ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಪ್ರಾರಂಭವಾಗಿ ಒಂದು ವಾರದ ನಂತರ ಫ್ಲೈಓವರ್ ಕ್ಲೋಸ್: ಸಂಚಾರರ ಕಳವಳ

|
Google Oneindia Kannada News

ಬೆಂಗಳೂರು ಆಗಸ್ಟ್ 22: ಪ್ರಾರಂಭವಾದ ಒಂದು ವಾರದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆಯನ್ನು ಮುಚ್ಚಿದೆ. ಭಾನುವಾರ, ಬಿಬಿಎಂಪಿಯು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಹೃದಯಭಾಗದಲ್ಲಿನ ಶಿವಾನಂದ ವೃತ್ತದಲ್ಲಿ ನಿರ್ಮಾಣಗೊಂಡಿರುವ ಉಕ್ಕಿನ ಮೇಲ್ಸೇತುವೆಯು ಬರೋಬ್ಬರಿ 5 ವರ್ಷಗಳ ಬಳಿಕ ವಾಹನ ಸಂಚಾರಕ್ಕೆ ಸೋಮವಾರದಿಂದ (ಆಗಸ್ಟ್ 15) ಮುಕ್ತವಾಗಿತ್ತು. ಅದೂ ಭಾಗಶಃ ರಸ್ತೆಯಲ್ಲಿ ಮಾತ್ರ. ಶೇಷಾದ್ರಿಪುರದಿಂದ ರೇಸ್‌ಕೋರ್ಸ್‌ ಕಡೆಗಿನ ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇನ್ನೊಂದು ಬದಿಯಲ್ಲಿ ಕಾಮಗಾರಿ ಮುಗಿದಿಲ್ಲ. ಶೇಷಾದ್ರಿಪುರ ಕಡೆಗಿನ ಡೌನ್‌ರಾರ‍ಯಂಪ್‌ ಬಳಿ ಕಲ್ವರ್ಟ್‌ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ, ಸ್ಪ್ಯಾಬ್‌ ಅಳವಡಿಕೆ, ಡಾಂಬರೀಕರಣ ಕಾಮಗಾರಿ ಪೂರ್ಣಕ್ಕೆ 10-15 ದಿನಗಳು ಬೇಕಾಗಲಿವೆ. ಆನಂತರಷ್ಟೇ ಪೂರ್ಣ ಮೇಲ್ಸೇತುವೆಯು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ ಶೇಷಾದ್ರಿಪುರದಿಂದ ರೇಸ್‌ಕೋರ್ಸ್‌ ಕಡೆಗಿನ ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಒಂದು ವಾರದಲ್ಲೇ ಮತ್ತೆ ಮುಚ್ಚಲಾಗಿದೆ.

BENGALURU: Flyover Closes a Week After Opening: Commuters Worried

ಶಿವಾನಂದ ವೃತ್ತದ ಬಳಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರವು 2017ರ ಜೂ. 24ರಂದು ಅನುಮೋದನೆ ನೀಡಿತು. ಜೂ. 30ರಂದು ಕಾಮಗಾರಿಯ ಗುತ್ತಿಗೆ ಪಡೆದಿದ್ದ ಎಂ.ವೆಂಕಟರಾವ್‌ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಲಾಗಿತ್ತು. ಮೊದಲಿಗೆ 19.85 ಕೋಟಿ ರೂ. ವೆಚ್ಚದಲ್ಲಿ 326.25 ಮೀಟರ್‌ ಉದ್ದದ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿತ್ತು.ಬಳಿಕ ಯೋಜನೆಯ ವಿನ್ಯಾಸ ಬದಲಿಸಿ, ಸೇತುವೆಯ ಉದ್ದವನ್ನು 492.94 ಮೀಟರ್‌ಗೆ ವಿಸ್ತರಿಸಿ, ವೆಚ್ಚವನ್ನು 39.54 ಕೋಟಿ ರೂ.ಗಳಿಗೆ ಏರಿಸಲಾಯಿತು. ಟೆಂಡರ್‌ ಷರತ್ತಿನಂತೆ 9 ತಿಂಗಳಲ್ಲಿ ಕೆಲಸ ಮುಗಿಯಬೇಕಿತ್ತು. ಆದರೆ, ಮೂಲ ವಿನ್ಯಾಸದಲ್ಲಿ ಬದಲಾವಣೆ, ಮೂಲಸೌಕರ್ಯ ಸ್ಥಳಾಂತರ, ಭೂಸ್ವಾಧೀನ ಸೇರಿದಂತೆ ನಾನಾ ಕಾರಣಗಳಿಂದಾಗಿ ಯೋಜನೆ ವಿಳಂಬವಾಯಿತು.

BENGALURU: Flyover Closes a Week After Opening: Commuters Worried

ಕೊನೆಗೂ ಉಕ್ಕಿನ ಮೇಲ್ಸೇತುವೆ ಕಾಮಗಾರಿಯು ಪೂರ್ಣಗೊಳ್ಳುವ ಹಂತ ತಲುಪಿತ್ತಾದರೂ ಸಂಚಾರಕ್ಕೆ ಅನುವು ಮಾಡಿಕೊಟ್ಟ ಒಂದು ವಾರದಲ್ಲೇ ಮತ್ತೆ ಬಂದ್ ಮಾಡಲಾಗಿದೆ. ಈ ಮೇಲ್ಸೇತುವೆಯಿಂದ ಶಿವಾನಂದ ವೃತ್ತದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್‌ಜಾಮ್‌ನ ನರಕವ್ಯೂಹದಿಂದ ಸವಾರರು ಮುಕ್ತಿ ಪಡೆದಿದ್ದರು. ಮೆಜೆಸ್ಟಿಕ್‌ ಕಡೆಯಿಂದ ಕುಮಾರಕೃಪಾ ರಸ್ತೆ ಮಾರ್ಗವಾಗಿ ಬಳ್ಳಾರಿ ರಸ್ತೆಕಡೆ ತೆರಳುವವರು, ಚಾಲುಕ್ಯ ವೃತ್ತದಿಂದ ಮಲ್ಲೇಶ್ವರ, ಶೇಷಾದ್ರಿಪುರ ಕಡೆಯಿಂದ ವಿಧಾನಸೌಧದ ಕಡೆ ಸಾಗುವವರು ದಟ್ಟಣೆಯ ಕಿರಿಕಿರಿ ಇಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದಾಗಿತ್ತು. ಬಿಬಿಎಂಪಿಯು ಫ್ಲೈಓವರ್‌ನ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Recommended Video

ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಸುದ್ದಿ||Govt gives loan of 5 lakhs if Aadhaar card is available||Oneindia

English summary
Brihat Bengaluru Mahanagara Palika (BBMP) has closed the steel flyover at Sivananda Circle, a week after its inauguration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X