ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ: 4 ಮಂದಿ ಖದೀಮರು ಪೊಲೀಸ್ ಬಲೆಗೆ

ಬೆಂಗಳೂರು, ಡಿಸೆಂಬರ್ 3: ವಾಹನಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು, ಮೊಬೈಲ್‌ಗಳನ್ನು ದೋಚುತ್ತಿದ್ದ ನಾಲ್ಕು ಮಂದಿ ಖದೀಮರನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 29ರಂದು ಸಂಜೆ 4.30 ರಿಂದ 5.30ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದ ನಾಲ್ಕು ಜನ ಖದೀಮರು ವಾಹನಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಅವರಿಂದ ವಾಹನ, ನಗದು, ಮೊಬೈಲ್‌ಗಳನ್ನು ಕಿತ್ತುಕೊಂಡು ಓಡಿ ಹೋಗಿರುವ ಕುರಿತು ಆರು ಪ್ರಕರಣಗಳು ದಾಖಲಾಗಿದ್ದವು.

ಮೊದಲನೇ ಪ್ರಕರಣದಲ್ಲಿ ಏರ್‌ಪೋರ್ಟ್‌ಗೆ ಹೋಗಲು ಹುಣಸಮಾರಹಳ್ಳಿಯಲ್ಲಿ ಕ್ಯಾಬ್ ಕಾಯುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ 10 ಸಾವಿರ ರೂ, ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದರು.

Four robbers in police dock who involved in many robberies

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮದ್ ಹರ್ಷದ್ ಖಾನ್, ಮಹಮದ್ ಇಫ್ತಕರ್ ಅಲಿ, ಸೈಯದ್ ಸುಹೇಲ್, ಶೇಖ್ ಅಸ್ಗರ್ ನನ್ನು ಬಂಧಿಸಲಾಗಿದೆ. ಚಿಕ್ಕಜಾಲ ಪೊಲೀಸ್ ಠಾಣೆಯ ಪಿಐ ಕೇಶವಮೂರ್ತಿ, ಪಿಎಸ್‌ಐ ಪ್ರವೀಣ್ ಕುಮಾರ್ ಅವರ ತಂಡ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2 ದ್ವಿಚಕ್ರ ವಾಹನ, 5 ಮೊಬೈಲ್ , ಒಂದು ಬೆಳ್ಳಿ ಚೈನ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+