ರೌಡಿ ಲಕ್ಷ್ಮಣನನ್ನು ಕೊಂದು ಬರ್ತಡೇ ಪಾರ್ಟಿ ಮಾಡಲು ಹೋದ ಹಂತಕರು!
ಬೆಂಗಳೂರು, ಮಾರ್ಚ್ 10 : ರೌಡಿ ಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕ್ಯಾಟ್ ರಾಜನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಶ್ರೀಮಂತ ರೌಡಿ ಲಕ್ಷ್ಮಣನನ್ನು ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಸ್ಕಾನ್ ದೇವಾಲಯದ ಸಮೀಪ ಹತ್ಯೆ ಮಾಡಲಾಗಿತ್ತು. ಬೆಂಗಳೂರು ಪೊಲೀಸರು ಹತ್ಯೆ ಪ್ರಕರಣದ ತನಿಖೆಯನ್ನು ಸಿಸಿವಿಗೆ ವರ್ಗಾವಣೆ ಮಾಡಿದ್ದಾರೆ.
42 ವರ್ಷದ ಲಕ್ಷ್ಮಣನನ್ನು ಹಾಡಹಗಲೇ ಹತ್ಯೆ ಮಾಡಿದ ಆರೋಪಿಗಳು ತಕ್ಷಣ ಪೊಲೀಸರ ಮುಂದೆ ಶರಣಾಗಬೇಕು ಎಂದು ಕೊಂಡಿದ್ದರು. ಆದರೆ, 6 ಜನರ ಗ್ಯಾಂಗ್‌ನಲ್ಲಿ ಒಬ್ಬರ ಬರ್ತಡೇ ಇತ್ತು. ಅದನ್ನು ಆಚರಿಸಲು ಅವರು ಸ್ಥಳದಿಂದ ಪರಾರಿಯಾಗಿದ್ದರು.

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಲಕ್ಷ್ಮಣ ಹತ್ಯೆ ಮಾಡಲು ಮಹಿಳೆಯ ಸಹಾಯ ಪಡೆದಿದ್ದು, ಲಕ್ಷ್ಮಣನ ಬಳಿ ಲಾಡ್ಜ್‌ನ ಕೀವೊಂದು ಪತ್ತೆಯಾಗಿದೆ.
ಒಟ್ಟು 6 ಆರೋಪಿಗಳು ಸೇರಿ ರೌಡಿ ಲಕ್ಷ್ಮಣನನ್ನು ಹತ್ಯೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುಮಾರು 600 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದ ರೌಡಿ ಲಕ್ಷ್ಮಣ ಜಮೀನು ಮಾಲೀಕರಿಗೆ ಬೆದರಿಕೆ ಹಾಕಿ ಕಡಿಮೆ ಬೆಲೆಗೆ ಅದನ್ನು ಕೊಂಡುಕೊಳ್ಳುತ್ತಿದ್ದನು. ಬಳಿಕ ಹೆಚ್ಚಿನ ಬೆಲೆಗೆ ಅದನ್ನು ಬಿಲ್ಡರ್‌ಗಳಿಗೆ ಮಾರಾಟ ಮಾಡುತ್ತಿದ್ದನು.












Click it and Unblock the Notifications