ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ

|
Google Oneindia Kannada News

ಬೆಂಗಳೂರು, ಏಪ್ರಿಲ್, 19: ಬಸ್ ಗೆ ಬೆಂಕಿ, ಅಮಾಯಕರಿಗೆ ಗುಂಡೇಟು, ಪೊಲೀಸ್ ಸ್ಟೇಶನ್ ಮೇಲೆ ಉದ್ರಿಕ್ತರ ದಾಳಿ, ಲಾಠಿ ಚಾರ್ಜ್, ಟ್ರಾಫಿಕ್ ಸಮಸ್ಯೆ, ಹೈರಾಣರಾದ ಸಾಮಾನ್ಯ ಜನ ಇದು ಮಂಗಳವಾರದ ಬೆಂಗಳೂರಿನ ಕತೆ.

ಕೇಂದ್ರ ಸರ್ಕಾರದ ಹೊಸ ಪಿಎಫ್ ನೀತಿ ಖಂಡಿಸಿ ಗಾರ್ಮೆಂಟ್ಸ್ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿದಿತ್ತು. ಸುಮಾರು 10 ಸಾವಿರಕ್ಕೂ ಅಧಿಕ ಕಾರ್ಮಿಕರು ಬೆಂಗಳೂರಿನ ವಿವಿಧೆಡೆ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. [ಪಿಎಫ್ ನೀತಿ ಖಂಡನೆ, ಪ್ರತಿಭಟನೆ, ಹೊಸೂರು ರಸ್ತೆ ಟ್ರೆಂಡಿಂಗ್]

ಹೊಸೂರು ರಸ್ತೆಯ ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಕೊಡಿಚಿಕ್ಕನಹಳ್ಳಿ ಹಾಗೂ ಹೊಸರೋಡ್, ಮತ್ತು ಜಾಲಹಳ್ಳಿ ಕ್ರಾಸ್ ಬಳಿಯ ಎಲ್ಲ ಗಾರ್ಮೆಂಟ್ಸ್ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಕೊಂಚ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ ಇಡೀ ದಿನ ಪರಿಸ್ಥಿತಿ ಕೈ ಮೀರಿ ಹೋಗಿತ್ತು.[ಬೊಮ್ಮನಹಳ್ಳಿ: ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಪ್ರತಿಭಟನೆ]

bengaluru

ತುಮಕೂರು ರಸ್ತೆಯಲ್ಲೂ ಪ್ರತಿಭಟನೆ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಹಾಲಕ್ಷ್ಮಿ ಲೇಔಟ್, ನಂದಿನಿ ಲೇಔಟ್, ರಾಜಾಜಿನಗರ,ವೆಸ್ಟ್ ಆಫ್ ಕಾರ್ಡ್ ರೋಡ್, ಕಂಠೀರವ ಸ್ಟುಡಿಯೋ, ತುಮಕೂರು ರಸ್ತೆ, ಸುಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ, ಜಾಲಹಳ್ಳಿ ರಸ್ತೆ ಸಂಪೂರ್ಣ ಜಾಮ್ ಆಗಿದ್ದು ವಾಹನ ಸವಾರರು ಪರಿತಪಿಸಿದರು. ['ಗಾರ್ಮೆಂಟ್ ಫ್ಯಾಕ್ಟರಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್']

bengaluru

[ಚಿತ್ರಗಳು-ಫೇಸ್ ಬುಕ್, ಬೆಂಗಳೂರು ಪೊಲೀಸ್]

ಪೀಣ್ಯದ ಪಿಎಫ್ ಕಚೇರಿ ಎದುರು ಪ್ರತಿಭಟನೆ ಜೋರಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಪ್ರತಿಭಟನಾಕಾರರ ಮೇಲೆ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿದರು.

ಬೆಂಗಳೂರಿನ ವಿವಿಧೆಡೆ ರಸ್ತೆ ತಡೆನಡೆಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಇನ್ನೊಂದೆಡೆ ರಾಮಮಗರ, ಆನೇಕಲ್ ನಲ್ಲೂ ಕಾರ್ಮಿಕರು ಹೋರಾಟ ನಡೆಸಿದರು.

ಯಾಕಾಗಿ ಪ್ರತಿಭಟನೆ?
ಕೇಂದ್ರ ಸರ್ಕಾರ ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿದೆ. 1952 ರ ಪಿಎಫ್ ಶಾಸನಕ್ಕೆ ತಿದ್ದುಪಡಿ ಮಾಡಲಾಗಿದೆ. ಒಂದು ವೇಳೆ ಕಾರ್ಮಿಕರೊಬ್ಬರು ತಮ್ಮ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲು ಮುಂದಾದರೆ ಅವರ ಖಾತೆಯಿಂದ ಮುರಿದುಕೊಂಡ ಹಣ ಮಾತ್ರ ಪಡೆದುಕೊಳ್ಳಲು ಸಾಧ್ಯ. ಕಂಪನಿಯ ಕಾಂಟ್ರಿಬ್ಯುಶನ್ ಅನ್ನು ಪಡೆದುಕೊಳ್ಳಲು ವ್ಯಕ್ತಿ 58 ವರ್ಷಗಳವರೆಗೆ ಕಾಯಬೇಕು. ಇದನ್ನೇ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

5.30: ಕಾರ್ಮಿಕರ ಪ್ರತಿಭಟನೆ ಮತ್ತು ಪಿಯು ಉಪನ್ಯಾಸಕರ ಪ್ರತಿಭಟನೆಗೆ ಸಂಬಂಧಿಸಿ ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಸಭೆ ಆರಂಭವಾಗಿದೆ.

