5 ವರ್ಷ, 4 ಕಂಪನಿ, ಬರೋಬ್ಬರಿ 6 ಪಟ್ಟು ಸಂಬಳ ಹೆಚ್ಚಳ! ಯುವತಿ ಹಂಚಿಕೊಂಡ ಸಕ್ಸಸ್ ಸೀಕ್ರೆಟ್ ಇಲ್ಲಿದೆ

ಕಾರ್ಪೊರೇಟ್ ಜಗತ್ತಿನಲ್ಲಿ ಒಂದೇ ಕಂಪೆನಿಯಲ್ಲಿ ದಶಕಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಮಾತ್ರ ನಾವು ಸಕ್ಸಸ್‌ ಆಗುವುದು ಎಂಬ ಹಳೆಯ ಸಿದ್ಧಾಂತವನ್ನ ಇಂದಿನ ಯುವಪೀಳಿಗೆ ಬದಲಾಯಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ವರ್ಷಕೊಮ್ಮೆ , ಅದು ಕೇವಲ ಶೇಕಡಾ 8 ರಿಂದ 10 ರಷ್ಟು ಆಗುವ ಇನ್‌ಕ್ರಿಮೆಂಟ್‌ಗಾಗಿ ಕಾಯುವ ಬದಲು, ಉದ್ಯೋಗ ಬದಲಾವಣೆ ಅಂದರೆ ಜಾಬ್‌ ಸ್ವೀಚ್‌ ಮಾಡಿಕೊಂಡು ತಮ್ಮ ಆದಾಯವನ್ನ ಹೆಚ್ಚಿಸಿಕೊಳ್ಳುತ್ತಿರುವವರ ಸಂಖ್ಯೆಯೇ ಹೆಚ್ಚು.

ಇದಕ್ಕೆ ಒಂದೊಳ್ಳೆ ಉದಾಹರಣೆ ಕೊಡುವುದಾದರೆ, ಶ್ರಷ್ಟಿ ಚೌಧರಿ ಎಂಬ ಯುವತಿ. ಹೌದು, ಇವರು ಕೇವಲ ಐದು ವರ್ಷಗಳಲ್ಲಿ ತಮ್ಮ ವಾರ್ಷಿಕ ವೇತನವನ್ನು 5 ಲಕ್ಷ ರೂಪಾಯಿಗಳಿಂದ (LPA) ಬರೋಬ್ಬರಿ ಆರು ಪಟ್ಟು ಹೆಚ್ಚಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

From 5 LPA to Nearly 6X in 5 Years Woman Reveals How Frequent Job Switches Accelerated Her Career

ಶ್ರಷ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಯಶಸ್ಸಿನ ಹಿಂದಿನ ಸ್ಟ್ರ್ಯಾಟಜಿಗಳನ್ನ ಅವರು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆರಿಯರ್ ಬೆಳವಣಿಗೆ ಸಲಹೆಗಳು : ಮೊದಲ ಸ್ವಿಚ್‌ನಲ್ಲೇ ಡಬಲ್ ಸಂಬಳ!

ಶ್ರಷ್ಟಿ ಚೌಧರಿ ಅವರು ಫ್ರೇಶರ್‌ ಆಗಿ ಕಾರ್ಪೊರೇಟ್ ಕ್ಷೇತ್ರಕ್ಕೆ ಕಾಲಿಟ್ಟಾಗ ಅವರ ಆರಂಭಿಕ ವಾರ್ಷಿಕ ವೇತನ 5 ಲಕ್ಷ ರೂಪಾಯಿಗಳಷ್ಟಿತ್ತು. ಸಾಮಾನ್ಯ ಕಂಪನಿಗಳು ನೀಡುವ ವಾರ್ಷಿಕ ಶೇಕಡಾ 10 ರ ಅಪ್ರೈಸಲ್‌ನಿಂದ ಇಷ್ಟು ದೊಡ್ಡ ಮೊತ್ತದ ವೇತನ ಹೆಚ್ಚಳ ಸಾಧ್ಯವೇ ಇರಲಿಲ್ಲ.

