ಬೆಂಗಳೂರು: ಶನಿವಾರ ಉಚಿತ ನೋಟ್ ಪುಸ್ತಕ ವಿತರಣೆ
ಬೆಂಗಳೂರು,ಜೂ.20: ನಗರದ ಪಟ್ಟಾಭಿರಾಮನಗರ ವಾರ್ಡ್‌ನ ಕಾರ್ಪೋರೇಟರ್ ಸಿ.ಕೆ ರಾಮೂರ್ತಿಯವರು ಸ್ಥಾಪಿಸಿರುವ ರಕ್ಷಾ ಫೌಂಡೇಶನ್‌ನ ನಾಲ್ಕನೇಯ ವರ್ಷದ ಉಚಿತ ನೋಟ್ ಪುಸ್ತಕದ ವಿತರಣೆ ಕಾರ್ಯಕ್ರಮ ಜೂ.21 ಶನಿವಾರ ನಡೆಯಲಿದೆ.
ಜಯನಗರ ಐದನೇ ಬ್ಲಾಕ್‌ನಲ್ಲಿರುವ ಎಂಇಎಸ್ ಆಟದ ಮೈದಾನದಲ್ಲಿ ಪುಸ್ತಕದ ವಿತರಣೆ ನಡೆಯಲಿದ್ದು, ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಸಚಿವ ಅನಂತಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಗೃಹ ಮಂತ್ರಿ ಆರ್. ಅಶೋಕ್ ಅವರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಿದ್ದಾರೆ.[ಸುಂದರ 'ಬೆಂಗಳೂರು ಜೀವನ'ಕ್ಕಾಗಿ ಮಾರ್ಗದರ್ಶಿ]

ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ, ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷ ಸುಬ್ಬನರಸಿಂಹ, ವಿಧಾನ ಪರಿಷತ್ ಸದಸ್ಯೆ ತಾರಾ ವೇಣು ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications