ಬಿಜೆಪಿಯ ರಾಮ್‌ನಾಯ್ಕ್ ಉತ್ತರ ಪ್ರದೇಶದ ರಾಜ್ಯಪಾಲ
ನವದೆಹಲಿ, ಜು.14: ಮಾಜಿ ಕೇಂದ್ರ ಪೆಟ್ರೋಲಿಯಂ ಸಚಿವ, ಬಿಜೆಪಿಯ ಹಿರಿಯ ನಾಯಕ ರಾಮ್‌ನಾಯ್ಕ್ ಉತ್ತರಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
ಕೇಂದ್ರದ ಎನ್‌ಡಿಎ ಸರ್ಕಾರ ಸೋಮವಾರ ಉತ್ತರ ಪ್ರದೇಶ, ಛತ್ತೀಸ್‌ಘಡ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ನಾಗಾಲ್ಯಾಂಡ್‌ಗೆ ಐವರು ಬಿಜಿಪಿಯ ಹಿರಿಯ ನಾಯಕರನ್ನು ಹೊಸ ರಾಜ್ಯಪಾಲರನ್ನಾಗಿ ನೇಮಕ ಮಾಡಿದೆ.
ಉತ್ತರಪ್ರದೇಶದ ಮಾಜಿ ಸ್ಪೀಕರ್ ಕೇಸ್ರಿನಾಥ್ ತ್ರಿಪಾಠಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ. ದೆಹಲಿ ನಾಯಕ ಓಂ ಪ್ರಕಾಶ್ ಕೊಹ್ಲಿ ಗುಜರಾತ್‌ಗೆ ನೇಮಕವಾಗಿದ್ದರೆ, ಪಂಜಾಬಿನ ಬಲರಾಮ್ ದಾಸ್ ಟಂಡನ್ ಛತ್ತೀಸ್‌ಘಡ್ ರಾಜ್ಯ ಪಾಲರಾಗಿ ನೇಮಕಗೊಳಿಸಲಾಗಿದೆ.[ಗುಜರಾತ್ ರಾಜ್ಯಪಾಲೆ ಮಿಜೋರಾಂಗೆ ವರ್ಗಾವಣೆ]

ಪದ್ಮನಾಭ ಬಾಲಕೃಷ್ಣ ಆಚಾರ್ಯ ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಕವಾಗಿದ್ದು, ಇವರಿಗೆ ಹೆಚ್ಚುವರಿಯಾಗಿ ತ್ರಿಪುರಾ ರಾಜ್ಯದ ಹೊಣೆಯನ್ನು ನೀಡಲಾಗಿದೆ.
ಕರ್ನಾಟಕಕ್ಕೆ ರಾಜ್ಯಪಾಲ ಯಾರು?
ಹಂಸರಾಜ್ ಭಾರದ್ವಾಜ್ ಅವರ ನಿವೃತ್ತಿಯಿಂದ ತೆರವಾಗಿರುವ ಕರ್ನಾಟಕ ರಾಜ್ಯಪಾಲರ ಹುದ್ದೆಗೆ ದೇಶದ ಪ್ರಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ನೇಮಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ. ಹೊಸ ರಾಜ್ಯಪಾಲರ ಆಯ್ಕೆ ಆಗುವ ತನಕ ತಮಿಳುನಾಡು ರಾಜ್ಯಪಾಲರಾದ ಕೆ.ರೋಸಯ್ಯ ಅವರಿಗೆ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.












Click it and Unblock the Notifications