ಸ್ಮಾರ್ಟ್ ಸಿಟಿ ಯೋಜನೆ ಬರೆ, ಗಾಂಧಿಬಜಾರ್ ಹಳೆ ಪರಂಪರೆ ಕಣ್ಮರೆ
ಬೆಂಗಳೂರು, ಏಪ್ರಿಲ್ 19 : 130 ವರ್ಷಗಳ ಇತಿಹಾಸ ಹೊಂದಿರುವ ಗಾಂಧಿ ಬಜಾರ್‌ಗೆ ಆಧುನೀಕರಣದ ಸ್ಪರ್ಶ ನೀಡುವ ಯೋಜನೆಗೆ ಸ್ಥಳೀಯರು ಹಾಗೂ ಗಾಂಧಿ ಬಜಾರ್‌ನ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಪರಂಪರೆ ಹೊಂದಿರುವ ಗಾಂಧಿಬಜಾರ್ ಅನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮುಖ್ಯ ರಸ್ತೆಯನ್ನು ಕಿರಿದಾಗಿಸಿ ಪಾದಚಾರಿ ಮಾರ್ಗವನ್ನು ವಿಸ್ತರಿಸುವ ನಗರ ಭೂಸಾರಿಗೆ ನಿರ್ದೇಶನಾನಲಯ(DULT) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP)ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಯೋಜನೆಯ ವಿರುದ್ಧವಾಗಿ ಸೋಮವಾರ ಗಾಂಧಿಬಜಾರ್‌ನ ವರ್ತಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಯೋಜನೆಯನ್ನ ಕೂಡಲೇ ಕೈಬಿಡಬೇಕು. ಗಾಂಧಿ ಬಜಾರ್ ಅನ್ನು ವಾಣಿಜ್ಯಕರಣಗೊಳಿಸುವುದರಿಂದ ಇಲ್ಲಿ ತುಂಬಾ ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವವರಿಗೆ ಭಾರೀ ಹೊಡೆತ ಬೀಳುತ್ತದೆ ಅಲ್ಲದೆ ಇದು ಬಸವನಗುಡಿನ ಪರಂಪರೆಯನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

"ಬೆಂಗಳೂರಿನ ಅತ್ಯಂತ ಶ್ರೀಮಂತ ಪರಂಪರೆಯನ್ನು ಮತ್ತು ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ಹಾಗೂ ಸಾಂಸ್ಕೃತಿಕವಾಗಿ ಹಳೆಯ ಕ್ಷೇತ್ರವೆಂದರೆ ಅದು ಬಸವನಗುಡಿ, ಇಲ್ಲಿ ಯಾವುದೇ ಕಮರ್ಷಿಯಲ್ ಸ್ಟ್ರೀಟ್‌ನಂತಹ ಶಾಂಪಿಗ್ ಮಾಲ್ ಇಲ್ಲ, ಪಾಶ್ಚಿಮಾತ್ಯ ಅಂಗಡಿಗಳಿಲ್ಲ. ಹೀಗಾಗಿ 130 ವರ್ಷಗಳ ಹಳೆಯ ಪರಂಪರೆಯನ್ನ ಬಸವನಗುಡಿ ಕ್ಷೇತ್ರ ಉಳಿಸಿಕೊಂಡು ಬಂದಿದೆ. ಆದರೆ ಈಗ ಈ ಯೋಜನೆ ತರುವುದರಿಂದ ಬಸವನಗುಡಿಯ ಸಾಂಸ್ಕೃತಿಕ ಮೆರಗು ಮಾಯವಾಗಲಿದೆ. ಹೀಗಾಗಿ ಈ ಯೋಜನೆಯನ್ನ ನಾವು ವಿರೋಧಿಸುತ್ತೇವೆ," ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವರ್ತಕರೊಬ್ಬರು ತಿಳಿಸಿದ್ದಾರೆ.
ಇನ್ನು ನಗರ ಭೂ ಸಾರಿಗೆ ನಿರ್ದೇಶಾನಲಯದ ಪ್ರಕಾರ ಈ ಯೋಜನೆಯಲ್ಲಿ ಮೊದಲಿಗೆ ಗಾಂಧಿ ಬಜಾರ್ ರಸ್ತೆಯಲ್ಲಿರುವ ಅಕ್ಕಪಕ್ಕದ ಹೂವಿನ ಮಾರುಕಟ್ಟೆಯನ್ನು ಬಹು ಹಂತದ ಕಾರ್ ಪಾರ್ಕಿಂಗ್ ಆಗಿ ಪರಿವರ್ತಿಸಲಾಗುತ್ತದೆ. ಪಾರ್ಕಿಂಗ್‌ಗೆ ದಾರಿ ಮಾಡಿಕೊಡಲು ಬೀದಿ ವ್ಯಾಪಾರಿಗಳನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿದೆ.
