ಕಮಿಷನರ್ ಹುದ್ದೆ ಹೋದರೇನಂತೆ, ಕಮಲ್ ಪಂತ್ ಗೆ ಮತ್ತೆ ಮಹತ್ವದ ಹುದ್ದೆ
ನಿರೀಕ್ಷಿತ ವರ್ಗಾವಣೆಯೊಂದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗಗಕ್ಕೆ ಡಿಜಿಪಿಯಾಗಿ ಟ್ರಾನ್ಸಫರ್ ಮಾಡಲಾಗಿದೆ. ಜೆ.ಜೆ.ನಗರ ಕೇಸ್ ನಂತರ ಕಮಲ್ ಪಂತ್ ಅವರ ವರ್ಗಾವಣೆಯನ್ನು ನಿರೀಕ್ಷಿಸಲಾಗಿತ್ತು.
ಜೆ.ಜೆ.ನಗರದ ಚಂದ್ರು ಹತ್ಯೆ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ವ್ಯತಿರಿಕ್ತವಾಗಿ ಕಮಲ್ ಪಂತ್ ಟ್ವೀಟ್ ಮಾಡಿದ್ದು, ಇದಾದ ನಂತರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರ ಹೇಳಿಕೆಯಿಂದಾಗಿ, ಕಮಲ್ ಪಂತ್ ಮತ್ತು ಸರಕಾರದ ನಡುವಿನ ಸಂಬಂಧ ಹಳಸಿತ್ತು.
ಪಿಎಸ್ಐ ನೇಮಕಾತಿ ಹಗರಣ ದೊಡ್ಡ ಸುದ್ದಿಯಾಗಿ ರಾಜ್ಯ ಸರಕಾರಕ್ಕೆ ಮುಜುಗರವಾಗಲು ಕಮಲ್ ಪಂತ್ ಅವರನ್ನು ಅವಮಾನಿಸಿದ್ದಕ್ಕೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಹೀಗಾಗಿ, ಕಮಲ್ ಪಂತ್ ಅವರ ವರ್ಗಾವಣೆಯಾಗುವುದು ಖಚಿತ ಜೊತೆಗೆ, ಅಷ್ಟೇನೂ ಪ್ರಾಮುಖ್ಯತೆ ಪಡೆಯದ ಇಲಾಖೆಗೆ ಅವರನ್ನು ಎತ್ತಂಗಡಿ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸರಕಾರ ಮತ್ತಷ್ಟು ಜವಾಬ್ದಾರಿ ಇರುವ ಖಾತೆಯನ್ನು ನೀಡುವ ಮೂಲಕ, ಅವರ ಮೇಲೆ ವಿಶ್ವಾಸವನ್ನು ಮುಂದುವರಿಸಿದೆ.

ಸುದೀರ್ಘ 22 ತಿಂಗಳುಗಳ ಕಾಲ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ
ಸುದೀರ್ಘ 22 ತಿಂಗಳುಗಳ ಕಾಲ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ಸರಕಾರ ನೇಮಿಸಿದೆ. ಈ ಹಿಂದೆ ಕೇಂದ್ರ ಲೋಕಾಯುಕ್ತದಲ್ಲೂ ಕೆಲಸ ಮಾಡಿ ಉತ್ತಮ ಹೆಸರನ್ನು ಸಂಪಾದಿಸಿದ್ದ ಕಮಲ್ ಪಂತ್, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ವಿವಿಧ ಶಿಫಾರಸುಗಳನ್ನು ಬಳಸಿಕೊಂಡು ಹತ್ತಾರು ವರ್ಷದಿಂದ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಸಿಬ್ಬಂದಿಗಳನ್ನು ಎತ್ತಂಗಡಿ ಮಾಡಿ ಕಮಲ್ ಪಂತ್ ಸುದ್ದಿಯಾಗಿದ್ದರು.

ಪಿಎಸ್ಐ ನೇಮಕಾತಿ ಹಗರಣದ ಕೆಸರಿನಲ್ಲಿ ಸರಕಾರ ಮತ್ತು ಇಲಾಖೆ
ನೇಮಕಾತಿ ವಿಭಾಗಕ್ಕೆ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಿರುವುದು ಮಹತ್ವ ಪಡೆದುಕೊಂಡಿರುವುದಕ್ಕೆ ಕಾರಣ ಪಿಎಸ್ಐ ನೇಮಕಾತಿ ಹಗರಣ. ಈ ಹಗರಣದ ಕೆಸರಿನಲ್ಲಿ ಸರಕಾರ ಮತ್ತು ಈ ಇಲಾಖೆ ಸಿಲುಕಿಕೊಂಡಿರುವುದರಿಂದ, ಇಲ್ಲಿ ಪಾರದರ್ಶಕತೆ ತರುವುದು ಕಮಲ್ ಪಂತ್ ಅವರಿಗೆ ಸವಾಲಿನ ಕೆಲಸವಾಗಬಹುದು. ಆದರೆ, ಇಂತಹ ಆಯಕಟ್ಟಿನ ಜವಾಬ್ದಾರಿಯನ್ನು ಹಿಂದೆಯೂ ಸಮರ್ಥವಾಗಿ ನಿಭಾಯಿಸಿರುವುದರಿಂದ, ಕಮಲ್ ಪಂತ್ ಈ ವಿಚಾರದಲ್ಲಿ ವಿಶ್ವಾಸದ ಮಾತನ್ನಾಡಿದ್ದಾರೆ.