ಹೀಗಾಗಿ, ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಮೊದಲ ಬಾರಿಗೆ ಕಂಪನಿ ಬದಲಾಯಿಸಿದಾಗ ಅವರಿಗೆ ಶೇಕಡಾ 100 ರಷ್ಟು ಹೈಕ್, ಅಂದರೆ ದುಪ್ಪಟ್ಟು ಸಂಬಳ ಲಭಿಸಿತು. ಆ ನಂತರದ ಪ್ರತಿ ಉದ್ಯೋಗ ಬದಲಾವಣೆಯಲ್ಲೂ ಅವರಿಗೆ ಶೇಕಡಾ 30 ರಿಂದ 50 ರಷ್ಟು ವೇತನ ಏರಿಕೆಯಾಗಿದೆ.

ಹೀಗೆ ಐದು ವರ್ಷಗಳ ಅವಧಿಯಲ್ಲಿ ನಾಲ್ಕು ವಿಭಿನ್ನ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಅವರು ಆರಂಭಿಕ ವೇತನಕ್ಕಿಂತ ಆರು ಪಟ್ಟು ಹೆಚ್ಚಿನ ಸ್ಯಾಲರಿ ಪ್ಯಾಕೇಜ್ ತಲುಪಲು ಸಾಧ್ಯವಾಯಿತು ಎಂದು ಅವರು ಶ್ರಷ್ಟಿ ತಿಳಿಸಿದ್ದಾರೆ.

ಸಿವಿ ಹಾಳಾಗುತ್ತದೆ ಎಂಬ ಸಲಹೆಗಳನ್ನ ಮೆಟ್ಟಿನಿಂತ ಯುವತಿ

ಸಾಮಾನ್ಯವಾಗಿ ವೃತ್ತಿಜೀವನದಲ್ಲಿ ಪದೇಪದೇ ಕಂಪನಿಗಳನ್ನು ಬದಲಾಯಿಸಿದರೆ 'ಜಾಬ್ ಹಾಪಿಂಗ್' ಎನಿಸಿಕೊಳ್ಳುತ್ತದೆ ಮತ್ತು ಸಿವಿ ಹಾಳಾಗುತ್ತದೆ ಎಂದು ಹಿರಿಯರು ಅಥವಾ ಸಹೋದ್ಯೋಗಿಗಳು ಎಚ್ಚರಿಸುವುದುಂಟು. ಶ್ರಷ್ಟಿ ಅವರಿಗೂ ಇಂತಹ ನೂರಾರು ಸಲಹೆಗಳು ಬಂದಿದ್ದವು.

"ನೀವು ಕಂಪನಿಗೆ ನಿಷ್ಠರಾಗಿರಬೇಕು, ಇಲ್ಲದಿದ್ದರೆ ನಿಮ್ಮ ಸಿವಿ ಮೌಲ್ಯ ಕಳೆದುಕೊಳ್ಳುತ್ತದೆ ಎಂದು ಹಲವರು ಹೇಳಿದ್ದರು. ಒಂದು ವೇಳೆ ನಾನು ಅವರ ಮಾತು ಕೇಳಿದ್ದರೆ, ಇಂದಿಗೂ ಅದೇ ಕಡಿಮೆ ಸಂಬಳದಲ್ಲೇ ಉಳಿದುಕೊಳ್ಳಬೇಕಾಗುತ್ತಿತ್ತು. ಪ್ರತಿ ಸಂದರ್ಶನದಲ್ಲೂ 'ಇಷ್ಟೊಂದು ಬಾರಿ ಕಂಪನಿ ಏಕೆ ಬದಲಾಯಿಸಿದ್ದೀರಿ?' ಎಂದು ಕೇಳಲಾಗುತ್ತಿತ್ತು. ಅದಕ್ಕೆ ನಾನು 'ನನ್ನ ಬೆಳವಣಿಗೆಗಾಗಿ' ಎಂದು ನೇರವಾಗಿ ಉತ್ತರಿಸುತ್ತಿದ್ದೆ ಮತ್ತು ಆಫರ್ ಲೆಟರ್ ಪಡೆಯುತ್ತಿದ್ದೆ" ಎಂದು ಅವರು ಹೇಳಿದ್ದಾರೆ.