ಇನ್ನು ಈ ಯೋಜನೆಯ ಕುರಿತಾಗಿ ಒಕ್ಕಲಿಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಎಂ ನಾರಾಯಣ್ ಮಾತನಾಡಿದ್ದು, "ಈ ಯೋಜನೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ, ಇದರ ಬದಲು ಬಿಬಿಎಂಪಿ ಹಾಗೂ ಡಲ್ಟ್ ಸೇರಿ ಮಾರಾಟಗಾರರಿಗೆ ಸ್ಟಾಲ್ ವ್ಯವಸ್ಥೆಗಳು, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಂತಹ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಮೂಲಕ ವರ್ತಕರ ಜೀವನವನ್ನ ಸುಧಾರಿಸುವ ಕೆಲಸವನ್ನ ಮಾಡಬೇಕು. ಅದನ್ನು ಬಿಟ್ಟು ಪಾದಚಾರಿ ಮಾರ್ಗವನ್ನು ವಿಸ್ತರಿಸುವುದರಿಂದ ತಲೆ ಮಾರುಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವವರ ಮೇಲೆ ಆರ್ಥಿಕ ಹೊಡೆತ ಬೀಳುತ್ತದೆ. ಅಲ್ಲದೆ ಬಸವನಗುಡಿಯ ಐತಿಹಾಸಿಕ ಪರಂಪರೆಯು ಈ ಆಧುನಿಕರಣದಿಂದ ನಾಶಗೊಳ್ಳುತ್ತದೆ. ಹೀಗಾಗಿ ಈ ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು," ಅಂತ ಎಂ ನಾರಾಯಣ್ ಮನವಿ ಮಾಡಿಕೊಂಡಿದ್ದಾರೆ.

"ಗಾಂಧಿ ಬಜಾರ್ 130 ವರ್ಷಗಳ ಇತಿಹಾಸ ಹೊಂದಿದೆ. ಹೀಗಾಗಿ ಈ ಪ್ರದೇಶವನ್ನ ಪ್ರಸ್ತುತ ಸ್ಥಿತಿಯಲ್ಲಿ ಸಂರಕ್ಷಿಸುವ ಕೆಲಸ ಸಮುದಾಯ ಮಾಡಬೇಕು. ಅಲ್ಲದೆ ಅದನ್ನು ಸುಧಾರಿಸಲು ಅಗತ್ಯವಿರುವ ಅಭಿವೃದ್ದಿಗೆ ಅವಕಾಶ ಕಲ್ಪಸಿಕೊಡಬೇಕು, ಯಾವುದೇ ಯೋಜನೆಗಳನ್ನು ತರುವ ಮೊದಲು ಆ ಯೋಜನೆಯ ಕುರಿತಾಗಿ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಮುಖ್ಯ. ಇದರಿಂದ ಮುಂದೆ ಆ ಯೋಜನೆ ತಂದರೂ ಯಾವುದೇ ಸಮಸ್ಯೆ ಎದುರಾಗುವುದಿಲ್ಲ," ಅಂತ ಮತ್ತೊಬ್ಬ ಪ್ರತಿಭಟನಾಕಾರ ವಿಷ್ಣು ಎಂಬುವವರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವನಗುಡಿಯ ನಿವಾಸಿಗಳ ಸಂಘದ ಅಧ್ಯಕ್ಷ ಗುರುಪ್ರಸಾದ್, ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್, ಸುಧೀಂದ್ರ, ಕ್ರಿಕೆಟ್ ತರಬೇತುದಾರ ಮುರುಳೀಧರ್ ಭಾಗವಹಿಸಿ ಈ ಯೋಜನೆಯ ವಿರುದ್ದ ಪ್ರತಿಭಟನೆ ನಡೆಸಿದ್ದರು.
ಒಟ್ಟಾರೆ, ಐರೋಪ್ಯ ಶೈಲಿಯ ಆಧುನೀಕರಣವವನ್ನು ಗಾಂಧಿ ಬಜಾರ್‌ನಲ್ಲಿ ಮಾಡುವುದರಿಂದ ನೂರಾರು ವರ್ಷಗಳ ಇತಿಹಾಸ ಪರಂಪರೆಯನ್ನ ಬಸವನಗುಡಿ ಕ್ಷೇತ್ರ ಕಳೆದುಕೊಳ್ಳಲಿದೆ. ಇದರಿಂದ ತುಂಬಾ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಪರಂಪರೆ ಸಂಪೂರ್ಣ ಆಧುನೀಕರಣವಾಗಿ ಬದಲಾಗಲಿದ್ದು, ಮುಂದಿನ ಪೀಳಿಗೆಗೂ ಇದರ ಅನುಪಸ್ಥಿತಿ ಕಾಡುವ ಸಾಧ್ಯತೆ ಇದೆ. ಅಲ್ಲದೆ ತಲೆಮಾರುಗಳಿಂದ ವ್ಯಾಪಾರ ಮಾಡಿಕೊಂಡು ಇದರಲ್ಲೇ ಜೀವನ ಕಟ್ಟಿಕೊಂಡಿರುವ ಎಷ್ಟೂ ಕುಟುಂಬಗಳು ಸಹ ಈ ಯೋಜನೆಯಿಂದ ಬೀದಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಕೂಡ ಇಂತಹ ಅವೈಜ್ಞಾನಿಕ ಯೋಜನೆಯ ಕುರಿತು ಮತ್ತೊಮ್ಮೆ ಚಿಂತನೆ ನಡೆಸಿ ಮುಂದಿನ ತೀರ್ಮಾ ನ ಕೈಗೊಳ್ಳಬೇಕಿದೆ.
Recommended Video
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications