ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾವ್ ! ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಉಚಿತ ವೈಫೈ

|
Google Oneindia Kannada News

ಬೆಂಗಳೂರು, ಅ.27 : ಕನ್ನಡ ರಾಜ್ಯೋತ್ಸವದಂದು ರಾಜ್ಯದಲ್ಲಿ ನಾಲ್ಕು ರೈಲುಗಳಿಗೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಡಿ.4ರಂದು ಯಶವಂತಪುರ-ಜೋಧ್‌ಪುರ ಮತ್ತು ಡಿ.11ರಂದು ಯಶವಂತಪುರ-ಕತ್ರಾ ರೈಲುಗಳನ್ನೂ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣ ಆವರಣದಲ್ಲಿ ಶನಿವಾರ ಮಾತನಾಡಿದ ಡಿ.ವಿ.ಸದಾನಂದ ಗೌಡರು, ಬೆಂಗಳೂರು-ತುಮಕೂರು, ಹುಬ್ಬಳ್ಳಿ-ಬೆಂಗಳೂರು, ಬೆಂಗಳೂರು-ಚಾಮರಾಜನಗರ, ಬೆಂಗಳೂರು-ಯಶವಂತಪುರ-ಹೊಸೂರು ರೈಲುಗಳಿಗೆ ನ.1ರಂದು ಚಾಲನೆ ನೀಡಲಾಗುತ್ತದೆ ಎಂದರು.

Sadananda Gowda

ಡಿ.4ರಂದು ಯಶವಂತಪುರ-ಜೋಧ್‌ಪುರ ಮತ್ತು ಡಿ.11ರಂದು ಯಶವಂತಪುರ-ಕತ್ರಾ ರೈಲುಗಳಿಗೆ ಚಾಲನೆ ನೀಡಲಾಗುತ್ತದೆ. ಈ ಎಲ್ಲ ರೈಲುಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸದಾನಂದ ಗೌಡರು ಹೇಳಿದರು. [ಮೂವರು ಕೇಂದ್ರ ಸಚಿವರ ಆಸ್ತಿಯಲ್ಲಿ ದಿಢೀರ್ ಏರಿಕೆ]

ಉಚಿತ ವೈಫೈ ಸೇವೆ : ಬೆಂಗಳೂರು ನಗರ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಉಚಿತ ವೈಫೈ ಸೌಲಭ್ಯ ಪಡೆಯಬಹುದಾಗಿದೆ. ಶನಿವಾರ ಈ ಸೌಲಭ್ಯಕ್ಕೆ ಚಾಲನೆ ದೊರಕಿದೆ. ಎ-1 ಮತ್ತು ಎ ದರ್ಜೆ ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಆರಂಭಿಕವಾಗಿ ರೈಲ್‌ಟೆಲ್ ಸಂಸ್ಥೆ ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಈ ಸೌಲಭ್ಯ ಕಲ್ಪಿಸಿದೆ ಎಂದು ಸಚಿವರು ಹೇಳಿದರು. [ನಾಲ್ಕು ರೈಲುಗಳ ಪ್ರಯಾಣಿಕರಿಗೆ ವೈಫೈ ಭಾಗ್ಯ]

ವೈಫೈ ಸೌಲಭ್ಯ 30 ನಿಮಿಷ ಮಾತ್ರವಿರುತ್ತದೆ. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ವೈಫೈ ಸೌಲಭ್ಯ ಆನ್ ಮಾಡಿ, ರೈಲ್‌ವೈರ್ ವೈಫೈ ನೆಟ್‌ವರ್ಕ್ ಆಯ್ದುಕೊಳ್ಳಬೇಕು. ನಂತರ ಯೂಸರ್ ಸಂಖ್ಯೆ ಮತ್ತು ಒಂದು ಬಾರಿಯ ಪಾಸ್‌ವರ್ಡ್ ಸಂಖ್ಯೆ ಮೊಬೈಲ್‌ಗೆ ಬರುತ್ತದೆ.

ಮೊದಲ 30 ನಿಮಿಷಗಳು ವೈಫೈ ಸೇವೆ ಉಚಿತವಾಗಿರುತ್ತದೆ. ನಂತರ ಮುಂದಿನ 30 ನಿಮಿಷಕ್ಕೆ 25 ರೂ. ಹಾಗೂ ಒಂದು ತಾಸಿಗೆ 35 ರೂ. ಪಾವತಿಸಬೇಕಾಗುತ್ತದೆ. ಈ ಸೇವೆಯನ್ನು ಸ್ಕ್ಯಾಚ್‌ ಕಾರ್ಡ್‌ ರೂಪದಲ್ಲಿ ಹಣ ಕೊಟ್ಟು ವೈಫೈ ಸಹಾಯ ಕೇಂದ್ರದಲ್ಲಿ ಪಡೆಯಬಹುದಾಗಿದೆ.

ದಿನದ 24 ಗಂಟೆಯೂ ಪ್ರಯಾಣಿಕರಿಗೆ ಈ ವೈಫೈ ಸೇವೆ ಲಭ್ಯವಾಗಲಿದ್ದು, ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಿಂದ ಹಿಡಿದು ಎಲ್ಲಾ ಪ್ಲಾಟ್‌ ಫಾರಂಗಳು, ನಿಲ್ದಾಣದಲ್ಲಿ ಬರುವ ಮೇಲ್ಸೇತುವೆ, ಸಬ್‌ ವೇಗಳಲ್ಲಿ ಇದರ ಸೇವೆ ಲಭ್ಯವಿದೆ.

English summary
The Minister of Railways D.V. Sadananda Gowda inaugurated Wi-Fi facility in Bangalore City Railway station. He also declared that 4 new trains will start operating from Bangalore soon and railways will also start new suburban trains from 1 November 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X