ಮಾರುಕಟ್ಟೆ ಮೌಲ್ಯ ತಿಳಿಯುವುದು ಮತ್ತು ಕೌಶಲ್ಯ ಪರೀಕ್ಷೆ ಅನಿವಾರ್ಯ

ವೃತ್ತಿಪರರು ತಮ್ಮ ಸಂಸ್ಥೆಯ ಬೇಡಿಕೆಯಷ್ಟೇ ಅಲ್ಲದೇ, ಹೊರಗಿನ ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಕೌಶಲ್ಯಗಳಿಗೆ ಎಷ್ಟು ಬೇಡಿಕೆಯಿದೆ ಎಂಬುದನ್ನ ಪರೀಕ್ಷಿಸಿಕೊಳ್ಳಬೇಕು ಎಂದು ಶ್ರಷ್ಟಿ ಸಲಹೆ ನೀಡಿದ್ದಾರೆ. ಆಂತರಿಕವಾಗಿ ಕಂಪನಿಗಳು ನಿಮ್ಮ ಹಳೆಯ ವೇತನದ ಆಧಾರದ ಮೇಲೆ ಹೆಚ್ಚಳ ನಿರ್ಧರಿಸಿದರೆ, ಹೊರಗಿನ ಮಾರುಕಟ್ಟೆಯು ನಿಮ್ಮ ಪ್ರಸ್ತುತ ಸಾಮರ್ಥ್ಯಕ್ಕೆ ತಕ್ಕಂತೆ ವೇತನ ನೀಡುತ್ತದೆ.

ಹೀಗಾಗಿ, ಕೆಲಸ ಬದಲಾಯಿಸುವ ಉದ್ದೇಶವಿಲ್ಲದಿದ್ದರೂ ಸಹ, ಪ್ರತಿ ಒಂದೂವರೆಯಿಂದ ಎರಡು ವರ್ಷಕ್ಕೊಮ್ಮೆಇಂಟರ್‌ವ್ಯೂ ಅಟೆಂಡ್‌ ಮಾಡಿ, ನಿಮ್ಮ ನಿಜವಾದ ಮೌಲ್ಯವನ್ನ ತಿಳಿದುಕೊಳ್ಳಿ ಎಂದು ಅವರು ತಿಳಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ: ಪರ-ವಿರೋಧದ ಅಭಿಪ್ರಾಯಗಳು

ಶ್ರಷ್ಟಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ಹಾಗೂ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

"ಕೇವಲ ಒಂದೇ ಕಡೆ ಕಂಫರ್ಟ್ ಜೋನ್‌ನಲ್ಲಿ ಕುಳಿತರೆ ವೃತ್ತಿ ಬೆಳವಣಿಗೆ ಕುಂಠಿತವಾಗುತ್ತದೆ", " ಸ್ಯಾಲರಿ ಹೆಚ್ಚಿಸಿಕೊಳ್ಳಲು ಕಂಪನಿ ಬದಲಾವಣೆ ಅತ್ಯಂತ ವೇಗವಾದ ದಾರಿ" ಎಂದು ಹಲವರು ಶ್ರಷ್ಟಿ ಅವರ ಮಾತನ್ನು ಬೆಂಬಲಿಸಿದ್ದಾರೆ. ಆದರೆ, ಪದೇಪದೇ ಕಂಪನಿ ಬದಲಾಯಿಸುವುದಕ್ಕಿಂತ ಆಳವಾದ ಅನುಭವ ಮತ್ತು ಸಂಸ್ಥೆಯ ಸಂಸ್ಕೃತಿಗೆ ಹೊಂದಿಕೊಳ್ಳುವುದು ದೀರ್ಘಾವಧಿಯ ನಾಯಕತ್ವಕ್ಕೆ ಅಗತ್ಯ ಎಂದು ಮತ್ತೊಂದು ವರ್ಗದ ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+