ಅಮಾವಾಸ್ಯೆ ಮತ್ತು ತಿಪ್ಪೆ ಗಿರಿನಗರ ಪೊಲೀಸರ ಬಲೆಗೆ!
ಬೆಂಗಳೂರು, ಜೂ. 11: ಕದ್ದ ಬೈಕ್ ನಲ್ಲಿ ದರೋಡೆ ಮಾಡುತ್ತಿದ್ದ ಕಿರಾತಕನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಅಮಾವಾಸ್ಯೆ ಅಲಿಯಾಸ್ ಯಶವಂತ, ತಿಪ್ಪೆ ಅಲಿಯಾಸ್ ಕಿರಣ್ ಬಂಧಿತರು. ಫುಡ್ ಡೆಲಿವರಿ ಬಾಯ್ ಗಳನ್ನು ಟಾರ್ಗೆಟ್ ಮಾಡಿ ತಿಪ್ಪೆ ಕಿರಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಬೈಕ್ ನಲ್ಲಿ ಸುಲಿಗೆ ಮಾಡಿದರೆ ಪೊಲೀಸರಿಗೆ ಗೊತ್ತಗುವುದಿಲ್ಲ ಎಂದು ನಂಬಿದ್ದ ಅಮವಾಸ್ಯೆ ಮತ್ತು ತಿಪ್ಪೆ ಕಿರಣ್ ಬೈಕ್ ಗಳನ್ನು ಕದಿಯುತ್ತಿದ್ದರು. ಅದೇ ಬೈಕ್ ನಲ್ಲಿ ರಾತ್ರಿ ವೇಳೆ ಬೆಂಗಳೂರು ಸುತ್ತುತ್ತಿದ್ದ. ಫುಡ್ ಡೆಲಿವರಿ ಸೇರಿದಂತೆ ರಾತ್ರಿ ವೇಳೆ ಯಾರಾದರೂ ಏಕಾಂಗಿಯಾಗಿ ಓಡಾಡುವ ವಾಹನ ಅಟ್ಟಗಟ್ಟಿ ದರೋಡೆ ಮಾಡುತ್ತಿದ್ದರು.
ಕೊರೊನಾದಿಂದ ಬಚಾವ್ ಆಗಲು 5 ಪವರ್ ಫುಲ್ ಸೂತ್ರಗಳನ್ನು ಹೇಳಿದ Puneeth | Oneindia Kannada
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಗಿರಿನಗರ ಪೊಲೀಸರು ಯಶವಂತ್ ಹಾಗೂ ಕಿರಣ್ ಇಬ್ಬರನ್ನು ಬಂಧಿಸಿದ್ದಾರೆ. ಯಶವಂತನ ವಿರುದ್ಧ ಈಗಾಗಲೇ ರೌಡಿ ಶೀಟರ್ ಖಾತೆ ತೆರೆಯಲಾಗಿದ್ದು, ಬಂಧಿತರು ಬೈಕ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Comments
English summary
Bengaluru: Girinagar police have arrested two men accused using stolen for robbery.