ಬೆಂಗಳೂರಲ್ಲಿ ನಾಲ್ವರು ಸುಪಾರಿ ಹಂತಕರ ಬಂಧನ
ಬೆಂಗಳೂರು, ಸೆಪ್ಟೆಂಬರ್, 07 : ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿನ ಟೈಮ್ಸ್ ಬಾರ್‌ನ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿದ್ದ ನಾಲ್ವರು ಸುಪಾರಿ ಹಂತಕರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ನಾಲ್ವರ ಬಂಧನದ ಬಗ್ಗೆ ಮಾಹಿತಿ ನೀಡಿದರು. ಬಂಧಿತರು ಬೆಳ್ತಂಗಡಿಯ ಅನ್ವರ್ ಹಸನ್ (32), ಮೂಡಬಿದಿರೆಯ ಇಮ್ರಾನ್ (33), ಸುರೇಶ್ (28) ಹಾಗೂ ಆಂಧ್ರಪ್ರದೇಶದ ಸುಹೈಲ್ ಖಾನ್ (26).[ಬಾರ್ ಮಾಲೀಕನ ಮೇಲೆ ಗುಂಡಿನ ದಾಳಿ]

ಆ.17ರಂದು ಟೈಮ್ಸ್ ಬಾರ್‌ನ ಮಾಲೀಕ ಚೇತನ್ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲು ಪ್ರಯತ್ನ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ರಾಕೇಶ್ ಅಲಿಯಾಸ್ ಅಲ್ತಾಫ್ ಮತ್ತು ಅಸ್ಗರ್ ಅಲಿ ಅಲಿಯಾಸ್ ಮುನ್ನಾ ಎಂಬುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ['ಬೆಂಗಳೂರು ನನಗೆ ಹೊಸದಲ್ಲ' : ನೂತನ ಆಯುಕ್ತ ಮೇಘರಿಕ್]
ಹತ್ಯೆಯ ಪ್ರಯತ್ನ ಏಕೆ? : ತಲೆಮರೆಸಿಕೊಂಡಿರುವ ರಾಕೇಶ್ ಮತ್ತು ಬಾರ್ ಮಾಲೀಕ ಚೇತನ್ ಹಿಂದೆ ವ್ಯಾಪಾರದಲ್ಲಿ ಪಾಲುದಾರರಾಗಿದ್ದರು. ನಂತರ ಮೈಮನಸ್ಸು ಉಂಟಾಗಿ ಬೇರೆ-ಬೇರೆಯಾಗಿದ್ದರು. ದುಬೈಗೆ ತೆರಳಿದ್ದ ರಾಕೇಶ್ 15 ಲಕ್ಷ ಹಣ ನೀಡುವಂತೆ ಚೇತನ್‌ಗೆ ಬೇಡಿಕೆ ಇಟ್ಟಿದ್ದ.
ಹಣ ನೀಡಲು ನಿರಾಕರಿಸಿದ್ದರಿಂದ ಅಸ್ಗರ್ ಅಲಿ ಜೊತೆ ಸೇರಿ ಚೇತನ್ ಹತ್ಯೆಗೆ ಸಂಚು ರೂಪಿಸಿದ್ದ. ಬಂಧಿತ ಇಮ್ರಾನ್‌ಗೆ 15 ಲಕ್ಷ ರೂ.ಗೆ ಸುಪಾರಿ ನೀಡಿ ಚೇತನ್ ಕೊಲೆ ಮಾಡಲು ತಿಳಿಸಲಾಗಿತ್ತು. 1 ಲಕ್ಷ ರೂ.ಗಳ ಮುಂಗಡ ಹಣವನ್ನು ನೀಡಲಾಗಿತ್ತು.
ಇಮ್ರಾನ್ ತನ್ನ ಸಹಚರರ ಜೊತೆ ಬೆಂಗಳೂರಿಗೆ ಬಂದು ಬಾರ್ ಮಾಲೀಕ ಚೇತನ್ ಬಗ್ಗೆ ವಿವರಗಳನ್ನು ಸಂಗ್ರಹಿಸಿ ಆ.17ರಂದು ಬಾರ್‌ನಲ್ಲಿ ಆತನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಚೇತನ್ ಬೆನ್ನಿಗೆ ಗುಂಡು ತಗುಲಿದ್ದು, ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಚಿತ್ರ ಮಾಹಿತಿ : ಬೆಂಗಳೂರು ಪೊಲೀಸ್]
Tweet by Deputy Commissioner of Police - Central DivisionBengaluru CityShri. Sandeep Patil, IPS@DCPCentralBCP@...
Posted by BENGALURU CITY POLICE onMonday, September 7, 2015
-
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications