ಮಂಪರು ಪರೀಕ್ಷೆಗೆ ಗೌರಿ ಹತ್ಯೆ ಆರೋಪಿ ಒಪ್ಪಿಗೆ, ಹೊರ ಬರುತ್ತಾ ಸತ್ಯ?
ಬೆಂಗಳೂರು, ಜೂನ್ 28: ಕಳೆದ ಬಾರಿ ಕೊನೆಯ ಹಂತದಲ್ಲಿ ಮಂಪರು ಪರೀಕ್ಷೆಯಿಂದ ಹಿಂದೆ ಸರಿದಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿ ಕೆ.ಟಿ.ನವೀನ್ ಕುಮಾರ್ ಈ ಬಾರಿ ಒಪ್ಪಿಗೆ ನಿಡಿದ್ದು, ಈ ಬಾರಿಯಾದರೂ ಸುಗಮವಾಗಿ ಪರೀಕ್ಷೆ ನಡೆಯುತ್ತದೆಯಾ ಕಾದು ನೋಡಬೇಕಿದೆ.
ಕಳೆದ ಬಾರಿ ನ್ಯಾಯಾಲಯವು ನವೀನ್ ಕುಮಾರ್‌ಗೆ ಮಂಪರು ಪರೀಕ್ಷೆಗೆ ಒಳಗಾಗಲು ಒಪ್ಪಿಗೆ ನೀಡಿತ್ತು ಆತನನ್ನು ಗುಜರಾತ್‌ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು ಆದರೆ ಅಲ್ಲಿನ ವೈದ್ಯಕೀಯ ಅಧಿಕಾರಿಗಳ ಮಾತು ಕೇಳಿದ ಬಳಿಕ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಒಪ್ಪಲಿಲ್ಲ.
ಇದೀಗ ಮಂಪರು ಪರೀಕ್ಷೆ ಮಾಡಿಸಿಕೊಳ್ಳಲು ತಾನು ಸಿದ್ಧವಿರುವುದಾಗಿ ನವೀನ್ ಕುಮಾರ್ ಹೇಳಿದ್ದು, ಈ ಬಗ್ಗೆ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಎಸ್‌ಐಟಿ ಪರ ವಕೀಲ ವೇದಮೂರ್ತಿ ತಿಳಿಸಿದ್ದಾರೆ.

ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಗೌರಿ ಹತ್ಯೆ ಪ್ರಕರಣದಲ್ಲಿ ಈ ವರೆಗೆ ಬಂಧಿಸಲಾಗಿರುವ ಎಲ್ಲ ಆರೋಪಿಗಳ ಕಸ್ಟಡಿ ಅವಧಿ ಮುಕ್ತಾಯವಾದ ಕಾರಣ ಎಲ್ಲಾ ಆರೋಫಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಎಸ್‌ಐಟಿ ಬಂದಿಸಿರುವ ಕೆ.ಟಿ.ನವೀನ್ ಕುಮಾರ್, ಪರಶುರಾಮ್ ವಾಘ್ಮೋರೆ, ಮನೋಹರ ದುಂಡಪ್ಪ ಯಡವೆ, ಅಮೋಲ್ ಕಾಳೆ, ಅಮಿತ್ ದೆಗ್ವೇಕರ್, ಸುಜಿತ್ ಕುಮಾರ್ ಅಲಿಯಾಸ್ ಪ್ರವೀನ್ ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.












Click it and Unblock the Notifications