ಜೆಪಿ ನಗರದ ಗಣೇಶನಿಗೆ 4000 ಕೆಜಿ ತೂಕದ 'ಮಹಾ ಲಡ್ಡು'

Recommended Video

      Ganesh Chaturthi 2018 : ಬೆಂಗಳೂರಿನಲ್ಲಿ ಕಬ್ಬಿನ ಗಣೇಶ ಹಾಗು 400ಕೆಜಿ ಮಹಾ ಲಡ್ಡು ಪ್ರದರ್ಶನ |Oneindia Kannada

      ಬೆಂಗಳೂರು, ಸೆಪ್ಟೆಂಬರ್ 08: ಮೋದಕ ಪ್ರಿಯ, ಲಡ್ಡು ಪ್ರಿಯ ಗಜಮುಖ ಗಣೇಶನಿಗೆ ಎಷ್ಟು ನೈವೇದ್ಯ ಕೊಟ್ಟರೂ ಸಾಲದು, ಪ್ರತಿ ಬಾರಿ ವಿಶಿಷ್ಟವಾಗಿ ಗಣೇಶ ಹಬ್ಬ ಆಚರಿಸುವ ಜೆಪಿ ನಗರದ ನಿವಾಸಿಗಳು ಈ ಬಾರಿ ಗಣೇಶನಿಗೆ ಬೃಹತ್ ಲಡ್ಡು ಅರ್ಪಿಸಲು ಮುಂದಾಗಿದ್ದಾರೆ.

      ಗಣೇಶ ಚತುರ್ಥಿಯ ಪ್ರಯುಕ್ತ ಜೆಪಿ ನಗರದ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ 4 ಸಾವಿರ ಕೆಜಿ ಬೃಹದಾಕಾರದ ಲಾಡು ಹಾಗೂ ಪರಿಸರ ಸ್ನೇಹಿ 30 ಅಡಿ ಎತ್ತರದ ಕಬ್ಬಿನ ಗಣಪತಿ ಪ್ರತಿಷ್ಠಾಪನೆ ವಿಶೇಷವಾಗಿದೆ.

      ಗಣೇಶ ಚತುರ್ಥಿಯ ಅಂಗವಾಗಿ ನಗರದಲ್ಲಿ ಪ್ರಪ್ರಥಮ ಬಾರಿಗೆ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 4 ಸಾವಿರ ಕೆಜಿ ತೂಕದ ಬೃಹದಾಕಾರದ ಲಾಡು ನಿರ್ಮಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ತಿಳಿಸಿದ್ದಾರೆ.
      ಗಣೇಶ ಹಬ್ಬದ ನಂತರ ಈ ಲಾಡುವನ್ನು ಭಕ್ತರಿಗೆ ನೀಡಲು ದೇವಸ್ಥಾನದ ಮಂಡಳಿ ನಿರ್ಧರಿಸಿದೆ.

      ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು

      ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು

      ಪ್ರತಿಬಾರಿ ಏನಾದರೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ 4 ಸಾವಿರ ತೂಕದ ಬೃಹತ್ ಲಾಡು ನಿರ್ಮಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದರು. ಈ ಬೃಹತ್ ಗಾತ್ರದ ಲಾಡು ನಿರ್ಮಿಸಲು 1000 ಕೆಜಿ ಕಡಲೆ ಹಿಟ್ಟು, 2000 ಕೆಜಿ ಸಕ್ಕರೆ, 700 ಕೆಜಿ ಸನ್ ಪ್ಯೂರ್ ಎಣ್ಣೆ, 300 ಕೆಜಿ ತುಪ್ಪ, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿಯನ್ನು ಬಳಸಿ ಬೃಹತ್ ಗಾತ್ರದ ಲಾಡು ನಿರ್ಮಿಸಲಾಗುವುದು ಎಂದರು.

      ಪರಿಸರ ಸ್ನೇಹಿಯಾಗಿ ಗಣೇಶ

      ಪರಿಸರ ಸ್ನೇಹಿಯಾಗಿ ಗಣೇಶ

      ಅಲ್ಲದೆ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಟಿಯಿಂದ ಈ ಬಾರಿ 30 ಅಡಿ ಎತ್ತರದ ಕಬ್ಬಿನಲ್ಲಿಯೇ ನಿರ್ಮಿಸಲಾಗಿರುವ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗುವುದು. ಈ ಮೂರ್ತಿ ಪರಿಸರ ಸ್ನೇಹಿಯಾಗಿರಲಿದೆ. ಅಲ್ಲದೆ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿಯನ್ನು ಉಂಟು ಮಾಡದ ರೀತಿಯಲ್ಲಿ ನಿರ್ಮಿಸಲಾಗುವುದು ಎಂದರು.

      ಬೃಹತ್ ಲಡ್ಡು ತಯಾರಿಸುವುದು

      ಬೃಹತ್ ಲಡ್ಡು ತಯಾರಿಸುವುದು

      ಹೈದರಾಬಾದ್, ಮುಂಬೈ ಹಾಗೂ ಇನ್ನಿತರ ಕಡೆಗಳಲ್ಲಿ ಈ ರೀತಿ ಬೃಹತ್ ಲಡ್ಡು ತಯಾರಿಸುವುದು ಸಾಮಾನ್ಯ ಸಂಗತಿ ಎನ್ನಬಹುದು. ಈ ಹಿಂದೆ ಹೈದರಾಬಾದಿನ ಖೈರ್ತಾಬಾದ್ ನಲ್ಲಿ ೫೬ ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ೪ ಸಾವಿರ ತೂಕದ ಲಡ್ಡುವನ್ನು ನೈವೇದ್ಯ ಮಾಡಲಾಗಿತ್ತು.

      ಸಾವಿರಾರು ಕೆಜಿ ತೂಕದ ಲಡ್ಡು ತಯಾರಿಕೆ

      ಸಾವಿರಾರು ಕೆಜಿ ತೂಕದ ಲಡ್ಡು ತಯಾರಿಕೆ

      ಕನಿಷ್ಟ 1,600 ಕೆಜಿ ಸಕ್ಕರೆ, 1,000 ಕೆಜಿ ಚನ್ನದಾಲ್ ಅಥವಾ ಹಿಟ್ಟು, 50 ಕೆಜಿ ಗೋಡಂಬಿ, 50 ಕೆಜಿ ಒಣ ದ್ರಾಕ್ಷಿ, 5 ಕೆಜಿ ಏಲಕ್ಕಿ, ಕರ್ಪೂರ, ಎಸೆನ್ಸ್ ಬೇಕಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸಾಮಾಗ್ರಿಗಳು ಬದಲಾಗಲಿವೆ, ಮುಂಬೈನಲ್ಲಿ ಬೃಹತ್ ಗಣೇಶ ಮೂರ್ತಿ, ಲಡ್ಡುಗಳಿಗೆ ವಿಮೆ ಕೂಡಾ ಮಾಡಿಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+