"ಛಂದ ಪುಸ್ತಕ"ದಿಂದ ಐದು ಪುಸ್ತಕಗಳ ಬಿಡುಗಡೆ

ಬೆಂಗಳೂರು, ಆಗಸ್ಟ್ 29: ಛಂದ ಪುಸ್ತಕ ಪ್ರಕಾಶನವು ಈ ಬಾರಿ ಐದು ಪುಸ್ತಕಗಳನ್ನು ಓದುಗರಿಗಾಗಿ ಅರ್ಪಿಸುತ್ತಿದೆ. ಮೂರು ಕಾದಂಬರಿಗಳು, ಒಂದು ಕಥಾ ಸಂಕಲನ ಹಾಗೂ ಒಂದು ಅನುವಾದವನ್ನು ಓದುಗರಿಗಾಗಿ ಬಿಡುಗಡೆಗೊಳಿಸುತ್ತಿದೆ.

ಕರ್ಕಿ ಕೃಷ್ಣಮೂರ್ತಿಯವರ ಕಾದಂಬರಿ "ಚುಕ್ಕಿ ಬೆಳಕಿನ ಜಾಡು" (200 ರೂ), ಹರೀಶ ಹಾಗಲವಾಡಿಯವರ ಕಾದಂಬರಿ "ಋಷ್ಯಶೃಂಗ" (125 ರೂ), ಪ್ರಕಾಶ್ ನಾಯಕ್ ಅವರ ಕಾದಂಬರಿ "ಅಂತು" (200 ರೂ) ಹಾಗೂ ಎಸ್. ಸುರೇಂದ್ರನಾಥ್ ಅವರ ಕಥಾಸಂಕಲನ "ಬಂಡಲ್ ಕತೆಗಳು" (140 ರೂ) ಪುಸ್ತಕಗಳನ್ನು ಪರಿಚಯಿಸಲಾಗಿದೆ. ಸಮಂತ್ ಸುಬ್ರಮಣಿಯನ್ ಅವರ "ಫಾಲೋಯಿಂಗ್ ಫಿಶ್" (220 ರೂ) ಎನ್ನುವ ವಿಶೇಷ ಕೃತಿಯನ್ನು ಸಹನಾ ಹೆಗಡೆ ಅನುವಾದಿಸಿದ್ದು, ಈ ಪುಸ್ತಕವೂ ಲಭ್ಯವಿದೆ.

Five New Books Released By Chanda Pustaka

ಈ ಎಲ್ಲಾ ಪುಸ್ತಕಗಳು ಸೆಪ್ಟೆಂಬರ್ 1 ರಿಂದ ಪ್ರಮುಖ ಅಂಗಡಿಯಲ್ಲಿ ಲಭ್ಯವಿರಲಿದೆ. ಅಂಚೆಯ ಮೂಲಕವೂ ತರಿಸಿಕೊಳ್ಳಲು ಅವಕಾಶವಿದೆ. ಅಂಚೆಯ ಮೂಲಕ ತರಿಸಿಕೊಳ್ಳಲು, ರಘುವೀರ್‌ -99459 39436 ಅವರ ವಾಟ್ಸಾಪಿಗೆ ನಿಮ್ಮ ವಿಳಾಸವನ್ನು ತಿಳಿಸಬಹುದಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಛಂದ ಪುಸ್ತಕ ಬಹುಮಾನಿತ ಕೃತಿಯೂ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+