೆ ಎಂದು ಬುಧವಾರ ತಿಳಿಸಿದರು.

ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4,57,951 ಆಸ್ತಿಗಳಿದ್ದು, ಅದರಲ್ಲಿ ವಸತಿ ಆಸ್ತಿಗಳು 3,36,989, ವಸತಿಯೇತರ ಆಸ್ತಿಗಳು 15,949, ವಸತಿ ಮತ್ತು ವಸತಿಯೇತರ ಆಸ್ತಿಗಳು 23,214 ಹಾಗೂ 81,799 ಖಾಲಿ ನಿವೇಶನಗಳು ಇವೆ ಎಂಧು ಅವರು ಲೆಕ್ಕ ಕೊಟ್ಟಿದ್ದಾರೆ.
694 ಕೋಟಿ ರೂ. ತೆರಿಗೆ ಬಾಕಿ
ಇವುಗಳೆಲ್ಲ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಹಣಕಾಸು ಪಡೆದಿದೆ ಒಟ್ಟು 1,242 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈವರೆಗೆ ರೂ. 548 ಕೋಟಿ ತೆರಿಗೆ ಸಂಗ್ರಹವಾಗಿದ್ದು, ಇನ್ನೂ ರೂ. 694 ಕೋಟಿ ಬಾಕಿ ಉಳಿದಿದೆ. ಹೀಗಾಗಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಬಾಕಿ ಮೊತ್ತ ವಸೂಲಾತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆಸ್ತಿಗಳ ತೆರಿಗೆ ವ್ಯಾಪ್ತಿಗೆ ತರಲು ವಿಶೇಷ ವಸೂಲಾತಿ ತಂಡ
ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಜರುಗಿಸಲಾಗುತ್ತಿದೆ. ಇತರೆ ವಿಭಾಗದಿಂದ ಎಲ್ಲಾ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ವಸೂಲಾತಿ ತಂಡಗಳು ರಚನೆಗೊಂಡಿದ್ದು, ಪ್ರತಿಯೊಂದು ಪ್ರದೇಶ ಮಟ್ಟದಲ್ಲಿ ವಸೂಲಾತಿ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಒಟ್ಟು 1,697 ಆಸ್ತಿಗಳಿಗೆ ಪರಿಷ್ಕರಣೆ ಅಗತ್ಯ ಇದೆ. 78,565 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಸಂಗ್ರಹಣಾ ಕಾರ್ಯ ಪ್ರಗತಿಯಲ್ಲಿದೆ.
ಹಲವಾರು ವರ್ಷಗಳಿಂದ ತೆರಿಗೆ ಪಾವತಿಸಿದ ವಸತಿಯೇತರ ಸುಸ್ತಿದಾರರಿಗೆ ಸೂಚನೆಗಳನ್ನು ನೀಡಲಾಗಿದೆ. ಆದರೂ ಸಹ ತೆರಿಗೆ ಪಾವತಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಆಸ್ತಿಗಳಿಗೆ ಬೀಗಮುದ್ರೆ ಹಾಕುವ ಕ್ರಮವನ್ನು ಸೂಚಿಸಲಾಗುವುದು. ಈ 'ಟ್ಯಾಕ್ಸ್ ಡ್ರೈವ್' ಅಭಿಯಾನದ ಮೂಲಕ ತಮ್ಮ ಬಾಕಿ ತೆರಿಗೆಯನ್ನು ಪಾವತಿಸಿ, ನಗರಾಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಉತ್ತರ ನಗರ ಪಾಲಿಕೆ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದೆ.












Click it and Unblock the Notifications