ಬೆಂಗಳೂರಲ್ಲಿ ಜಿಬಿಎಯಿಂದ ಮಾಂಸ ಮಾರಾಟ ನಿಷೇಧ: ಸೋಷಿಯಲ್ ಮೀಡಿಯಾ ಟ್ರೋಲ್
ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮಂಗಳವಾರ (ನವೆಂಬರ್ 25)ರಂದು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದೊಂದು ಶುದ್ಧ ಜೋಕ್ ಎಂದು ಕೆಲವರು ಹೇಳಿದ್ದಾರೆ.
ಹೌದು ಬೆಂಗಳೂರಿನಲ್ಲಿ ಕೆಲವೊಂದು ನಿರ್ದಿಷ್ಟ ದಿನದಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಾಂಸ ಮಾರಾಟ ನಿಷೇಧ ಮಾಡುವುದು ಇದೆ. ಆದರೆ ಮಂಗಳವಾರ ಮಾಂಸ ಮಾರಾಟ ನಿಷೇಧ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ದಿನಾಂಕ 25-11-2025ರ ಮಂಗಳವಾರ "ಸಾಧು ವಾಸವಾನಿ ಜಯಂತಿ" ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಎ.ಆರ್ ಜೋಶಿ ಎನ್ನುವವರು, ಸಾಧು ವಾಸ್ವಾನಿ ಯಾರು? ಅವರು ಪಾಕಿಸ್ತಾನದ ಹೈದರಾಬಾದ್ - ಸಿಂಧ್ ಪ್ರದೇಶದ ಸಿಂಧಿ ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. ಅವರ ಜನ್ಮದಿನ ನವೆಂಬರ್ 25 ಅನ್ನು ಉತ್ತರ ಪ್ರದೇಶ ರಾಜ್ಯ, ಬೆಂಗಳೂರು, ಅಹಮದಾಬಾದ್, ಭೋಪಾಲ್, ಪುಣೆ, ಝಾನ್ಸಿ, ಕೊಲ್ಲಾಪುರ ಮತ್ತು ಇನ್ನೂ ಕೆಲವು ಪಟ್ಟಣಗಳು ಅಂತರರಾಷ್ಟ್ರೀಯ ಮಾಂಸರಹಿತ ದಿನವೆಂದು ಆಚರಿಸುತ್ತವೆ.
ಇತರ ರಾಜ್ಯಗಳು ಮತ್ತು ನಗರಗಳು ಅಂತಹ ಮಾಂಸರಹಿತ ದಿನವನ್ನು ಆಚರಿಸುವುದಿಲ್ಲ. ಸಾಧು ವಾಸ್ವಾನಿ ಮಿಷನ್ ಮತ್ತು ಮಿಷನ್ ನಡೆಸುವ ಶಾಲೆಯನ್ನು ಹೊರತುಪಡಿಸಿ ಅವರಿಗೆ ಬೆಂಗಳೂರು ಅಥವಾ ಕರ್ನಾಟಕದ ಜೊತೆಗೆ ಯಾವುದೇ ಸಾಂಸ್ಕೃತಿಕ ಸಂಬಂಧವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಷಯ ಗೊತ್ತಿರಲಿ ಅಷ್ಟೆ 💛❤️ ಎಂದು ಹೇಳಿದ್ದಾರೆ.
What is Saadu Vaasani now? Is this a joke? https://t.co/lgH72bzhuo
— ಸಜಿತ್ (@SajithGowda) November 23, 2025
ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್: ಇನ್ನು ಸೋಷಿಯಲ್ ಮೀಡಿಯಾದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಆಡಳಿತದ ಈ ಆದೇಶ ಹಾಗೂ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಎಸ್ ಶ್ಯಾಮ್ ಪ್ರಸಾದ್ ಎನ್ನುವವರು, ಜೋಕರ್ಸ್ ಆಫ್ ಕರ್ನಾಟಕ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಧನಂಜಯ್ ಎನ್ನುವವರು, ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಏನ್ ಬಂದಿರೋದು ಇವ್ರಿಗೆಲ್ಲ. ಥತ್ 😡 ಎಂದು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications