ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ

ಬೆಂಗಳೂರು, ಮೇ 27: ಇತ್ತೀಚೆಗೆ ರೈಲ್ವೆ ಪ್ರಯಾಣಿಕರ ಮೊಬೈಲ್ ಕಳವು ಹೆಚ್ಚಾಗಿದೆ. ರೈಲಿನೊಳಗೆ ಬಂದು ಪ್ರಯಾಣಿಕರಿಗೆ ಅರಿವಿಲ್ಲದಂತೆ ಕದಿಯುವುದು ಬೇರೆ, ಆದರೆ ನೋಡನೋಡುತ್ತಿದ್ದಂತೇ ಕೈಯಿಂದ ಕಸಿದು ಪರಾರಿಯಾಗುವುದು ಬೇರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮಂಗಳವಾರ ಸುಮಾರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಯಶವಂತಪುರ-ಬಾಣಸವಾಡಿ ಮಧ್ಯೆ ಸಂಚರಿಸುತ್ತಿರುವಾಗ ಯುವಕರ ಗ್ಯಾಂಗ್ ಒಂದು ಎರಡು ರೈಲ್ವೆ ನಿಲ್ದಾಣಗಳ ಮಧ್ಯೆ ರೈಲ್ವೆ ಪ್ರಯಾಣಿಕರ ಮೊಬೈಲ್‌ ದರೋಡೆ ಮಾಡಲು ರೆಡಿಯಾಗಿ ನಿಂತಿತ್ತು.

ರೈಲಿನ ಬಾಗಿಲಿನ ಬಳಿ ನಿಂತಿರುವವ ಕೂಗೆ ಕೋಲಿನಿಂದ ಹೊಡೆದು ಮೊಬೈಲ್ ಕಸಿದುಕೊಳ್ಳುತ್ತಿದ್ದರು. ಹೀಗೆ ಮಾಡುವಾಗ ತಕ್ಷಣ ಪ್ರಯಾಣಿಕರೊಬ್ಬರು ಯುವಕರ ಫೋಟೊವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Gangs targetting passenges in middle of the railway stations

ಈ ಕುರಿತು ಮೊಹಮ್ಮದ್ ಎನ್ನುವವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮೊಬೈಲ್ ದರೋಡೆ ಬಗ್ಗೆ ಕೇಳಿದ್ದೆ ಆದರೆ ನನಗೆ ಆ ಅನುಭವವಾಗಿದೆ. ''ನಾಲ್ಕು ಮಂದಿ ಯುವಕರು ನನ್ನ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಆದರೆ ಅದಕ್ಕೆ ನಾನು ಅವಕಾಶ ಮಾಡಿಕೊಡದಿದ್ದರೆ ಕತ್ತಿ ಭಾಗಕ್ಕೆ ಹೊಡೆದಿದ್ದು ಸಾಕಷ್ಟು ನೋವು ಅನುಭವಿಸಿದೆ'' ಎಂದು ಹೇಳುತ್ತಾರೆ.

ನಾಯಂಡಹಳ್ಳಿ, ಪಾದರಾಯನಪುರ, ಬಾಣಸವಾಡಿ, ಬೈಯಪ್ಪನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಈಗ ಮೊಬೈಲ್ ಕಳವು ಸಾಮಾನ್ಯವಾಗಿಬಿಟ್ಟಿದೆ. 16-25ವರ್ಷದ ಯುವಕರು ಈ ದಂಧೆಗೊಳಿದಿದ್ದಾರೆ.

ಇಬ್ಬರು ದರೋಡೆಕೋರರು ಮೊಬೈಲ್ ಕದಿಯಲು ಯತ್ನಿಸಿದ್ದಾರೆ. ಇವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಅಭಿಲಾಶ್‌ಕರ್ ಎನ್ನುವವರು ದರೋಡೆಕೋರರ ಫೋಟೊದೊಂದಿದೆ ಟ್ವೀಟ್ ಮಾಡಿದ್ದಾರೆ.

ನಿಲ್ದಾಣ ಬರುತ್ತಿದ್ದಂತೆ ಸಾಮಾನ್ಯವಾಗಿ ಪ್ರಯಾಣಿಕರು ಲಗೇಜ್ ಹಿಡಿದು ಬಾಗಿಲು ಬಳಿ ಬಂದು ನಿಲ್ಲುತ್ತಾರೆ ಅಂಥವರನ್ನೇ ಗುರಿಯಾಗಿಸಿಕೊಂಡು ಮೊಬೈಲ್ ಕದ್ದು ಪರಾರಿಯಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+