• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ನೆನಪು ಬಿಚ್ಚಿಟ್ಟ ಗಾಯಕ ರಘು, ನಟಿ ರಶ್ಮಿಕಾ

By Mahesh
|

ಬೆಂಗಳೂರು, ಜುಲೈ 12: ಗಾಯಕ ರಘು ದೀಕ್ಷಿತ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಬೆಂಗಳೂರಿನೊಂದಿಗಿನ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬದಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವವರನ್ನು ಆ ಬಗ್ಗೆ ಕೇಳಬೇಕು. ನಗರದ ಬಗ್ಗೆ ಮಾತನಾಡುವ ಅವರ ಮಾತಿನಲ್ಲಿ ಗತ ಕಾಲದ ಸ್ಮರಣೆಯಿರುತ್ತದೆ.

ರಂಗಭೂಮಿ ಪ್ರೀತಿ ಬೆಳೆಸಿದ್ದು ಬೆಂಗಳೂರು: ಶ್ರದ್ಧಾ ಶ್ರೀನಾಥ್

ನಗರದ ಈ ಬದಲಾವಣೆಯನ್ನು ಅವರು ಸ್ವಾಗತಿಸಿದ್ದಾರೆ. #FlirtWithYourCity ಅಭಿಯಾನದಲ್ಲಿ ಬೆಂಗಳೂರು ನಗರದ ಬಗ್ಗೆ ಈ ಇಬ್ಬರು ಖ್ಯಾತನಾಮರು ಸಂಭಾಷಣೆ ನಡೆಸುವಾಗ ನಗರದ ಬದಲಾವಣೆಯೊಂದಿಗೆ ಹೇಗೆ ಫ್ಲರ್ಟ್ ಮಾಡಿದ್ದಾರೆ ಎಂಬುದನ್ನು ನಾವು ತಿಳಿಯೋಣ.

ಗಾಯಕ ರಘು ದೀಕ್ಷಿತ್ ನೆನಪುಗಳನ್ನು ಹಂಚಿಕೊಳ್ಳುತ್ತಾ, "ನಾವು ಬೆಂಗಳೂರಿಗೆ ಬಂದಂದಿನಿಂದ ಅಂದರೆ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಕೃಷ್ಣ ರಾಜೇಂದ್ರ ಹೂವಿನ ಮಾರುಕಟ್ಟೆಯಲ್ಲಿ ಮಾರಾಟಗಾರರ ಮಧ್ಯ ಕುಳಿತಿದ್ದೇವೆ.

ಕಳೆದ ಹಲವಾರು ವರ್ಷಗಳಿಂದ ಅದೆಷ್ಟೋ ಜನ ಬಂದು ನೆಲೆಸಿದ್ದಾರೆ. ನನ್ನ ಪ್ರಕಾರ ಇಲ್ಲಿನ ಹೂವುಗಳು ನಗರವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತವೆ.

ಕತ್ರೀನಾಳಿಗೆ ಬೆಂಗಳೂರಿನ ದೋಸೆ, ಫಿಲ್ಟರ್ ಕಾಫಿ ಇಷ್ಟವಂತೆ!

ನಗರ ಬಿಇಎಲ್ ರಸ್ತೆಯಲ್ಲಿರುವ ರಾಮಯ್ಯ ಕಾಲೇಜಿನಲ್ಲಿ ಪದವಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ, ಆ ರಸ್ತೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುತ್ತಾ, "2014ರಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ನನ್ನ ಕುಟುಂಬ ನನ್ನ ಬಗ್ಗೆ ಭೀತಿಯಿಂದಿತ್ತು. ಹಿಂದೆ ಈ ಪ್ರದೇಶ ಅಭಿವೃದ್ಧಿಯಿಂದ ದೂರ ಉಳಿದಿತ್ತು. ಹೀಗಾಗಿ ಜನ ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದರು.

ಕಾಲ ಕಳೆದಂತೆ ಬೆಂಗಳೂರು ನಗರ ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಸುರಕ್ಷಿತ ನಗರವಾಗಿ ಬದಲಾಗಿದೆ. ರಾತ್ರಿ ವೇಳೆಯೂ ಹೆಣ್ಣುಮಕ್ಕಳು ಭೀತಿಯಿಲ್ಲದೆ ಓಡಾಡುವುದೇ ಇದಕ್ಕೆ ಸಾಕ್ಷಿ. ಇಲ್ಲಿ ಜೀವಿಸುವುದು ನಿಜಕ್ಕೂ ಹೆಮ್ಮೆ!" ಎಂದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In the last couple of years, Bangalore has changed a lot;one should ask those who have been living here since long. There is a sense of nostalgia attached to their words whenever they talk about the city. But they have welcomed the change in the city too. While conversing with these two celebs about Bangalore and how have they flirted with the change in the city,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more