ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿಯಾಗಿ ಆರೋಗಯವನ್ನು ವಿಚಾರಿಸಿದ್ದಾರೆ. ಮುಂಗಾರು ಅಧಿವೇಶನದ ಕಲಾಪದ ಅವಧಿ ಮುಗಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಭೇಟಿಯನ್ನು ಕೊಟ್ಟು ಆರೋಗ್ಯವನ್ನು ವಿಚಾರಿಸಿದ್ದಾರೆ.

ಕೆಲದಿನಗಳಿಂದ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿತ್ತು. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಜಮೀರ್ ಅಹಮದ್‌ ಖಾನ್, ಆರ್.ವಿ ದೇಶಪಾಂಡೆ ಸೇರಿದಂತೆ ಇತರೆ ನಾಯಕರು ಮಾಜಿ ಪ್ರಧಾನಿಯವರ ಆರೋಗ್ಯವನ್ನು ವಿಚಾರಿಸಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆ: ಕೆಸಿಆರ್ ಕೊಟ್ಟ ಮುನ್ಸೂಚನೆ ಏನು?ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬದಲಾವಣೆ: ಕೆಸಿಆರ್ ಕೊಟ್ಟ ಮುನ್ಸೂಚನೆ ಏನು?

ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು ದೇವೇಗೌಡರು ಸಿದ್ದರಾಮಯ್ಯರನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು ಆತ್ಮೀಯವಾಗಿ ಮಾತನಾಡಿದ್ದಾರೆ. ದೇವೇಗೌಡ ಗರಡಿಯಲ್ಲೇ ಬೆಳೆದಿದ್ದ ಸಿದ್ದರಾಮಯ್ಯರನ್ನು ಒಂದು ಕಾಲದಲ್ಲಿ ತನ್ನ ಹಿರಿಯ ಮಗನಿದ್ದಂತೆ ಎಂದು ಸ್ವತಃ ದೇವೇಗೌಡರೇ ಹೇಳಿದ್ದರು. ಕಾಲ ಕ್ರಮೇಣ ವೈಮನಸ್ಸು ಉಂಟಾಗಿ ದೇವೇಗೌಡರಿಂದ ಸಿದ್ದರಾಮಯ್ಯ ದೂರವಾಗಿದ್ದರು.

Former CM Siddaramaiah visited former Prime Minister Deve Gowdas house

6 ವರ್ಷದ ಬಳಿಕ ದೇವೇಗೌರ ಭೇಟಿಯಾದ ಸಿದ್ದರಾಮಯ್ಯ

ದೇವೇಗೌರನ್ನು ಕಂಡರೆ ಅಷ್ಟಕ್ಕಷ್ಟೇ ಎಂಬಂತಿದ್ದ ಸಿದ್ದರಾಮಯ್ಯ 6 ವರ್ಷಗಳ ಬಳಿಕ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದಾರೆ. ರಾಜಕೀಯಕ್ಕಾಗಿ ವಿರೋಧಿಸುವುದೇ ಬೇರೆ ವೈಯಕ್ತಿಕ ಸಂಬಂಧವೇ ಬೇರೆ ಎನ್ನುವಂತೆ ಪರಸ್ಪರರು ಆರೋಗ್ಯವನ್ನು ವಿಚಾರಿಸಿದ್ದಾರೆ. ದೇವೇಗೌಡರು ಶೀಘ್ರವೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂಬುದೇ ಎಲ್ಲರ ಆಶಯವಾಗಿದ್ದು. ಮಾಜಿ ಸಿಎಂ ಸಿದ್ದರಾಮಯ್ಯ ಸಹ ದೇವೇಗೌಡರು ಗುಣಮುಖರಾಗಿ ಎಂದು ಆತ್ಮೀಯವಾಗಿ ಮಾತನಾಡಿಸಿದ್ದಾರೆ.

ಗುರುಶಿಷ್ಯರ ಭೇಟಿಯಲ್ಲಿಲ್ಲ ರಾಜಕೀಯ ಮಾತುಕತೆ

ಗುರು ದೇವೇಗೌಡರು ಶಿಷ್ಯ ಸಿದ್ದರಾಮಯ್ಯ ಆರೋಗ್ಯ ಸಂಬಂಧ ಮಾತನಾಡಿದ್ದಾರೆಯೇ ವಿನಃ ಯಾವುದೇ ರಾಜಕೀಯ ಕಾರಣಕ್ಕಾಗಲಿ ಭೇಟಿಯನ್ನಾಗಿಲ್ಲ. ಈ ಭೇಟೆ ಉಭಯ ಕುಶಲೋಪರಿಯನ್ನು ವಿಚಾರಿಸುವುದಾಗಿತ್ತು. ದೇವೇಗೌಡರ ಆರೋಗ್ಯವನ್ನು ವಿಚಾರಿಸುವುದಾಗಿತ್ತು ಎಂದು ತಿಳಿದುಬಂದಿದೆ.

English summary
Opposition leader Siddaramaiah visited former Prime Minister Deve Gowda's house and inquired about his health. After the end of Monsoon session, former Prime Minister visited Deve Gowda's residence in Padmanabhanagar and inquired about his health, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X