ಮಾರ್ಟ್‌ಗಳ ಮೇಲೂ ಆಹಾರ ಇಲಾಖೆ ದಾಳಿ: ಅಮ್ಮಾಸ್ ಪೇಸ್ಟ್ರೀಸ್‌ಗೆ ನೋಟೀಸ್
ಬೆಂಗಳೂರು ಮಾರ್ಚ್ 19: ನಗರದೆಲ್ಲೆಡೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಆಹಾರ ಮಾದರಿ ಪರಿಶೀಲನೆ ಮುಂದುವರೆಸಿದ್ದಾರೆ. ಅಸುರಕ್ಷತ ಆಹಾರಗಳ ಪತ್ತೆ ಕಾರ್ಯದಿಂದಾಗಿ ಜನ ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬೀಳುತ್ತಿವೆ. ಇಡ್ಲಿ, ಕಲ್ಲಂಗಡಿ, ಬೇಳೆಕಾಳುಗಳ ಬಳಿಕ ಆಹಾರ ಇಲಾಖೆ ಅಧಿಕಾರಿಗಳು ಮಾರ್ಟ್‌ಗಳ ಮೇಲೂ ದಾಳಿ ಮಾಡಿದ್ದಾರೆ.
ಹೌದು... ನಗರದ ಮಲ್ಲೇಶ್ವರಂನಲ್ಲಿ ಇರುವ ವಿವಿಧ ಮಾರ್ಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅವಧಿ ಮುಗಿದ ದಿನಸಿಗಳು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಅಡುಗೆ ಎಣ್ಣೆ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ.

ಅವಧಿ ಮುಗಿದ ಸಾಮಾಗ್ರಿಗಳಾದ ಮೊಟ್ಟೆ, ಬಗೆ ಬಗೆಯ ಸಾಸ್, ಉಪ್ಪಿನ ಕಾಯಿ, ಸ್ವೀಟ್ಸ್ ಪಾಕೇಟ್, ಕರಿದ ತಿಂಡಿಗಳು, ಪರೋಟಾ, ಸಮೋಸಾ, ಪನ್ನೀರ್, ಚಾಕಲೇಟ್ ಹೀಗೆ ಇತರ ದಿನಸಿಗಳ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಅಂಗಡಿ ಸಿಬ್ಬಂದಿಗಳಿಗೆ ಅವಧಿ ಮುಗಿದ ಸಾಮಾಗ್ರಿಗಳ ಮಾರಾಟ ಮಾಡದಂತೆ ಎಚ್ಚರಿಸಲಾಗಿದೆ.
ಸ್ವೀಟ್ಸ್ ಶಾಪ್‌ಗಳು, ರಸ್ತೆ ಬದಿ ತೆರೆದ ಅಂಗಡಿಗಳಲ್ಲಿ ಸ್ವೀಟ್ಸ್ ಮಾರುವ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇನ್ನೂ ಕೇಕ್ ಮಾರಾಟ ಬೇಕರಿಗಳಿಗೂ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಅಮ್ಮಾಸ್ ಕೇಕ್ ಹಾಗೂ ಸ್ವೀಟ್‌ಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಬಣ್ಣ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮಾನಿಫ್ಯಾಕ್ಸರ್ ಲೈಸೆನ್ಸ್ ಇಲ್ಲದ ಕಾರಣ ಅಮ್ಮಾಸ್ ಪೇಸ್ಟ್ರೀಸ್ ಗೆ ನೋಟೀಸ್ ನೀಡಲಾಗಿದೆ.

