ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

KSRTC: ಬಸ್ ನಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 06 : ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಒಂದು ಉಪಾಯ ಮಾಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇನ್ನು ಮುಂದೆ ಉಚಿತವಾಗಿ ವೈಫೈ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಸದ್ಯಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ವಿಭಾಗಗಳಲ್ಲಿ ಇದು ಪ್ರಾಯೋಗಿಕವಾಗಿ ಆರಂಭವಾಗಲಿದ್ದು ಪ್ರಯಾಣಿಕರಿಗೆ ಉಚಿತವಾಗಿ ವೈಫೈ ಸೌಲಭ್ಯ ಸಿಗಲಿದೆ. ಕೇವಲ ಹವಾ ನಿಯಂತ್ರಿತ ವೋಲ್ವೋ ಲಕ್ಸುರಿ ಬಸ್ ಗಳಲ್ಲದೆ ಸಾಮಾನ್ಯ ಬಸ್ ಗಳಿಗೂ ವೈ ಫೈ ಸೇವೆ ಉಚಿತವಾಗಿ ಸಿಗಲಿದೆ.

KSRTC: ಬಸ್ ನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಪ್ರಯಾಣಕ್ಕೆ ಅವಕಾಶ!KSRTC: ಬಸ್ ನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಪ್ರಯಾಣಕ್ಕೆ ಅವಕಾಶ!

ಮಾರ್ಚ್ ತಿಂಗಳೊಳಗೆ 8800 ಬಸ್ ಗಳಿಗೆ ವೈಫೈ ಅಳವಡಿಸಲು ಕೆಎಸ್ ಆರ್ ಟಿಸಿ ಪೂನಾ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದೆ. ಈಗಾಗಲೇ ಸಂಸ್ಥೆಯ ಅಧಿಕಾರಿಗಳು ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ವಿಭಾಗಗಳಲ್ಲಿ ಸಂಚರಿಸುವ ಕೆಲವು ಬಸ್ ಗಳಿಗೆ ಮಾತ್ರ ವೈಫೈ ಸೌಲಭ್ಯ ಅಳವಡಿಸಿದ್ದಾರೆ.

Free Wi-Fi in KSRTC bus for Passengers

ನಗರಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುವ ಬಸ್ ಗಳಲ್ಲಿ ಇದು ಅಳವಡಿಕೆಯಾಗಿದ್ದು, ಇದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಬಸ್ ಗಳಿಗೆ ಅಳವಡಿಸಲಿದ್ದೇವೆ ಎಂದು ಕೆ ಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

24 ವಿಭಾಗಗಳಲ್ಲಿ ಬಸ್ ಗಳಿಗೆ ವೈಫೈ ಹಾಕಲಾಗಿದೆ. ಇದರಿಂದ ಪ್ರಯಾಣಿಕರು ಸಂತೋಷ ವ್ಯಕ್ತಪಡಿಸಿದ್ದು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

English summary
KSRTC introducing free Wi-Fi facilities for its passengers. Initially this facilities will be available in Bengaluru, Bengaluru rural and Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X