4.45: ಎಸಿಪಿ ಓಬಳೇಶ್ ಸೇರದಂತೆ 23 ಪೊಲೀಸರು ಘರ್ಷಣೆಯಲ್ಲಿ ಗಾಯಗೊಂಡಿದ್ದು ಅವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
4.30:
ನಾರಾಯಣ ಹೃದಯಾಲಯದಲ್ಲಿ ಗುಂಟೇಟು ತಗುಲಿದ್ದ ಯುವತಿಗೆ ಚಿಕಿತ್ಸೆ
4.10:
ಜಾಲಹಳ್ಳಿಯಲ್ಲಿ 144 ಸೆಕ್ಷನ್ ಜಾರಿ, 45 ವರ್ಷದ ರಾಜ್ ಕುಮಾರ್, 23 ವರ್ಷದ ಸಂಜೀವ್ ಗೆ ತಗುಲಿದ ಪೊಲೀಸರ ಗುಂಡೇಟು, ಗಾಯಾಳುವನ್ನು ಆಸ್ಪತ್ರಗೆ ದಾಳಿ

4.00: ಜಾಲಹಳ್ಳಿ ಕ್ರಾಸ್ ಮತ್ತು ಪೀಣ್ಯ ಬಳಿ ಉದ್ವಿಗ್ನ ಪರಿಸ್ಥಿತಿ. ಹೋಂ ಗಾರ್ಡ್ ಮತ್ತು ಪೇದೆಗಳ ಮೇಲೆ ಪ್ರಭಟನಾಕಾರರಿಂದ ಹಲ್ಲೆ.

3.30: ಹೆಬ್ಬಗೋಡಿ ಬಳಿ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ಲಕ್ಷ್ಮೀ ಲೇಔಟ್ ನ ಯುವತಿ ಪ್ರೀತಿ ಎಂಬುವರಿಗೆ ಪೊಲೀಸರ ಗುಂಡು ತಗುಲಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹಾರಿಸಿದ ಗುಂಡು ಯುವತಿ ಕಾಲಿಗೆ ತಾಗಿದೆ.

3.00: ಜಾಲಹಳ್ಳಿ ಕ್ರಾಸ್ ಬಳಿ 10ಕ್ಕೂ ಅಧಿಕ ಬಸ್ ಗಳಿಗೆ ಬೆಂಕಿ, ಕಿಲೋಮೀಟರ್ ದೂರಕ್ಕೆ ಚಾಚಿದ ಹೊಗೆ
2.50:
ಐವರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

2.50: ಟಿವಿ ಮಾಧ್ಯಮದ ಪ್ರತಿನಿಧಿಗಳ ಮೇಲೆ ಹಲ್ಲೆ

2.50: ಬಿಎಂಟಿಸಿ ಮತ್ತು ಸರ್ಕಾರಿ ಬಸ್ ಗಳಿಗೆ ಬೆಂಕಿ

2.45: ಹೆಬ್ಬಗೋಡಿ ಪೊಲೀಸ್ ಠಾಣೆ ಮುತ್ತಿಗೆಗೆ ಯತ್ನ

1.45: ಹೆಬ್ಬಗೋಡಿ ಬಳಿ ಉದ್ರಿಕ್ತ ಕಾರ್ಮಿಕರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ, ಅಶ್ರವಾಯು ಪ್ರಯೋಗ

1.00: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಬೀದಿಗಿಳಿದ ಕಾರ್ಮಿಕರ ಮೇಲೆ ಲಾಠಿಚಾರ್ಜ್

1.00: ತುಮಕೂರು ರಸ್ತೆ ಗೋರಗುಂಟೆ ಪಾಳ್ಯದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್, ಪೊಲೀಸರೊಂದಿಗೆ ಕಾರ್ಮಿಕರ ಘರ್ಷಣೆ
12.50: ಬೆಂಗಳೂರು ಮೆಟ್ರೋ ಸಂಚಾರ ಸಹ ಬಂದ್, ಮೆಟ್ರೋ ದ್ವಾರವನ್ನು ಮುಚ್ಚಿದ ಸಿಬ್ಬಂದಿ
12.50: ಬನ್ನೇರುಘಟ್ಟ ರಸ್ತೆ ಬಿಎಂಟಿಸಿ ಮೇಲೆ ಕಲ್ಲು ತೂರಾಟ
12.50: ಮೆಜೆಸ್ಟಿಕ್ ಗೆ ತೆರಳಲು ಸಾಧ್ಯವಾಗದೇ ಹೈರಾಣರಾದ ನಾಗರಿಕರು

English summary
For the second day in a row, garment factory workers brought traffic to a standstill on Hosur Road as thousands of them protested at the Bommanahalli junction on Tuesday. Garment factory workers are protesting against the recent amendments to the Employees Provident Fund (EPF) Scheme.In Bengaluru, protesting garment industry workers burnt five buses and also blocked traffic on the highway, causing three-hour jams. Protests erupted at Hosur Road, Tumkur Road and Jalahalli in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X