ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ. 5, 6, 7ರಂದು ತಿಂಡಿಪೋತರ ಹಬ್ಬ, ಮಸ್ತ್ ಮಜಾ ಮಾಡಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 3: ಈ ವಾರಾಂತ್ಯ ಹೇಗೆ ಕಳೆಯೋದು ಎಂದು ಯೋಚನೆ ಮಾಡ್ತಿದ್ದೀರಾ? ಹಾಗಾದರೆ ಇದೇ ಶುಕ್ರವಾರದಿಂದ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್‌ ಗೆ ಭೇಟಿ ಕೊಟ್ಟು, ನಿಮಗಿಷ್ಟವಾದ ಆಹಾರ ಸವಿಯುತ್ತಾ, ಸಂಗೀತ ಮತ್ತು ನೃತ್ಯವನ್ನು ಆನಂದಿಸಬಹುದು.

ಕಲಾಪ್ರಿಯರು ಮತ್ತು ತಿಂಡಿಪೋತರಿಗೆ ಒಂದೇ ಸೂರಿನಡಿ ಮನತಣಿಸಲು ವೀಕ್ಷಣಾ ವೆಂಚರ್ ಸಂಸ್ಥೆ ತಿಂಡಿಪೋತರ ಹಬ್ಬವನ್ನು ಆಯೋಜಿಸಿದೆ. 'ತಿಂಡಿ ಪೋತರ ಹಬ್ಬಕ್ಕೆ' ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಚಾಲನೆ ನೀಡಲಿದ್ದು, ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಶರವಣ, ಸಂಸದ ಪಿ.ಸಿ.ಮೋಹನ್, ನಿವೃತ್ತ ಐ.ಪಿ.ಎಸ್ ಅಧಿಕಾರಿ ಶಂಕರ ಬಿದರಿ ಪಾಲ್ಗೊಳ್ಳಲಿದ್ದಾರೆ.

ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

ಅಕ್ಟೋಬರ್ 5 ರಿಂದ ಮೂರು ದಿನ ನಡೆಯುವ ಈ ಆಹಾರ ಮೇಳದಲ್ಲಿ ಆಹಾರ ಮನರಂಜನೆ ಕಿರುಚಿತ್ರ ಪ್ರದರ್ಶನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ.

Food festival in Bengaluru between October 5th to 7th

ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳಿದ್ದು, 1000ಕ್ಕೂ ಹೆಚ್ಚು ತಿಂಡಿ ಮತ್ತು ತಿನಿಸುಗಳು ಸಾಂಪ್ರದಾಯಿಕ ಆಹಾರ, ದಕ್ಷಿಣ ಭಾರತ, ಉತ್ತರ ಭಾರತದ ವಿವಿಧ ದೇಸಿ ಮತ್ತು ವಿದೇಶಿ ಆಹಾರಗಳು ಸೆಳೆಯಲು ಸಜ್ಜಾಗಿವೆ. ಪ್ರತಿಯೊಂದು ಮಳಿಗೆಯಲ್ಲಿ ವಿಭಿನ್ನವಾದ ಆಹಾರ ಪದಾರ್ಥಗಳು ದೊರೆಯುವುದು ಈ ಹಬ್ಬದ ವಿಶೇಷ.

ಸಾಂಸ್ಕೃತಿಕ ಕಾರ್ಯಕ್ರಮ:

ಡ್ರಮ್ಮರ್ ದೇವಾ, ವಯೋಲಿನ್ ವಾದಕ ವಿದ್ಯಾಶಂಕರ, ಇಂಡಿಯನ್ ಪ್ಯಾರಾ ಸ್ವಿಮ್ಮರ್ ಕೆ.ಎಸ್.ವಿಶ್ವಾಸ ಹಾಗೂ ಮಿಸ್ಟರ್ ಬ್ಯಾಲನ್ಸರ್ ಎಂದೇ ಖಾತರಾಗಿರುವ ನಿಶ್ಚಲ್ ನಾರಾಯಣ, ಡ್ರ್ಯಾಗನ್ ಡಾನ್ಸ್, ಪಂಜಾಬಿ ಭಾಂಗಡಾ ಸೇರಿದಂತೆ ಹಲವು ಮನರಂಜನೆ ಕಾರ್ಯಕ್ರಮಗಳು ಗ್ರಾಹಕ/ಪ್ರೇಕ್ಷಕರ ಮನಸೂರೆಗೊಳ್ಳಲಿವೆ.

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?

ಸಾಮಾಜಿಕ ಕಳಕಳಿವುಳ್ಳ 'ತಿಂಡಿ ಪಾತ್ರೆ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ದಿನ ಸಂಜೆ ಉಳಿಯುವ ಆಹಾರ ಪದಾರ್ಥಗಳನ್ನು ಅಲ್ಲಿ ಸಂಗ್ರಹಿಸಿಟ್ಟು, ಅಗತ್ಯವಿರುವವರಿಗೆ ಉಚಿತವಾಗಿ ಹಂಚಲಾಗುವುದು.

ನೋ ಫುಡ್ ವೇಸ್ಟೆಜ್ ಎಂಬ ಪರಿಕಲ್ಪನೆಯ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದ್ದು ಮೂರು ಅತ್ಯುತ್ತಮ ಕಿರು ಚಿತ್ರಗಳಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ, ಗೌರವವಿಸಲಾಗುವುದು.

English summary
Food festival and entertainment program organised by Veekshana venture in Bengaluru freedom park between October 5th to 7th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X