ಅಷ್ಟೇ ಅಲ್ಲ ಹೋಳಿಗೆ ಮನೆ, ಅನೇಕ ಉತ್ತರ ಕರ್ನಾಟಕದ ಆಹಾರ ಅಂಗಡಿಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಸ್ವಚ್ಚತೆ ಕಾಪಾಡಿಕೊಳ್ಳದ, ಪ್ಲಾಸ್ಟಿಕ್ ಬಳಕೆ ಮಾಡುವ ಹಾಗೂ ಲೈಸೆನ್ಸ್ ಇಲ್ಲದೆ ಅಂಗಡಿ ನಡೆಸುತ್ತಿರುವವರಿಗೆ ನೋಟಿಸ್ ನೀಡಿದ್ದಾರೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೇಕರಿ ಹಾಗೂ ವಿವಿಧ ಅಂಗಡಿಗಳಲ್ಲಿ ಬಗೆ ಬಗೆಯ ಸ್ವೀಟ್ಸ್ ಅನ್ನು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಅವಧಿ ಮೀರಿದ, ಅಸುರಕ್ಷಿತವಾದ ಆಹಾರ ಪದಾರ್ಥಗಳ ಮಾರಾಟ ಅಂಗಡಿ ಹಾಗೂ ಬೇಕರಿಗಳಲ್ಲಿ ಪರೀಶೀಲನೆ ಮಾಡಲಾಗಿದೆ. ಕೆಲ ಕಡೆ ಆಹಾರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಯಾವ ಆಹಾರ ಸೇವನೆಗೆ ಯೋಗ್ಯವಲ್ಲ ಎನ್ನುವುದು ತಿಳಿದು ಬರಲಿದೆ.
ಇಡ್ಲಿ ಸ್ಯಾಂಪರ್ ಪರೀಕ್ಷೆಯಲ್ಲಿ ಹಾನಿಕಾರ ಅಂಶ ಪತ್ತೆ
ರಾಜ್ಯ ಆರೋಗ್ಯ ಇಲಾಖೆಯು ಇತ್ತೀಚೆಗೆ ವಿವಿಧ ಕಡೆಯಿಂದ ಇಡ್ಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಸ್ಥಳಗಳಿಂದ 500 ಸ್ಯಾಂಪಲ್‌ಗಳ ಮಾದರಿಯನ್ನು ಪರಿಶೀಲಿಸಿದ್ದಾರೆ. ಇದರಲ್ಲಿ 35 ವರದಿಗಳು ನಾರ್ಮಲ್ ಎಂದು ಬಂದರೆ, ಹಲವು ವರದಿಯಲ್ಲಿ ಕಟು ಸತ್ಯ ಬಯಲಾಗಿದೆ.
ಇಡ್ಲಿ ಹಿಟ್ಟು ಪಾತ್ರೆಗೆ ಹಾಕಿ ಬಿಸಿ ಮಾಡಲು ಇಡುತ್ತೇವೆ. ಈ ವೇಳೆ ಅದರೊಂದಿಗೆ ಬಳಕೆ ಆಗುವ ಪ್ಲಾಸ್ಟಿಕ್ ಬೀಸಿಯಾದಾಗ ಹಾನಿಕಾರಕ ಅಂಶ ಹೊರ ಸೂಸುತ್ತದೆ. ಇದರಿಂದ ಕ್ಯಾನ್ಸರ್, ಹೃದಯಾಘಾತ, ಬಂಜೆತನದಂತ ಸಮಸ್ಯೆ ಬರುತ್ತದೆ ಹೇಳಲಾಗಿದೆ. ಇಡ್ಲಿ ಮಾಡುವ, ಬಡಿಸಿ ತಿನ್ನುವ ಯಾವ ಹಂತದಲ್ಲೂ ಸಹ ಪ್ಲಾಸ್ಟಿಕ್ ಬಳಕೆ ಮಾಡದಂತೆ, ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತದೆ. ಈ ಹಿಂದೆ ಗೋಬಿ ಮಂಚೂರಿ ರೆಡ್ ಕಲರ್ ಮೇಲೆ ಬ್ಯಾನ್ ಮಾಡಿದ್ದ ಸರ್ಕಾರ ಎರಡು ದಿನದಲ್ಲಿ ಇಡ್ಲಿಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದೆ.












Click it and Unblock the Notifications