ಕಮಲ್ ಪಂತ್ ಅವರ ಜಾಗಕ್ಕೆ ಎಡಿಜಿಪಿ ಸಿ.ಎಚ್.ಪ್ರತಾಪ್ ರೆಡ್ಡಿ
ಚುನಾವಣಾ ವರ್ಷವಾಗಿರುವುದರಿಂದ ಪಿಎಸ್ಐ ನೇಮಕಾತಿ ಹಗರಣದಲ್ಲಿ ಸರಕಾರ ಮುಜುಗರದಿಂದ ಹೊರಗೆ ಬರಬೇಕಾಗಿದೆ. ಇಲ್ಲವಾದಲ್ಲಿ ವಿರೋಧ ಪಕ್ಷಗಳಿಗೆ ಇದುವೇ ಪ್ರಮುಖ ಅಸ್ತ್ರವಾಗಬಹುದು. ಹಾಗಾಗಿ, ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಕಮಲ್ ಪಂತ್ ಅವರ ಮೇಲಿದೆ. ಆಗಸ್ಟ್ 1, 2020ರಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ಕಮಲ್ ಪಂತ್ ಅವರ ಜಾಗಕ್ಕೆ ಎಡಿಜಿಪಿ ಸಿ.ಎಚ್.ಪ್ರತಾಪ್ ರೆಡ್ಡಿಯವರನ್ನು ನೇಮಿಸಲಾಗಿದೆ.

ಕಮಲ್ ಪಂತ್ ಅವಮಾನ ಮಾಡಿದ್ದಕ್ಕೆ ಪಿಎಸ್‌ಐ ಹಗರಣ ಹೊರಗೆ ಬಂತು, ಕುಮಾರಸ್ವಾಮಿ
ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಕಮಲ್ ಪಂತ್ ಅವಮಾನ ಮಾಡಿದ್ದಕ್ಕೆ ಪಿಎಸ್‌ಐ ಹಗರಣ ಹೊರಗೆ ಬಂತು ಎಂದು ಕುಮಾರಸ್ವಾಮಿ ಹೇಳಿದ್ದರು. ಹೀಗಾಗಿ ಕಮಲ್ ಪಂತ್ ಅವರಿಗೆ ಡಮ್ಮಿ ಹುದ್ದೆ ಕೊಟ್ಟರೆ ಇನ್ನೂ ಸಮಸ್ಯೆ ಆಗಬಹುದು ಎಂದು ಒಳ್ಳೆಯ ಹುದ್ದೆ ಕೊಟ್ಟಿರಬಹುದು. ಅಥವಾ,
ಕಮಲ್ ಪಂತ್ ಸದ್ಯ ಡಿಜಿಪಿ ರ‍್ಯಾಂಕ್ ನಲ್ಲಿ ಇರುವವರು, ಬೆಂಗಳೂರು ಕಮಿಷನರ್ ಎಡಿಜಿಪಿ ರ‍್ಯಾಂಕ್ ಹುದ್ದೆ. ತಮ್ಮ ರ‍್ಯಾಂಕ್ ಗಿಂತ ಕೆಳಗಿನ ಹುದ್ದೆಯಲ್ಲಿ ಪಂತ್ ಇದ್ದರು. ಅದಕ್ಕಾಗಿ ಒಳ್ಳೆಯ ಹುದ್ದೆ ಕೊಡುವ ಅಗತ್ಯವೂ ಇತ್ತು.

ಹೊಸ ಆಯುಕ್ತರಾಗಿ ದಂಡವನ್ನು ಹಸ್ತಾಂತರಿಸಿದ ಕಮಲ್ ಪಂತ್
ಹೊಸ ಆಯುಕ್ತರಾಗಿ ದಂಡವನ್ನು ಹಸ್ತಾಂತರಿಸಿದ ಕಮಲ್ ಪಂತ್, ನೂತನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. "ಸರ್ಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ನನಗೆ 22 ತಿಂಗಳು ಸೇವೆಯನ್ನು ಮಾಡಲು ಅವಕಾಶವನ್ನು ನೀಡಿದ್ದಾರೆ. ಇದೀಗ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಯು ಉತ್ತಮ ಕಾರ್ಯವನ್ನು ನಿಭಾಯಿಸುವ ವಿಶ್ವಾಸವನ್ನು ಹೊಂದಿದ್ದೇನೆ" ಎಂದು ಕಮಲ್ ಪಂತ್ ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿ ವರ್ಗಾವಣೆಗೊಂಡು, ಕೆಸರಿನ ಕೂಪವಾಗಿರುವ ಪಿಎಸ್ಐ ನೇಮಕಾತಿ ಹಗರಣವನ್ನು ಸರಿದಾರಿಗೆ ತರುತ್ತಾರೋ ಕಾದು ನೋಡಬೇಕಿದೆ.
-
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ











Click it and Unblock the Notifications