ಭಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿಧನ

ಬೆಂಗಳೂರು, ಏಪ್ರಿಲ್ 25: ಭಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ.

Recommended Video

      ಮಂಡ್ಯದಲ್ಲಿ ಕೊರೊನ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ , ಸಚಿವ ಡಾ. ನಾರಾಯಣಗೌಡ ಪ್ರತಿಕ್ರಿಯೆ

      ಚಿಕ್ಕಮಗಳೂರಿನ ಕೊಪ್ಪ ಮೂಲದ ಮಹೇಂದ್ರ ಕುಮಾರ್ ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದರು.

      ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, 2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಳಿಕ ಅದೇ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು.

      former-convener-of-bajrang-dal-mahendra-kumar-passes-away

      2008 ರ ಅಕ್ಟೋಬರ್ 1 ರಂದು ಭಜರಂಗ ದಳಕ್ಕೆ ರಾಜೀನಾಮೆ ನೀಡಿದ ಮಹೇಂದ್ರ ಕುಮಾರ್, 2011 ಫೆಬ್ರವರಿ 21 ರಂದು ಜೆಡಿಎಸ್ ಸೇರಿದ್ದರು. ಸಂಘ ಪರಿವಾರ ಕಟು ಟೀಕಾಕಾರರಾಗಿ ಸಾಮಾಜಿಕ, ಜಾಗೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಹೇಂದ್ರ ಕುಮಾರ್ ಭಾಗವಹಿಸುತ್ತಿದ್ದರು.

      'ನಮ್ಮ ಧ್ವನಿ' ಎಂಬ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದ ಮಹೇಂದ್ರ ಕುಮಾರ್, ಸಮಾಜದ ಪರ ದನಿಯಾಗಿದ್ದರು. ಕೇಂದ್ರ ಸರ್ಕಾರರ ಸಿಎಎ ಕಾಯ್ದೆ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+