Get Updates
Get notified of breaking news, exclusive insights, and must-see stories!

ನಾರಾಯಣ ಹೆಲ್ತ್ ಸಿಟಿ ಟ್ರೆಡ್ ಮಿಲ್ ಮೇಲೆ ಮಾಜಿ ಕ್ರಿಕೆಟರ್ ವಾಕಿಂಗ್

ಬೆಂಗಳೂರು, ಏಪ್ರಿಲ್ 26: ರೋಗಿಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್ ಸಿಟಿ ತನ್ನ ಆವರಣದಲ್ಲಿ ವಿಶೇಷವಾದ ಸಮಗ್ರ ಪುನರ್ವಸತಿ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವನ್ನು ಮಾಜಿ ಭಾರತೀಯ ಕ್ರಿಕೆಟ್ ಪಟು ಬಿ.ಕೆ.ವೆಂಕಟೇಶ್ ಪ್ರಸಾದ್ ಮತ್ತು ನಾರಾಯಣ ಹೆಲ್ತ್ ನ ಅಧ್ಯಕ್ಷರು & ಆಡಳಿತ ನಿರ್ದೇಶಕರಾದ ಡಾ.ದೇವಿಪ್ರಸಾದ್ ಶೆಟ್ಟಿ ಉದ್ಘಾಟಿಸಿದರು.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅನುಭವಿ ವಿಶೇಷ ತಜ್ಞರನ್ನು ಒಳಗೊಂಡ ಈ ಕೇಂದ್ರವು ತೀವ್ರತರ ವೈದ್ಯಕೀಯ ಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಶಸ್ತ್ರಚಿಕಿತ್ಸೆಯಾಗಿ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ಸಮಗ್ರ ಪುನರ್ವಸತಿ ಚಿಕಿತ್ಸೆಗಳನ್ನು ಒದಗಿಸಲಿದೆ. ಈ ಅತ್ಯಾಧುನಿಕ ಕೇಂದ್ರವು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಅಸ್ವಸ್ಥತೆಯನ್ನು ತಿಳಿದುಕೊಂಡು ಚಿಕಿತ್ಸೆಯ ಸಮತೋಲನವನ್ನು ಸಾಧಿಸಲು ನೆರವಾಗುತ್ತದೆ. ಈ ಕೇಂದ್ರವು ಅತ್ಯಾಧುನಿಕ ಕಂಪ್ಯೂಟರ್ ನಿರ್ದೆಶಿತ ಚಲನೆ ಪುನರ್ವಸತಿ ಸೌಲಭ್ಯವನ್ನು ಕೂಡಾ ಹೊಂದಿರುತ್ತದೆ.

Former Cricketer Venkatesh Prasad inaugurates Rehabilitation centre Narayana Health City

ಈ ಸಮಗ್ರ ಕೇಂದ್ರವು, ಬೆನ್ನು ನೋವು, ಮೊಣಕಾಲು ನೋವು, ಕತ್ತು ನೋವು, ಎಲುಬು ಸವೆತ, ನರರೋಗ, ಶಸ್ತ್ರಚಿಕಿತ್ಸೆ ಬಳಿಕದ ಪುನರ್ವಸತಿ, ಭುಜದ ನೋವು, ಜಾರಿದ ಬೆನ್ನು ತಟ್ಟೆ (ಸ್ಲಿಪ್ಡ್ ಡಿಸ್ಕ್), ಕಶೇರುಕವ್ಯಾಧಿ (ಸ್ಪಾಂಡಿಲೈಟಿಸ್) ಮತ್ತು ಕ್ರೀಡಾ ಗಾಯಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸುತ್ತದೆ. ಮಾಂಸಖಂಡ ಮತ್ತು ಅಸ್ಥಿಪಂಜರ ಸಮಸ್ಯೆ, ಚಲನಾ ಸಮಸ್ಯೆ ಮತ್ತು ಕೀಲು ಬದಲಾವಣೆ ರೋಗಿಗಳಿಗೆ (ಸೊಂಟ, ಮೊಣಕಾಲು, ಭುಜಗಳು, ಇತ್ಯಾದಿ) ಗಳಿಗೆ ಸೂಕ್ತ ತರಬೇತಿಯನ್ನು ಕೂಡಾ ಒದಗಿಸುತ್ತದೆ. ಕ್ರಿಯಾತ್ಮಕ ವಿದ್ಯುತ್ ಪ್ರಚೋದನೆ (ಫಂಕ್ಷನಲ್ ಎಲೆಕ್ಟ್ರಿಕಲ್ ಸ್ಟಿಮ್ಯುಲೇಶನ್ ಸೌಲಭ್ಯ (ಎಫ್‍ಇಎಸ್), ಮಕ್ಕಳ ನರಸಮಸ್ಯೆ ಪುನರ್ವಸತಿ ಮತ್ತು ಯೋಗ ಚಿಕಿತ್ಸೆಗಳನ್ನು ಕೂಡಾ ಈ ಅತ್ಯಾಧುನಿಕ ಪುನರ್ವಸತಿ ಕೇಂದ್ರದಲ್ಲಿ ನೀಡಲಾಗುತ್ತದೆ.

Former Cricketer Venkatesh Prasad inaugurates Rehabilitation centre Narayana Health City

ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ಬಗ್ಗೆ

ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದ್ದು, ಇದರಲ್ಲಿ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಸೂಪರ್‍ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ಹೃದ್ರೋಗ ಸಂಸ್ಥೆ, ಕ್ಯಾನ್ಸರ್ ಚಿಕಿತ್ಸೆ, ನರರೋಗ ಮತ್ತು ನರಶಸ್ತ್ರಚಿಕಿತ್ಸೆ, ಮೂತ್ರರೋಗ, ಮೂತ್ರಶಾಸ್ತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ಮಜೂಂದರ್ ಶಾ ವೈದ್ಯಕೀಯ ಕೇಂದ್ರ (ಎಂಎಸ್‍ಎಂಸಿ)ಯನ್ನು ಹೊಂದಿದೆ. ಬಹುಶಃ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ಅಸ್ಥಿಮಜ್ಜೆ ಕಸಿ ಕೇಂದ್ರವನ್ನೂ ಹೊಂದಿದೆ. ನಾರಾಯಣ ಹೆಲ್ತ್ ಸಿಟಿ ಅಂಗಾಂಶ ಕಸಿ ಬ್ಯಾಂಕನ್ನು ಸಹಾ ನಿರ್ವಹಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+