ಮಕ್ಕಳ ಆರೈಕೆ ಕೇಂದ್ರಗಳತ್ತ ಚಿತ್ತ ನೆಟ್ಟಿರುವ ಫ್ಲಿಪ್ ಕಾರ್ಟ್
ಬೆಂಗಳೂರು, ಜುಲೈ, 14 : ಆನ್ ಲೈನ್‌ನಲ್ಲಿ ಬುಕ್ ಮಾಡಿದ ವಸ್ತುಗಳನ್ನು ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾ ಇ-ವ್ಯಾಪಾರದಲ್ಲಿ ಮುಂಚೂಣಿ ಸಾಧಿಸಿರುವ ಫ್ಲಿಪ್ ಕಾರ್ಟ್ ಸಂಸ್ಥೆ ಇದೀಗ ಸಮಾಜ ಕಾರ್ಯದತ್ತ ಮುಖ ಮಾಡಿದೆ.
ಅದೆಂದರೆ.....ನಮಗಿರುವುದೊಂದೇ ಮನೆಯೂ ಅದೊಂದೇ ಅನಾಥ ಆಲಯವೂ' ಎಂದು ದಿನಂಪ್ರತಿ ಕೊರಗುವ ಅನಾಥ ಮಕ್ಕಳಿಗೆ ನಮ್ಮ ದೇಶದಲ್ಲಿ ಕೊರತೆ ಇಲ್ಲ. ಇವರ ನೋವರಿತ ಫ್ಲಿಪ್ ಕಾರ್ಟ್ ಸಂಸ್ಥೆ ಈಗ ಮಕ್ಕಳಿಗೆ ತಂದೆ ತಾಯಿ ಭಾಗ್ಯ ಕರುಣಿಸಲಿದೆ. ಜೊತೆಗೆ ದತ್ತು ಮಕ್ಕಳನ್ನು ಸ್ವೀಕರಿಸುವ ತನ್ನ ಉದ್ಯೋಗಿಗಳಿಗೆ ವಿಶೇಷ ಸೌಲಭ್ಯವನ್ನು ನೀಡಲು ಮುಂದಾಗಿದೆ.[ಜುಲೈ ತಿಂಗಳ ಆಫರ್ ಮಿಸ್ ಮಾಡ್ಕೋಬೇಡಿ]

ದತ್ತು ಮಕ್ಕಳನ್ನು ಪಡೆಯುವ ಪೋಷಕರ ಸಂಖ್ಯೆಯಲ್ಲಿ ಹೆಚ್ಚಳ ಸಾಧಿಸುವ ಸಲುವಾಗಿ ಹೊಸ ನಿಯಮವನ್ನು ಫ್ಲಿಪ್ ಕಾರ್ಟ್ ಜಾರಿಗೆ ತಂದಿದ್ದು ಅನಾಥ, ದೀನ ಮಕ್ಕಳಿಗೆ ನೆಲೆ ಕಲ್ಪಿಸಿಕೊಡುವತ್ತ ತನ್ನ ಚಿತ್ತ ನೆಟ್ಟಿದೆ. ಇನ್ನು ಮುಂದೆ ದತ್ತು ಮಕ್ಕಳ ತಾಯಿಯಂದಿರಿಗೆ 6 ತಿಂಗಳ ಸಂಬಳ ಸಹಿತ ರಜೆ, ತಂದೆಯಂದಿರಿಗೆ 6 ವಾರಗಳ ಸಂಬಳ ಸಹಿತ ರಜೆ, ಜೊತೆಗೆ 50,000 ಭತ್ಯೆ, ಕೆಲಸದ ಅವಧಿಯಲ್ಲಿ ಸಡಿಲತೆ ಸೇರಿದಂತೆ ಹಲವು ವಿಭಿನ್ನ ಸೌಲಭ್ಯ ಪಡೆಯಲಿದ್ದಾರೆ ಎಂದು ಫ್ಲಿಪ್ ಕಾರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ 6 ವರ್ಷ ಮೇಲ್ಪಟ್ಟ ಮಕ್ಕಳನ್ನು ಸಲಹುತ್ತಿರುವ ಹಲವು ಮಕ್ಕಳ ಆರೈಕೆ ಕೇಂದ್ರಗಳೊಂದಿಗೆ ಎಲ್ಲಾ ಮಾತುಕತೆಗಳನ್ನು ಮುಗಿಸಲಾಗಿದ್ದು, ಸುಮಾರು 1,368 ಮಕ್ಕಳು ತಂದೆ ತಾಯಿ ಮಡಿಲನ್ನು ಸೇರಿಕೊಳ್ಳಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications